-- 83 → ಕಬ್ಬಿಗಂ-ಇದೇಕೀಪರಿಯ ಪರಿಹಾಸ್ಯಂ? ಕತೆಯೊಳ್ ಸವಿಯಿ ರ್ದೊಡಿ ಕೇಳಲ್ಯಾಸೆ? ಭಾರತಿ-ಏಂ ಸವಿಯಿಲ್ಲವೆ? ಕಡಲೊಳ್ ನೀರಿಲ್ಲ ದೊದೆ ನಿನ್ನ ಕತೆಯೊಳ್ ಸವಿಯುಮಿಲ್ಲಮೆಂದಕ್ಕುಂ. ಕಬ್ಬಿಗಂ-ಅಂತಾದೊಡೆ ಕಡಲ ಜಲದಂತೆ ಕತೆಯೊಳುಂ ಪುರು ಳಲ್ಲಿ ? ಭಾರತಿ-ಅದರ್ಕಂ ಸಂದೆಯಂ? ಕಬ್ಬಿಗಂ-(ನಕ್ಕು) ಆದೊಡೆ ಸಾಗರವಾರಿಯಂತೆ ಕತೆಯೊಳ್ ಸವಿಯುಪ್ಪು, (ನಕ್ಕು) ಹುಂ ಒಳ್ಳಿತನುಸಿರ್ದ “ಲವಣಂ ಬಲವರ್ಧನಂ' ಎಂಬರಿ ಪಿರಿಯರ್. ಭಾರತಿ-ಇಸ್ಸಿ ಇದೇತರ ನುಡಿ? ಆ೦ ಕವಲೆಣಿಸದೆ ಅಂಬುಧಿ ಜಲದಂತೆ ಕತೆಯೊಳ್ ಸವಿದುಂಬಿರ್ಕುಮೆಂದೊಡೆ, ಹೆಣ್ಣಿನ ಮಾತಿನೊಳುಂ ಇತರಾರ್ಥಮಂ ಪುಡುಕಿ ನಾಡ ಕಬ್ಬಿಗರ ಲಚ್ಚಣಮಂ ಪೊಳೆಯಿಪ ನಿನ್ನಂದಕೇನೆಂಬೆನೋ! ಕಬ್ಬಿಗಂ-ಆ ನುಡಿಯಿರ್ಕ, ಎಂತಿರ್ದೊಡುಂ ಈಗಲೀಕನ್ನಡಮಂ ನೋಳ್ವರ್ಗೆ ಪೆರ್ಚು೦ ಕಟ್ಟೋವ? ಅಂತುಮಲ್ಲದೆ ಶಯ್ಕೆಯ ಪಳೆ ಗನ್ನಡವಾಸೆಯಾಗಿರಲ್ ಇದಂ ನೋಡಲಾರ್ ಒಳವುಗುವರ್? ಸವಿಯಿ ರ್ದೊಡು ಮಂತರಿವರ್? ಭಾರತಿ-ಅಂತೆಣಿಸದಿರ್, ಬಾಸೆಗಳೆಲ್ಲವುಂ ಆಂತರ್ಯಸಾರಮಂ ಪೊರಡಿಸುವ ನಲ್ಲಾರಿಗಳಾಗಿರಲ್ ಕನ್ನಡಮಾದೊಡದೇಂ ಕುಂದು? ಮೇಣುಂ ಶಯ್ಕೆಯ ಪಳೆಗನ್ನಡಮುಮಾಗಿರಲ್ “ಪಳೆಗೈ ಪಾಕಂ ಪೊಸಗೆ ಪೋಕಂ” ಎಂಬ ನಾಣ್ಣುಡಿಯಂತೆ ವೊಲ್ ಒಳ್ಳಿದರಾದವರ್ ನೋಡಿ ಮುದ ಮಾನದಿರಂ, ತಲೆದಿರುಗಲ್ ಊರೇ ತಿರುಗುವುದೆಂಬಂತೆ ದುಟ್ಟರೇನಂ
ಪುಟ:ಚಂದ್ರಾವಳಿ ವಿಲಾಸಂ.djvu/೯೪
ಗೋಚರ