ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 74 - ನಾರದಂ-ನೀನೇ ನಿದಾನವಾಗಿ ಪ್ರಶ್ನಂಗೈವುದೆ? ಕೃಷ್ಣಂ-ಅದಾನೆಂತು ನಿದಾನಂ? ನಾರದಂ-ಪೆಂಡತಿಯಪ್ಪ ಚಂದ್ರಾವಳಿಯನಿವಂ ಬನ್ನಂಬಡಿಸಿದ ಕಾರಣದಿಂ. ಕೃಷ್ಣ೦-ಓ ಅರಿತೆನರಿತಂ, ಗಂಡವೆಂಡಿರೆನೆ ಅನ್ನೋನ್ಯಪ್ರೇಮ ದಿಂ ಒಳಾರಿಯೋಳ್ ನಡೆಯಲಿಪ್ಪವರ್, ಅಂತಿರೆ ಪೆಂಡತಿಯನರ್ಧಾಂಗಿ ಯಂ ಶಿಕ್ಷಿಸಲ್ ಗಂಡನೆಂತು ಸಮರ್ಥ೦? ಅನುಚಿತ ಕೃತ್ಯಮಂಗೈದುದರಿನ ಇಂತು ಬೆದರಲ್ ಕಾರಣವಾಯ್ತು. - ನಾರದಂ-(ನಕ್ಕು) ಅಂತಾದೊಡೆ ಪೆಂಡತಿಯಂ ಶಿಕ್ಷಿಸಲು ಮಾಗದು; ಅವಳಂ ಸನ್ಮಾರ್ಗದೊಳ್ ನಡೆಯಿಸಲ್ ತಾನಶಕ್ತನಾದೊಡೆ, ಆಕೆಯ ಸ್ವಚ್ಛಾ ವೃತ್ತಿಯಂ ಕಂಡುಂ ಕಂಡುಂ ಆಗಂಡಂ ಷಂಡನಂತೆ ಕಣ್‌ಕಣ್ ಬಿಡುವುದೊ? ಪ್ರಾಣಂ ಬಿಡುವುದೊ? ಕೃಷ್ಣಂ-ಅದರ್ಕೆಯೆ ಪೇಳ್ತಂ, ಸಮಾನರೂಪಾದಿಗುಣಮುಳ್ಳ. ರ್ಗೆಯ ಬಾಂಧವ್ಯಂಗೈಯಲ್ಲೋಳ್ಳುಮೆಂದು, ಅನಿತರೊಳ್ ಚಂದನ ಮೊಗದಿಂ “ಸಹಸ್ರಾಪರಾಧಂ ಕ್ಷಮಸ್ವ” ವಿಂಬೊಂದು ವಾಕ್ಯಂ ಪೊರಟುದು, ಕೃಷ್ಣಂ-ಚಂದ! ನಿನ್ನೊಳೆನಗೇನುಂ ಕೊಪಮಿಲ್ಲ೦; ಆದೊರೆ ಎನ್ನ ಶರಣರ ಕಷ್ಟ ಸುಖಂಗಳೆರಡುಮೆನ್ನನ ಪೊರ್ದುಗುಂ, ಅದರಿ ಒರ್ಮೆಗೆ ಇಂತೆಲ್ಲಂ ಗಲಬೆಗೆಡೆಯಾಯ್ತು, ಚಂದಂ-ದೇವ! ಜಗತ್ಪತಿಯೇ ನೀನಾಗಿರಲ್ ಎಮ್ಮನ್ನರಪ್ಪ ತೃಣಪ್ರಾಯರ್ಗೆ ಈ ಪರಿಯೊಳ್ ಭಕ್ತರಂ ಪೀಡಿಸ ಬುದ್ಧಿಯನಿತ್ತುಂ ಎನ್ನೊಳೆ ಮುನಿಸಾದೊಡೆ ಕಷ್ಟಂ.