- 42 - ಚ೦ ದಂ-ಇದೆನ್ನ ಮನೆಯಾದೊಡುಂ ನಿನ್ನೊಡನೆ ಪವಡಿಸುವ ಇವಳ ಮೊದಲ್ ನಿನ್ನನುಜೆಯಾದವಳತ್ತೆ? ಈ ಕೃತಿಮೆ-ಆಸಂದೆಗಮ ಎನಗವಶ್ಯಂ, ಒಳ್ಳಿತಾಯ್ತು; ಈ ನಿನ್ನ ಸಿರೆ ಎನ್ನೊಡನೆ ಪವಡಿಸಲ್ ಬೇಡಂ, ಕಾಲಗತಿಯಿಂ ಏನಾನುಂ ದೋಷ ಬರ ಬಳಿಯಂ ರಾಧೆಗ ಪೊರಲಾರದಪವಾದಂ. ಚ೦ದ೦-ಹುಂ ಅಪವಾದಮೆಲ್ಲ ಮಿರ್ಕೆ, ನೀನಿನ್ನಾನಂ ಆಗಳಾ ನೆಂದ ಮಾತಿನ ಮಚ್ಚರದ ಪಿಡಿಯಂ ಪಿಡಿದು ಈ ನುಡಿಗತಿಯಿಂ ಎನ್ನ ಕುತ್ತದಿ, ರಾತ್ರಿಯಂ ಮೀರಿತು. ಕೃತ್ರಿಮೆ-ಅಕ್ಕೆ, ನಿನ್ನರಸಿಗೇನಾನುಂ ದುರ್ಯೊಚನೆಯಂಕುರಿ ಸಿದೊಡೆ, ಕಡೆಗೆ ಎನ್ನಂ ಜರೆಯದಿರ್, ಕಿವಿಯಂ ಚಿವುಂಟಿಕೊಳ್, ಪೇಳಿ ರ್ಪೆ೦ ಎಚ್ಚರವಿರ್ಕೆ, ಚಂದಂ-ನಿನಗೇಂ ಮರುಳುಂ ಪಿಡಿಯಿತೆ ? ಪೋ ಬಂದುದಂ ಕಾಣೋಂ, ನಿದ್ದೆಗೆಟ್ಟಿದೆ ಎನಗೆ ಪಿತ್ತಮೇರ್ಗುಂ, (ಎಂದು ತಾನೊಂದೆಡೆಗೆ ನಿದ್ರಿಸಲೆಂದು ಪೋದು) ಕೃತಿಮೆ- ಮನದೋಳ್, ನಿನಗೆ ಪಿತ್ತವಿಗಳೆ ಏರಿರ್ಕುಂ, ಅಲ್ಲದೊಡೆನ್ನ ಮಾತಿನ ಪೊಲಬನೆ ತಿಳಿಯದೆ ಪೆಂಡತಿಯನೆನಗೊಪ್ಪಿಸೆಯ ಓ ಬಿದಿಯೆ ! ಮಂಕನ ಕೈಗೆ ಮಾಣಿಕಮನಿತ್ತಂತೆವೋಲ್ ಈ ಕುರೂ ಪಿಗೆ, ರತಿಸುಂದರಿಯನೀಕೆಯಂ ಗಂಟಿಕ್ಕಿದ ನಿನ್ನಂ ಜಡಜಭವನೆಂದು, ಬಣ್ಣಿಪ ಕಬ್ಬಿಗನಾಶಯಂ ನಿರರ್ಥಮಾಗದು, (ಎಂದು ಚಂದ್ರಾವಳಿಯೊ ಡನೆ ಶಯ್ಯಾಗೃಹಮನಲಂಕರಿಸಲೆಂದು ಪೋದಂ) ಆಃ ! ಆ ಸಜ್ಜೆ ವನೆಯಂ ಬಣ್ಣಿಪುದೆಂತು? ವಾತಾಯನದೊಳೊಲ್ ಪೊಕ್ಕ ತನ್ನ ಕೆಳೆಯನಪ್ಪ ಮಂದಮಾರುತನೊಳ್, ಶ್ರೀಕೃಷ್ಣನ ಮೈಮೆ ಯನಾರ್ಗು೦ ಬಣ್ಣಿಸಲಸಾಧ್ಯ ಎಂದು ಶಿರಃಕಂಪನದಿಂ ತಿಳಿಸುವಂತೆವೋಲ್ ಪೆರ್ಜೋಡರೊಲೆಯುತಿರ್ದುದು.
ಪುಟ:ಚಂದ್ರಾವಳಿ ವಿಲಾಸಂ.djvu/೫೩
ಗೋಚರ