57 - ಯ್ಯುತಿರ್ದಂ, ಇಂತಿರಲೊಂದುದಿನಂ ಯವಂ, ನಿದ್ರಾಂಗನೆಯ ಬೆಡಂಗಿಗೆ ಮರುಳಾಗಿ, ತನ್ನರಸಿಯಂ ಕರಡಿಗೆಯೊಳ್ ಮುರ್ಚಿ ಇಡಲ್ ಮರೆತು, ಮೆಯ್ಯನುಂ ಮರೆತಂ, ಆಗಳ, ಮೋಹಿನಿ, “ಅಬ್ಬಾ! ಕಟ್ಟದ ಉಸಿರ್ ಬಿಟ್ಟಂತಾಯ್ತು” ಎಂದೆಣಿಸಿ, ಮುಂದೆ ತನಗೆ ಮರುಳಾಗಿಯೇ ಎಂಬ ವೊಲ್, ಸೊಡರೊಳ್ ನಲಿನಲಿವ ಅಗ್ನಿಗೆ ಬಾಯೆಂದು ಸನ್ನೆಗೆಯುಳ್. (ಪಣೇ ಕರೆವಾಗಳೂ ಪುರುಷನ ಬಗೆಯದೆಂತಿರ್ಕು೦? ಮೇಣೇಂ, ತಾನೇ ಸರ್ವಗುಣಸಂಪನ್ನಂ ಸ್ಮರಸುಂದರನೆಂದಿರ್ಕು೦) ಆ...! ಅಜ್ಞಾನಾಂಧಕಾರಂ ತನ್ನನುಂ ಮುತ್ತೆ, ಆ ಶಿಖಿ ಸ್ವರೂಪದೊಡನಿವಳ ಮೋಹಕೆ ಪಕ್ಕಾದಂ. ಅಂತಿರಲ್, ಅರೆಚಣದೊಳ್ ಎಳ್ಳರಮಾಗಲ್, ಮುಂದಣ ಅವಸ್ಥೆಯಂ ಕಂಡಾ ಕಾಲಂ, ರೋಷಾವೇಷದಿಂ ಅವುಂಕಿ, ಮೋಹಿನಿಯನಾ ಕರಡಿಗೆ ಯೋಳ್ ನುರ್ಗಿಸಿ, ಬಾಯಂ ಬಲಿದಂ; ಆಗಲ್ ಕೋಪದ ಅಸವಸದೊಳ್ ಮುಂಗಾಣದೆ, ಮೋಹಿನಿಯೊಡನಗ್ನಿಯುಂ ಪೊಕ್ಕುದನರಿತನಿಲ್ಲ೦ ಬಳಿಯಂ ಯಮುಂ “ಆಃ! ಪೆಣ್ಣಳ ಉಪಾಯಮೆ!! ಎನ್ನಂ ಕಣ್ಣ ಟ್ವದ ಈ ಜಾತಿಯ ಬಲೆಯಿಂ ನೆಲದೊಳ್ ಮನುಜರೆಂತು ಬಾಳ !!! ಒರ್ವನೊಳ್ ಮಾತು, ಪೆರನೊ ಕಡೆಗಣ್ಣು, ಅನ್ನಿಗನೊಳ್ ಮೇಳಂ, ಈ ಪರಿಯಿಂದಿರ್ಪಳಂ ಬೊಮ್ಮನೇಕೆ ಪಡೆದನೊ? ಮಣೆನಗೇಕೆ ಗಂಟಕ್ಕಿದನೊ? ಒರ್ಮೆಗೆ ಈಕೆಯಂ ಮನೆಯಿಂ ಪೊರಡಿಸಿದೊಡೆ, ಮೇಲಕ ಉಗುಳೋದೆ ಮೊಗಕೆಯೇ ಬೀಳ್ತಂತೆ, ಲೋಕದೊಳೆಲ್ಲಂ ಇವಳ ದುರ್ವ್ಯ ಮೈಯ ಬಿಸಯಂ ಪಸರಿಸಿ, ಬಳಿಯಂ ಎನ್ನ ಮೋರೆಗೆ ಮಂಗಳಮುಕ್ಕು, 'ಏಕಜಾ! ಈ ಯಮರಾಜಂಗುಂ ಈ ಯವಸ್ಥೆ ಯ!!” ಎಂದು ಪರಿ ಪರಿಯಿಂ ಚಿಂತಿಸುತೆಂತಾನುಂ ಇರುಳಂ ಕಳೆದಂ. ತದನಂತರ, ಮರುದಿನದೊಳ್ ಪ್ರದೋಷೋತ್ಸವಕೆಂದು, ದಿಕ್ಕಾಲ ಶೆಲ್ಲರುಂ ಕೈಲಾಸಕ್ಕೆ ದುತಿರಲ್, ಉಪಾಯವಿಲ್ಲದೆ, ತಾನುಂ ಪೋದಂ, ಅಂತಾರಜತಾದ್ರಿಯೊಳ್, ಉತ್ಸವಾಂತ್ಯದೊಳ್, ಸರ್ವವೇದಿಯಪ್ಪ ಷಣ್ಮು 0, ಎಲ್ಲರ್ಗು೦ ತಾಂಬೂಲಮಂ ನೀಡುತಂದು, ಕಾಲನಂ ಕಂಡು,
ಪುಟ:ಚಂದ್ರಾವಳಿ ವಿಲಾಸಂ.djvu/೬೮
ಗೋಚರ