ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 47 - ದಿರ್ಕುಂ, ಅದರಿಂ ನಿದ್ರಿಪೆನಿದೇ ಉತ್ತರಂ (ಎಂದು ಆಕೆಯ ತೊಡೆಯೊಳ್ ತಲೆಯಿಟ್ಟು ಪವಡಿಸಿದಳ್) | ಒಡನಾಚಂದ್ರಾವಳಿ-(ಎಂತಾನುಂ ತೋರದೊದೆ ಬಿಡೆನೆಂದು ಅವ ಇಂ ಪಿಡಿದು ಸೆಳೆದು ಎಬ್ಬಿಸಿ ಅಚ್ಚರಿಯಂ ತಾಳು,) ಓ ಎನ್ನಕ್ಕ! ಇದೇಂ ನಿನ್ನ ಮೆದುಮ್ಮೆ ಈಗಲ್ ಪುರುಷರ ಮೆಯ್ಯಂತೆ ಕಲ್ಲೆ ಪಾಸಾಟಿಯಾ ಗಿರ್ಕುಂ? ಕೃತ್ರಿ ಮೆ-ಆಂ ಪೇಳ್ ನಲ್ಲಿ ಶ್ರೀ ಕೃಷ್ಣಂಗುಮನಗುಂ ಇನಿತುಂ ಭೇದವಿಲ್ಲೆಂದು, ಅದರಿo ಈಗಲ್ ಗಂಡುಮೆಯಾಗಿರ್ಕುಂ, ಚ೦ದ್ರಾ-ನಿನ್ನ ಪುಣ್ಯಮನೇನೆಂಬೆಂ! ಆನಾದೊಡೆ 'ಅಂಗೈ ಯೋಳ್ ಬಂದ ಪಾಲಂ ಮುಂಗೈಯ್ಯೋಳ್ ನೂಂಕಿದಂತೆ” ತಾನಾಗಿ ಬಂದ ಆ ಮೈಮನಂ, ಎನ್ನ ದುರದೃಷ್ಟದಿನುಂ ಪಲವುಂ ಪೆಣ್ಣಳಿರ್ಪರೆಂಬ ಲಜ್ಜೆ ಹನುಂ, ಅತಿಗಳೆದೆಂ; ಅದನಿನ್ನೆಂದು ಫಲಮೇಂ? “ಕಡಿದ ನೀರ್ ಕಟ್ಟಕ ಬರ್ಪುದೆ?” ಪಲವೇಕೆ? ಎನ್ನೊಳ್ ನಿನಗಾಸೆಯಿರ್ದೊಡೆ ಆ ತಾವರೆಗಣ್ಣ ಮನದಿನಿಯನಂ ತೋರ (ಎಂದು ಕಾಲ್ವಿಡಿದಳ್). ಒಡನಾಚರಣದೊಳ್ ಕಮಲವಜ್ರರೇಖೆಗಳಂ ಕಂಡು ಭ್ರಮೆಗೊಂಡು ಮೇಲೆ ನೋಳ್ಳುದುಂ, ಸುಲಿಪಲ್ಲ, ಕಿರುನಗೆಯ, ತಾವರೆಮೊಗದ, ನಿಡು ವುರ್ದಿನ, ಮರಕತಮಣಿ ಮಾಲೆಯ, ನವಮೋಹನಾಂಗನಂ, ಭಕ್ತಜನಾಭೀ ಷ್ಟದಾಯಕನಂ, ಶ್ರೀ ಕೃಷ್ಣನಂ, ಕಂಡಳ್, ಆ ಸಮಯದೊಳ್ ಚಂದ್ರಾ ವಳಿಯ ಮನಮಂತಿರ್ಪುದೆಂದು ಬಣ್ಣಿಸಲ್ ಮನಕಲ್ಲದೆ ನಾಲಗೆಗರಿಯದು ಒಡನೆ ಲಜ್ಜೆಯಿಂ ಕಣ್ಮುರ್ಚಿ ಅರೆನಿವಸದೊಳ್ ಅರೆಗಷ್ಟೊಳ್ ಈಕ್ಷಿಸು ದುಂ ರಾಧೆಯ ರೂಪಮೆ ಗೋಚರಿಸೆ, (ಬೆರಗಿ೦) ಎಲೆಲೆ ಅಕ್ಕ: ನೀನೀ ಗಳ ಕಣ್ಣಟ್ಟಿನ ಮಾಯೆಯಂ ಕರ್ಪೆ ನಿನಗೇನನ್ನ ತಂಗೆಯಂ