ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

← 49 - ಕೃಷ್ಣಂ-ಆಯ್ತು, ಆನಪರಾಧಿ; ಇನ್ನೆನಗೆ ನಿನ್ನ ತೊಡಂಕೇ ಬೇಡಂ. ಚಂದ್ರಾ- (ನಸುನಕ್ಕು) ಅಪರಾಧಿಯಾದುದರಿo ಇನ್ನಾಂ ಪೇಳ್ತಂತೆಯೆ ನಡೆಯಲೈಳ್ಳುಂ, ಈಗಲ್ ನಿನ್ನಂ ಬಿಡುವೆನೆಂದೆಣಿಸಿರ್ಪೆಯ? ಹುಂ ಅಕ್ಕಕ್ಕುಂ-ಮಾಡಿದುದಂ ತಿನಳ್ಳುಂ. ಕೃಷ್ಣಂ-ಸಾಲ್ದುಂ ಸಾಲ್ದುಂ ನಿನ್ನ ಬೆಡಂಗುಗಳ್, ಆ೦ ಪೂರ್ವಾ ವಸ್ಥೆಯಂ ತಳೆವೆಂ. ಚಂದ್ರಾ-(ಆ ನುಡಿಗೇಳು, ಮೇಲ್ನೋಡೆ, ಮುಗುಳ್ಳಗೆಯಿನಿ ತುಮಿಲ್ಲದ ಶ್ರೀಕೃಷ್ಣನ ಮೊಗಂ, ತನ್ನ ಬಿಟ್ಟ ಪನೋ ಎಂಬ ಸಂದೆ ಗಮಂ ಮಾಡೆ, ಭೀತಿಯಿಂ ಕಣ್ಣೀರ್ ಸುರಿಯೆ, ಕೃಷ್ಣನಂ ಬಿಗಿವಿಡಿದು.)

  • ಎಲೆ ಮನದನ್ನ! ಸರ್ವಜ್ಞನಾಗಿಯುಂ ನಂಬಿರ್ದಳಂ ಅಬಲೆಯಂ ಇಂತೆಲ್ಲಂ ಕರಗಿಪುದೊಪ್ಪಿ ತಮ? ಎಂತುಂ ಎನ್ನಂ ಬಿಟ್ಟು, ನೀಂ ಪೂರ್ವಾ ವಸ್ಥೆಯಂ ಪೊರ್ದುವೆಯಾದೊಡೆ, ಎನಗಂತ್ಯಾವಸ್ಥೆಯಂ ಕೈಗೊಳಿಸು.”

- ಎಂದು ಗದ್ದ ದಸ್ವರದಿ ಕೇಳಿಸಿ ತಲೆಯಂ ಬಾಗಿಸಿದಳ, ತಡೆ ತಡೆದಾಡುವ ನಿಡುಸುಯ್ದೆಂದುಕೇಳುತಿರ್ದುದು; ಆಗಲ್ ಶ್ರೀಕಾಂತನ ಮನಮುಂ ತೆಳುದು. ಭಾರತಿ-ಎನ್ನರಸ! ಏನಾಕೃಷ್ಣನ ಕಲ್ಮನಮುಂ ನೀರಾಯ್ಕೆ? ಅಬ್ಬಾ! ಪುರುಷರ ಮನಂ ಪರುಷಮೆನಲ್ಕೆ, ಪುರುಷೋತ್ತಮನ ಮನಂ ಪರುಷೋತ್ತಮಮೆಂದೊಡೇಂ ಪಿರಿದೆ? ಕಬ್ಬಿಗಂ-(ನಸುಮುನಿಸಂ (ನಟಿಸಿ) ನೀಂ ಕಾಯಂ ಕೇಳ್ವ ಇಲ್ಲಂ; ಎಂತಾನುಂ ಗಂಡರ್‌ ದುಟ್ಟರ್‌ ಸೆಣ್ಣ ಒಳ್ಳಿದರ್, ಎಂಬ ಸಿದ್ದಾಂತಮಾಗಳುಮತ್ತೆ? ಭಾರತಿ-ಕೋಪಿಸದಿರ್, ಪುರುಷರ್ ದುಟ್ಟರೆಂಬ ಎಣಿಕೆಯಿಂ