ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 65 - ರಾಧೆ-(ಒಡಲುರಿದು, “ಎಲೆ ಚಂದ! ಮಾರಿದ ಹಸುವಿನ ಬೆನ್ನಂ ತಿರ್ದುವಂತೆ, ಈಕೆಯ ಬಿಸಯದೊಳಾಂ ನುಡಿವುದು ತಕ್ಕುದಲ್ಲಂ; ಆದೊ ಡುಂ ಲೋಕದ ಮಾತನೆಂಬೆ--ನೀನುಮೊರ್ವ ಸಂಸಾರಿಯಾಗಿ ಪೆರರ ಪೆಣ್ಮಕ್ಕಳನಿಂತು ಬನ್ನಂಬಡಿಪುದು ಒಳ್ಳಿತಲ್ಲಂ ಕಣಾ, ತಾಯ್ತಂದೆವಿರ ಮನಮದೆನಿತ್ತುರಿವುದೊ? ಅದರಿo “ಕೋಪಮೆ ಪಾಪಂ” ಎಂದರಿತು ಒರ್ಮೆಗೆ ಸೈಸಿ ಬುದ್ದಿ ವೇಳ್, ಆನುಂ ಪೇಳ್ವೆಂ.” ಚಂದಂ-“ಹುಂ, ನೀಂ ಬುದ್ದಿ ವೇಳ್ವುದೆ ತಾನೀಗಳ ಅವಶ್ಯಂ “ನಾಗಂಗೆ ಕೈಮುಗಿದೊಡೆ ತನ್ನಂತೆಯೆ ಆಗೆಂಬುದು ಗಡ” ಅಂತೆ ನಿನ್ನಾ ಜ್ಞಾನುಸಾರಿಣಿಯುವಾದೊಡೆ, ಬಳಿಯವಿಕೆಯ ಗತಿಯಂ ಕೇಳು ದೇಂ? ಏಂ ನಿಮ್ಮ ತಾಯ್ತಂದೆವಿರ ಮನಮುರಿವೊಡೆ, ದುರ್ವತ್ತಿಯಂ ತಿಳಿ ದುಂ ಬರಿದೆ ಇರಲೈಳ್ಳುಮೆಂದು, ಈಕೆಯನೆನಗಿತ್ತ‌? ಅದಿರ್ಕೆ, ಉರಿಗೊ ಧೈಯೊಳ್ ಬೂದಿಯಂತೆ ನೀನುದಿಸಿ ಅತ್ತೆಯ ಕುಲವತಿವೆಸರಂ ನಿರ್ಣಾ ಮಂಗೈದಿರಿಂ.” - ಸುಮುಖಿ-ಚಂದ! ಆ ನುಡಿಯಂತೆ ಪೋಕೆ, ಈ ಕ್ಷೀರಸಾಗರ ಭಟ್ಟನ ಮನೆಯೊಳ್ ಮಜ್ಜಿಗೆಗೇ ಸೊನ್ನೆ” ಎಂಬಂತೆವೋಲ್ ಹೆಸರಿಂದೇಂ? ನಿನ್ನ ಕುಲವತಿಯಂದವೆಲ್ಲ ವನರಿವೆ, ಮಾಳ್ಳುದೇಂ? “ಮರನೋಡಿ ಬಳ್ಳಿ ಕುಲನೋಡಿ ಪೆನ್” ಎಂಬ ನುಡಿಯೊಂದು ಮರೆತುದು, ಚ೦ ದಂ-ಅಪ್ಪುದಪ್ಪುದು, ಹುಂ ಇರ್ಕೆ- ಬಿಸಂ ಮುಟ್ಟಿದ ಬೆರಲನೆ ಕಡಿವಂತೆ ಈಕೆಯನೀಚಣಮೆ ಅಗ್ನಿಗೆ ಸಮರ್ಪಿಸಿ ಪರಿಶುದ್ಧ ನಪ್ಪ, (ಎಂದು ಕಟ್ಟಿಗೆಗಳನೆಟ್ಟಿಸಿ ಬೆಂಕಿಯಂ ಪತ್ತಿಸಿ ಸುಡುವೆನೆಂದು ಚಂದ್ರಾವಳಿಯಂ ಸೆಳೆದುಕೊಂಡುವೋದ..) ಆಗ ಆ ಕೊಳಾಹಳಮನೇನೆಂಬೆಂ! ಚಂದ್ರಾ--ಹಾ, ಬಿದಿದೆ! ಅಬಲೆಗೆನಗೆ ಈ ಯವತೆಯನೊದವಿಪು ದರಿo ಪೆರ್ಬುಲಿಯ ಚಾಯ್ತಾ ದೊಡುಂ ಕಟ್ಟುವುದೊಳ್ಳಿತಿರ್ದುದು, ಓ