ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 62 - ರಾಧೆ-ಅದೆಂತು?” ಚಂದಂ-“ಎಚ್ಚರವಿಲ್ಲದನನೆಬ್ಬಿಸಿದೊಡುಂ, ಎಚ್ಚರಮಿರ್ದನನೆ 'ಬೈಪುದಸಾಧ್ಯವಾದಂತೆ, ತಿಳಿದುಂ ತಿಳಿಯೆನೆಂಬರ್ಗೆ ತಿಳಿಸಲ್ ಭಗೀರಥ -ಪ್ರಯತ್ನ ಮುಂ ನಿಪ್ಪಲಮಕ್ಕುಂ.” ರಾಧೆ--ನಿನ್ನ ನುಡಿಯಂ ಕೇಳ್ತದೆ, ಕಣ್ಣಂ ಕಟ್ಟ ಕಾಡಿನೊಳ್ ಬಿಟ್ಟಂತಕ್ಕುಂ; ಏಂ ಬಿರ್ಚಿ ಪೇಳಲಾಗದೆ?” - ಚಂದಂ-“ನೀನೆಮ್ಮ ಮನೆಗೆಯ್ತಂದುದುಂ, ಎನ್ನೊಳೇನೋ ಕೋ ಪಿಸಿ, ಬಳಿಯಂ ಸಂತಂಗೊಂಡುದುಂ, ಆವುದ್ದದಿರುಳೊಳ್ ಎಮ್ಮಿಲ್ಲೋಲ್ `ಇರ್ದುದುಂ, ಮರುದಿನಂ ಪೋಪಾಗಳ್, ನಕ್ಕು 'ಓ ಚಂದ! ಇದೊ ನಿನ್ನ ಹೆಂಡತಿ ನಿನ್ನ ಬಸಮಿನ್ನು' ಎಂದೆನ್ನೊಳ್ ನಗುನುಡಿಯನುಸಿರ್ದು ದುಂ, ಒಂದು ನೆನಂಬರಿಕೆಯಿಲ್ಲ ದಳೊಳ್ ಪೇಳ್ವುದೇಂ?” ರಾಧೆ-(ಆ ನುಡಿಗೇಳು ಕೃಷ್ಣನ ಕೆಲಸವೆಂದೇ ಭಾವಿಸಿ ನಕ್ಕು) ಎಲೆ ಚಂದ! ಆ೦ ಬಂದುದಿಲ್ಲ, ಮೇಣೇಂ? ನೀಂ ಪೆಂಡತಿಯನಾವನ ಭಯದಿಂದಡಂಗಿಸಿದೆಯೊ, ಆ ಮಾಯಾವಿಯೆ ನಿನ್ನ ಕಣ್ಣ ಮಣ್ಣಂ ಬಿರ್ಕಿ ದಂ - ಚಂದಂ-ರೋಷಾವೇಷದಿಂ “ಏಂ ಕೃಷ್ಣಂ” ಎಂದು ತಟಕ್ಕನೆ ಒಳಗೆಯ್ದು ಚಂದ್ರಾವಳಿಯಂ ಜಡಿದುಂ ಸೆಳೆದುಮಬ್ಬರಿಸಿ “ಎಲೆಮನೆಯ ಮಾರಿ! ಮೊನ್ನೆ ನಿನ್ನಕ್ಕನ ರೂಪಮಂ ತಳೆದು ಬಂದವನದಾರ್‌? ನಿಜಮಂ ಪೇಳ್, ಅಲ್ಲದೊಡೆ ಜೀವಮನೆ ಪಿಂಡುವೆಂ” ಎಂದು ತಟ್ಟಿ ಪುದುಂ. ಚಂದ್ರಾ-ಎಲೆನಲ್ಲ! ಇದೇನೀಪರಿಯಿಂ ತಿಳಿಯದರಂತೆ ನುಡಿ ವುದು! ನೀನೆನ್ನಂ ಪಂಜರದ ಗಿಳಿಯಂತೆ ಪೊರೆವುತಿರಲ್, ಅನ್ಯರ್ಗೆ ದಾರಿ ಯದೆಂತು? ನೀವೆಲ್ಲರುಂ ಆಕೆಯಂ ಕಂಡುಂ ನುಡಿದುಮೀರ್ಪಿರ? ಪ್ರತ್ಯಕ್ಷಕೆ ಇನ್ನೇಂ ಪ್ರಮಾಣಂ?”