ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 64 - ಮೋಹಾನಾಂಗನಂ ಇನ್ನೆವರಮುಸಿರಲೆ ಏಂ ನಾಲಗೆ ಇಳಿದಿರ್ದುದೆ? ಅE ಅಃ!! ಆನಾಕೃಷ್ಣನುಪಟಳದಿನೆ ನಿನಗೆಂದು ಇನಿತುಂ ದೂರಂ ಮನೆಗೆಯ್ದು ದೆಲ್ಲಂ ನೀರಿನ ಹೋಮಮಾಯ್ತು; ನೀನೆನ್ನೊಳೆ ಪೇಳು ಬಲ್ಲೂರದಿ ತರಿಸಿ ಸೀತಾದಿಪತಿವ್ರತಾಚರಿತಪುಸ್ತಕಂಗಳನೋದುತಿರ್ದುದು, ಬೆಕ್ಕಿನ ವ್ರತಮಾಯ್ತು; ಮೇಣೇಂ ಜೀವಮಿರ್ದಂತೆ ಕೊಂದೆ; ನಾಲ್ವರೆಡೆಯೊಳ್ ಮೊಗವೆತ್ತದಂತೆವೊಲ್ ಮಾಡಿದೆ; ಲೋಕದೊಳಿನ್ನಾರುಂ ಅನುಗುಣ ಮಿರದ ದಾಂಪತ್ಯಂಗೆಯ್ಯುದಂ ಎಮ್ಮಂ ನೋಡಿ ಬಿಡುಗೆ (ಆಗಳ್ ಚಂದ್ರಾ ವಳಿಯ ಅಣ್ವರಂ “ಹುಂ ಹುಂ” ಎಂಬ ನೆವದಿಂ ಈ ನುಡಿಯೊಂದು ನಿಜ ಮೆಂದು ಸೂಚಿಸುತಿರ್ದುದು) ಹುಂ ಇನ್ನೇನಾಸೆ? ನಿನ್ನಂ ಕೊಲೈನಾನುಂ ಅಸುಂಗಳೆವಂ” (ಎಂದು ಪರಿಪರಿಯಿಂ ಹಿಂಸೆಗೆಯ್ದ°.) ಚಂದ್ರಾ-“ಓ ಅತ್ತೆ! ನೀಮೇ ಆಕೃತ್ರಿಮುರಾಧೆಯಂ ಆ ದಿನಂ ಪೋಗಲ್ವಡದೆ, ಈಗಲೀಪರಿಯ ಭಂಗಕುಂ ಸಹಾಯಂಗೆಯ್ಯುದೆ?' ನೀನುಂ ಅತ್ತೆಯೆದೆಯೊಳಿರ್ದವರಾಗಿ, ತಾಯ್ತಂದೆವರಂ ಬಿಟ್ಟು ನಿಮ್ಮನೆ ನಂಬಿ ಬಂದವಳೆ ಈ ಗತಿಯಂ ಒದಗಿಪುದೇಂ ನೀತಿಯೆ? ಸುಮುಖಿ-(ಆ ನುಡಿಗೇಳು ದುರ್ಮುಖಿಯಾಗಿ) “ಚಿಃ ಸಾ ಲ್ಲುಂ, ನಿನ್ನ ನಾಲಗೆ ಇನಿತುಂ ನೀಳಮಿರ್ಕುಮೆ? ಬಾಯ್ದಿಡದಿರ್. ಅಂತವಂ ಪುರುಷನಾದೊಡೆ, ಕರೆದು ತಿಳಿಸಲೇನಾಯ್ತು? ತನ್ನಿಚ್ಛೆಯಿಂ ನಲಿದು, ಏನುಮರಿಯದ ಎನ್ನೊಳ್ ಅಪವಾದರೋಪಣೆಯೆ? ಹುಂ “ನಾಯಿ ಕೂಗಿದೊಡೆ ದೇವಲೋಕಂ ಪಾಳಕ್ಕುಮೆ?” ಆನೇಂ ಅತ್ತೆಯೊಳಗಿರ್ದೊದೆ ನಿನ್ನಂತೆ ದುರ್ವತ್ತಿಯ ಎಣಿಕೆಯನಾದೊಡಂ ಗೈದವಳೆ? ಪೆರ್ಚೆ ಸ್ವತಂತ್ರದ ಸೆಣ್ಣಳಾರುಂ ಏಟ್ಟೆ ಯೊಂದಿದುದಿಲ್ಲ, ಹುಂ ಹುಂ ಮಾಡಿದ ಕರ್ಮಮಂ ಉಣಲ್ವೆಳ್ಳುಂ.” - ಚಂದಂ-ಆ ನುಡಿಗೇಳು, ಮರುಳಂಗೆ ಕಳುಡಿದಂತಾಗೆ ಕಣೋ ರೆಯಿಲ್ಲದೆ ಬಡಿಯಲಾರಂಭಿಸಿದಂ,