– 75 - ಕೃಷ್ಣ೦-(ನಸುನಕ್ಕು) ಸಂದೆಯದೊಪ್ಪಿತಂ (ಎಂದು ನಾರದಂಗೆ ಸನ್ನೆ ಗೈಯೆ) ನಾರದಂ-ಚಂದ! ಇವಂ ವಿಶ್ವಾಧೀಶನಾದೊಡುಂ ಕೂಟಸ್ಥ ನಾಗಿರ್ಪ೦ ಜನರ ಸನ್ಮಾರ್ಗದೊಳ್ ವಿದ್ಯೆಯುಂ, ದುರ್ಮಾರ್ಗದೊಳ್ ಅವಿದ್ಯೆಯುಂ, ಎಂಬ ಮಾಯೆಯೇ ನಡೆಯಿಸುವಳ್, ಕಡೆಗೆ ನ್ಯಾಯ ಸ್ಥಾನದೊಳ್ ವಿಧಿಯಂ ವಿಧಿಸುವ ನ್ಯಾಯಾಧಿಕಾರಿಯಂತೆ ಮಾಡಿದ ಪುಣ್ಯಪಾಪಂಗಕ್ಕೆ ತಕ್ಕುದೆನಿಪ್ಪ ಫಲಮಾತ್ರಮಂ “ದೈವಂ ಮಾನುಷ ರೂಪೇಣ” ಎಂಬಂತೆ ಇಂತೊಂದೊಂದು ಅವಶಾರಂದಳೆದುಂ ಪಲವುಂ ಪರಿಯಿನುಂ ಕೈಗೊಳಿಸುವಂ. ಕೃಷ್ಣ೦-ಈ ನಾರದಂಗೇನುಂ ಕೆಲಸವಿಲ್ಲ೦, ಎಂತೆಂತೋ ಪೊಗಳ್ಳಂ, ಹುಂ, ಮುನಿವಚನಮನತಿಗಳೆವುದೇಕೆ? ಅದಿರ್ಕೆ, ದೈವದೊ ಲೈಯಿಂ ಸುಜ್ಞಾನಿಯಾದೆ, ನೀನಿನ್ನು ಭಾರ್ಯಾಯುತನಾಗಿಯೆ ಬಾಳಮ್, ತದನಂತರಂ, ನಾರದಂ ಕೃಷ್ಣನಾಜ್ಞೆಯಂ ತಳೆದು ಚಂದಾದ್ಯರಂ ಪರಸಿ ತಳರ್ದb ಶ್ರೀ ಕೃಷ್ಣನುಂ, ಒಡನೈತರ್ಪೆನೆಂದು ಅಳುವ ಚಂದ್ರಾವಳಿಯ ಬಾಷ್ಪಶ್ರುವನೊರಸಿ, “ಎಲೆ ಹೆಣ್ಮಣಿ! ಚಲವಿಡಿಯದಿರ್ ನಿನ್ನಂ ಕರೆ ದೊಯ್ದು ಶರಣನಪ್ಪ ಚಂದಂಗೆ ಮನಃಸ್ಟೇಷಮಂ ಗೈವುದೇನೆನಗೊಪ್ಪಿ ತಂ? ನಿನ್ನರಸನೀಗಲ್ ಪರಮಜ್ಞಾನಿಯಾಗಿರ್ಪ೦; ಒರ್ಮೆಗೆ ಭಿನ್ನಾಶ ಯಮಂ ತಳೆದಿದೆ ಎನ್ನಂ ನೆನೆ, ಪಲವೇಂ? ನಿನಗಾವುದರ್ಕು೦ ತೊಡ ರಿಲ್ಲದಂತೆ ಅಭೀಷ್ಟಮಂ ಕೈಗೊಳಿಸುವಂ” ಎಂದಾಕೆಯನೆಂತಾನುಂ ಸಂತ ಯಿಸಿ, ಚಂದಾದಿಗಳಂ ಬುದ್ದಿ ವೇಳು ಮನ್ನಿಸಿ ರಾಧೆಯೊಡನಲ್ಲಿಂ ಗೋಕು ಲಕೈದಿದಂ, ಅನಿತರೊಳಾ ದೂತರೈದಿ ಕೃಷ್ಣನನೆತ್ತಲುಂ ಕಾಣದೆ, ರಾಧೆಯೆಂದು. ದನೆಲ್ಲಂ ನಂದನೊಳ್ ಬಿತ್ತರಿಸಿದರ್.
ಪುಟ:ಚಂದ್ರಾವಳಿ ವಿಲಾಸಂ.djvu/೮೬
ಗೋಚರ