- 69 - ನಾರದನಂ ಕಂಡಾಮಾಧವಂ, ರತ್ನಾಸನದಿಂದೆಂತಂತೆವೊಲ್ ಕಾಷ್ಟಾಂತ ರದಿಂ ರಾಧಾಚಂದ್ರಾವಳಿಯರೊಡನಿಳಿದು, ವಂದಿಸೆ “ಗೋವಿಂದ” ಎಂದು ಇನಿಸುಂತೊಲಗಿ ಪೊಡಮಟ್ಟ ಆ ರುಮಿಯಂ ತೆಗೆದಪ್ಪಿ, ಬಳಿಯಂ ಬೀಣೆ ಯಂ ಬಾಜಿಸದೆ, ಮನದೊಳೆ ಹರಿಸ್ಮರಣೆಗೈವುತೆ ಕೈವೆರಲನೆಣಿಪನೊಳಾ ವಾಸುದೇವಂ-ಇದೇಂ ಕೊಂಡೆವೇಳುದು ಎನಿತ್ತಾದುದೆಂದು ಲೆಕ್ಕಂ ಗೆಯ್ಯುದೆ?” ನಾರದಂ-(ನಕ್ಕು) ಇದೀಗಳ “ತಾಂಕಳ್ಳನಾದೊಡೆ ಪೆರರಂ ನಂಬಂ” ಎಂಬುದರ್ಕೆ ದೃಷ್ಟಾಂತಂ, ಹರಿಸ್ಮರಣೆಯಂ ಮಾಳೋ ಈ ನಾಲಗೆ ಇನ್ನೆವರಂ ಪುಸಿಯುಸಿರ್ದುದಿಲ್ಲ ಎಂದು ಕಾಯಿಸಿದ ಗುಂಡನಾದೊಡುಂ ಪಿಡಿವಂ, ಸತ್ಯಮನೆಂದೊಡುಂ ಪಿಸುಣಾಡಿದಂತಾಯ್ತ? ಆ ನುಡಿಯಂತೆ ಪೋಕೆ, ತಪೋನಿಧಿಗಳಂತೆಲ್ಲಂ ದುರ್ಮಾರ್ಗದೊಳಡಿಯಿಡರ್. ಕೃಷ್ಣ ೦-(ನಗುತೆ) ಓ ತಪೋನಿಧಿಯೆ! ನಿನ್ನ ತಪದ ಬಿ ಯಂ ಪೆನ್ನೊಳ್ ತೋರಿ ಸಾರ್ಥಕಂಗೆಯ್ದೆಯ? ಮಾಮೈಮಂ, ಪುನೀ ತಂ, ಪುಣ್ಯವಂತಂ, ಎನಿಸುಂ ಪೊಗಳ್ಕೊಡುಂ ನಿನ್ನ ಗುಣದ ಕುಡಿ, ಆ ಹನೂಮಂತನ ಬಾಲದ ಕುಡಿಯೆ ನಿಜಂ, ಬಲ್ ಬಲ್. ನಾರದಂ- ಏo! ತಪದ ಬಿಯಂ ಜಿಣೋಳ್ ತೋರ್ದೆನೆ? ಇಂತುಸಿರಲ್ ನಿನಗೆ ನಾಲಗೆವಂದುದೆ! ಆ೦ ಮನೋವಾಕ್ಕಾಯಂಗ ಲೊಳುಂ ಪಣ್ಣ ಳೊಳ್ ಕವಲೆಣಿಸಿದುದಿಲ್ಲ೦, ಹುಂ ತನ್ನನೆ ಪಳುಕಿನ ಕನ್ನಡಿಯೊಳುಂ ಕಾಣ್ಣಂತೆ ನಿನಗೆ ಸೆರರೊಳುಂ ತನ್ನ ವಸ್ಸೆಯೆ ಕಾಣ್ಣು; ಇರ್ಕೆ, ಎನ್ನೊಳದೇಂ ತಪ್ಪಿತಂ? ಕೃ ಷ್ಣಂ-ಪರಿಹಾಸ್ಯಂ ಸಾಲ್ದು, ಪ್ರಯೋಜನವಿಲ್ಲದೆ ಅಪ್ಪ ನೆಡೆಗೈದಿ ಏನೇನೋ ಬಿತ್ತರಿಸಿ ಅಬಲೆಗೆ ಈಯವಸ್ಥೆಯನೊದವಿಸಿದುದೇ. ತಪ್ಪಿತಂ. ನಾರದಂ-ವ್ರತಿಗಳ ಸ್ವಪ್ರಯೋಜನಕಾರ್ಯಮಂ ಮಾಳ್ಳರ ಲೈಂಬುದಂ ನೀನಿನ್ನು ಮರಿಯೆಯ?
ಪುಟ:ಚಂದ್ರಾವಳಿ ವಿಲಾಸಂ.djvu/೮೦
ಗೋಚರ