– 54 - ಏನೋ ಕಡೆಗುಡಿಗಳಂ ಪೊತ್ತಿಸಲ್ ಬಂದಿರ್ಪನೆಂದೆಣಿಸಿ ಇದಿರೈದಿ ಕಾಲ್ಲೆ ರಗಿ ಕರತಂದು ಗದ್ದುಗೆಯನೇರಿಸಿ ಸತ್ಕಾರಂಗೆಯ್ಯುದುಂ, ನಾರದಂ- ಓ, ನಂದ, ನಿನ್ನ ಮನ್ನಣೆಗಳೆ ಆ೦ ಮೆಚ್ಚಿದಂ, ಹರಿಸಮಾಯ್ತು; ಏಂ ಊರೊಳೆತ್ತಲುಂ ಕುಶಲವೆ? ಅಂತುಮಲ್ಲದೆ ಕೃಷ್ಣನ ಮಕ್ಕಳಾಟಿಕೆ, ಗಡುವಂ ದಾಂಟದೆ ಒಂದು ನೆಲೆಯೊಳ್ ಈಗಳಾ ದೊಡುಂ ನಿಂತಿರ್ಕುಮ? ನಂದಂ- ಮೌನೀಶ್ವರನೆ, ನಿನ್ನ ಕರುಣಾಮೃತಧಾರಾಸೇಚನದಿಂ ಊರೊಳೆಲ್ಲಂ ಕಲ್ಯಾಣಮೆ, ಕೃಷ್ಣಂಗಾದೊಡೆ ಜೀವರತ್ನವೆಂಬಂತೆ ವೊಲ್ ರಾಧೆಯೆಂಬೊರ್ವಳ್ ಒದವಿರ್ಪಲ್; ಈಗಳವನ ಮಯ್ಯ ಆಕೆಯ ಬಸಮಿರ್ಕು೦, ಅದರಿಂ, ಊರೂರು ತಿರುಗಿ, ಮನೆಮನೆಗಳಂ ಪೊಕ್ಕು, ಎನಗೆ ಪೆಸರಂತರ್ಪ ತೊಡಂಕೊಂದಿಲ್ಲ, ಆ ಕಾರಣದಿನಾನುಂ, ಎಂತಾನು ಮಕ್ಕೆ, ಎಂದು ಬರಿದೆ ಇರ್ಪೆ೦, ನಾರದಂ-ಆ ನುಡಿಯ ಕೇಳು ಒಡನೆಯೆ ಗಹಗಹಿಸಿ ನಕ್ಕು ಎಂತುಂ ಸೈಸದೆ ಮತ್ತೆ ಮುಂ ನಗುತಿರ್ದಂ, ನಂದಂ-ಕೇಳ್ಳೆ ವಿರಿಂಚಾತ್ಯಜ, ಶಿಷ್ಯನನನ್ನಂ, ಇವರಿಯಿಂ ಪರಿಹಾಸ್ಯಂ ಗೆಯ್ಯುದೆ? ಎನ್ನೋಳ್, ಏನಾನುಂ ಕುಂದಿರ್ದೊಡೆ ಬಿರ್ಚಿ ಪೇಳಿ ಅದಂ ನಿವಾರಿಪುದು ನಿನ್ನಂತಿರ್ಪಗುರುಗಳ ಕರ್ತವ್ಯಮ? ನಾರದಂ- ಎಲೆನಂದ, ಪೇಳಲೆಂದೇ ಬಂದೆಂ, ಆದೊಡೆ ಕುರು ಡಂ, ಆನೆಯ ಬಣ್ಣಿಸಿದಂತೆ ನೀಂ ಕೃಷ್ಣನ ಈಗಳಿನ ಅವಸ್ಥೆಯಂ ಪೇಳು ದರ್ಕೆ, ಸುಳಿಗಾಳಿಯಂತೆ, ಸೈಸಲಸಾಧ್ಯವಾದ ನಗೆಯೊಂದು, ಹೃದ ಯಾಬ್ಬ ದತ್ತಣಿಂ, ತಿರನೆ ತಿರುಗಿ ಮೇಲೆರ್ದುದಲ್ಲದೆ, ನಿನ್ನ ಹಾಸ್ಯಂ ಗೆಯ್ದು ದಲ್ಲಂ. ನಂದಂ- ಸರ್ವಜ್ಞನೆ, ಅಂತಾದೊಡೆ ಕೃಷ್ಣನ ಈಗಳಿನ ಅವಸ್ಥೆ ಯೋ ಅದೇಂ ಬಿಸೇಸಂ?
ಪುಟ:ಚಂದ್ರಾವಳಿ ವಿಲಾಸಂ.djvu/೬೫
ಗೋಚರ