ಪುಟ:ಚತುರ್ಥಾಂಶಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೨೪] ಚತುರ್ಥಾ ೦ಶ ೫೧೭ ಚಂದ್ರಸೂರ್ಯವಂಶದೊಳುದಿಸಿದಂಥ ಮಹಾಬಲರಾದ ಮಹಾವೀರರಾದ ಅನಂತಧನಕನಕವಸ್ತುವಾಹನಾದಿ ಸಂಪದವನಂತವರಾದ ವಕ್ತೊತ್ರ ಜನನಿಬಿಡಪಪ ಪರಿಹರಣಚರಿತರಾದ ಇಕ್ಷಾಕು ಜಹ್ನು ಮಾಂಧಾತ್ರ ಸಗರ ಅವಿಕ್ಷಿತ ಬೃಗು ಯಯಾತಿ ನಹುಷ ಮೊದಲಾದ ಮಹಾರಾಯರ ಪುಣ್ಯಕಥೆಯನು ಅವರ ನಿಷ್ಠೆಯನು ಚೆನ್ನಾಗಿ ಏಕಮನಸ್ಕನಾಗಿ ಕೇಳಿದ ಹೇಳಿದ ಮನುಜಂಗೆ ಅನಿತ್ಯವಾದ ಪುತ್ರದಾರಾದಿಗಳಲ್ಲಿಯ ಗೃಹಕ್ಷೇತ್ರ ದ್ರವ್ಯಾದಿ ವಸ್ತುಗಳಲ್ಲಿಯ ಮಮತೆಯಿಲ್ಲದ ಸುಬುದ್ದಿ ಸಮನಿಸುವುದು. ಮತ್ತಂ ಶಶಿಸೂರವಂಶದರಸುಗಳು ತಾವುತಾವು ರಾಜ್ಯವನಾಳ ಸಮಯ ದಲ್ಲಿ ಅನೇಕವರ್ಪಪಠ್ಯಂತರವು ದೃಢ ಮನಸ್ಕರಾಗಿ ಊರ್ಧ್ಯಬಾಹುಗಳಾಗಿ ಇಹಪರಸಾಧನವಾದ ಮಹಾತಪಸ್ಸನ್ನೆಸಗಿ ಅಶ್ವಮೇಧಾಂತವಾದ ಸಕಲ ಯಜ್ಞಗಳಿಂದ ಪರಮಾತ್ಮನಾರಾಧನೆಗೈದುದಂ ಸೇಕ್ಸ ಕೇಳ್ಳ ಮನುಜರು ಸುಪುಣ್ಯಫಲಪ್ರದಂಗಳ ೩ ದ ಕಥೆಗಳುಳ್ಳವರಾಗಿ ಭೂಮಿಯನು ನಿರ್ಮಮತೆ ಯಿಂದ ಪರಿಪಾಲಿಸುವರು. ಕೇಳು ಮೈತ್ರೆಯು ! ಪೂರ್ವದೊಳ್ ಸೃಥುವೆಂಬ ಮಹಾರಾಯನು ಅವ್ಯಾಹತವನವುಳ್ಳವನಾಗಿ ಸಕಲಲೋಕಂಗಳ೦ ಸೇನೆಸಹಿತವಾಗಿ ಸಂಚ ರಿಸಿ, ಸಮಸುರಿತ ಕವನು ಸಂಹರಿಸಿ, ಮಹಕೀರ್ತಿಪ್ರತಾಪಶಾಲಿಯಾಗಿ, ಶ್ರೀ ವಿಷ್ಣು ವಿನಂಶಸಂಜಾತನಾಗಿ ಭೂಮಿದೇವಿಯನೆ ಮಗಳಾಗಿ ಭಾವಿಸಿ, ರಾಜ್ಯವಂ ಪರಿಪಾಲಿಸಿ, ಕಡೆಯಲ್ಲಿ ಬಿಜುಗಾಳಿಯಿಂದ ಬಯಲಾದ ಬೋರು ಗದ ಪಳ್ಳಿಯಂತೆ ಮೃತ್ಯುವೆಂಬ ಚಂಡಮಾರುತದಿಂದ ಹರಣಂಬೋಗಿ. ಪೊಂದಿದನು. ಕಾರ್ತವಿರಾರ್ಜುನನೆಂಬ ಚಕ್ರವರ್ತಿಯು ಸಪ್ತದೀಪಗಳ ನಾಕ ಮಿನಿ, ಸಕಲವಿರೋಧಿಸಂಕುಲವನು ಮಥಿಸಿ, ಪುಣ್ಯಶೀಲನಾಗಿ ನಿಲ್ಲ ಲಿತನಾಗಿ, ಸಂಕಲ್ಪವಿಕಲ್ಪಂಗಳಿಗೆ ತಾನೇ ಕಾರಣನಾಗಿ, ಮನುಷ್ಯಾನಂದದಿಂದ ನಿಖಿಲಭೋಗಂಗಳನನುಭವಿಸಿ, ಕಡೆಯೊಳ್ ಕಾಲಧಮ್ಮವನೆಯ್ದ ಕಥೆಗಳ ಯೇ ಹೇಳಲ್ಪಟ್ಟವನಾದನು. ಮತ್ತು ಆ ಲೋಕೈಕವೀರನಾದ ರಾವಣ ನಿಂದ ಪರಿಗ್ರಹಿಸಲಶಕ್ಯವಾದ ರಘುಕುಲದರಸುಗಳ್ಳಶಲ್ಯವೂ ಸಂಹಾರ ಪಾ-1, ಬೂರುಗದ ಹತ್ತಿಯು ಬೆಂಕಿಯಲ್ಲಿ ಬಿದ್ದಂತೆ~ ಎಂದು ಸಂಸ್ಕೃತ ಮಾತೃಕ.