ಪುಟ:ಚತುರ್ಥಾಂಶಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 # » ೧! ಚತುರ್ಧಾ೦ಶ ಹೂರ್ತವಾಗಿ ಕಂಡುಬಂದು ಗಾನಾವಸಾನದಲ್ಲಿ ಭಗವಂತನಾದ ಅಬ್ಬ ಯೋನಿಯಂ ನಮಸ್ಕರಿಸಿ ಕನೈಗೆ ಯೋಗ್ಯನಾದ ವರನಂ ಕೇಳಿದವನಾದಂ. ಅದಕ್ಕೆ ರೈವತರಾಯನ ಕುಂತು ಬ್ರಹ್ಮದೇವನು- ಕೇಳೋ ರಾಯನೇ, ಸಿನಗೆ ಆರು ಸಮ್ಮತ ? ಆತನ ಹೇಳು ?” ಎಂದು ಕೇಳಲು, ಮತ್ತು ಬ್ರಹ್ಮ ದೇವರಿಗೆ ನಮಸ್ಕಾರವಂ ಮಾಡಿ ತನಗೆ ಇಷ್ಟವಾದ ವರಂಗಳಂ ಹೇಳಿ, “ ಸ್ವಾಮಿಗೆ ಇಷ್ಟವಾದ ವರನು ಯಾರು? ಆನಂಗೆ ಕನ್ಯಯನ ಕುಡಲಿ? ” ಎಂದು ವಿಜ್ಞಾಪಿಸಿದನು. ಸ್ವಲ್ಪವಾಗಿ ಬಗ್ಗಿಸಲ್ಪಟ್ಟ ತಿರಸ್ಸನುಳ್ಳ ರಾಯನಂ ನೋಡಿ ಬ್ರಹ್ಮದೇವನು ನಕ್ಕು ಬಂದು ಮಾತ ನುಡಿದಂಥವನಾದನು. “ ಕೇಳು ರೈವತರಾಯನೆ ? ನಿನಗೆ ಅಭಿನುತರಾದ ರಾಯರುಗಳ ಸಂತತಿಯು ಈ ಭೂತಲದಲ್ಲಿ ಅನೇಕವಾಗಿ ಅತಿಕ್ರಮಿಸಿ ಹೋದಂಥಾದು ದಾಯಿತು. ನೀನು ನನ್ನ ಲೋಕದಲ್ಲಿ ಗಂಧರ್ವಗಾನವ ಕೇಳುವ ಸಮ ಯದಲ್ಲಿ ಕೃತಿ ತಾದ್ಯಾಪರಕಲಿಯುಗಲಗಳ೦ಬ ಅನೇಕಚತುರುಗಗಳು ಅತಿಕ ಮಿನಿ ಹೋದುವು. ಈಗ ಆಸ್ಪತೆಂಟನೆಯ ಮನ್ನಂತರವು ಭೂಲೋಕದಲ್ಲಿ ಸಂದಿತು. ಕಲಿಯುಗ ಸವಿಾಪವಾಯಿತು, ಬೇpಬ್ಬ ವರಂಗೆ 'ಒಬ್ಬನಾಗಿ ಇದ್ದಂಥ' ಸಿನ್ನಿಂದ ನಿನ್ನ ಮಗಳು ಕುಡತಕ್ಕುದು. ಕೇಳ್ಳೆ ರಾಯನೇ ? ನಿನ್ನ ಮಿತ್ರ ಮಂತ್ರಿ ಕಳತ್ರ ಬಂಧು ಬಲ ಕೋಶಾದಿ ಗಳೆಲ್ಲವು ಕಾಲದಿಂದ ಲೋಕಾಂತರವನೆಯಿದುವು. ” ಎಂದು ಬ್ರಹ್ಮದೇ ವನು ನುಡಿದಂಥವನಾದನು. ಅನಂತರದಲ್ಲಿ ಮತ್ತೂ ಹುಟ್ಟಲ್ಪಟ್ಟ ಭಯ ವನುಳ್ಳ ಆರೈವತರಾಯನು ಭಗವಂತನಾದ ಬ್ರಹ್ಮಂಗೆ ನಮಸ್ಕರಿಸಿ ಕೇಳಿ ದವನಾದಂ, “ ಈಪ್ರಕಾರದಲ್ಲಿ ಆದಂಥ ದೆಸೆಯಲ್ಲಿ ಈ ಕನ್ಯಯು ಆವವಂಗೆ ಕುಡತಕ್ಕುದು ? ಎಂದು ಕೇಳುತ ಇರಲಾಗಿ, ಅನಂತರದಲ್ಲಿ ಸ್ವಲ್ಪವಾಗಿ ನಮ ತಿರಸ್ಕನಾಗಿ ಅಂಜಲಿಹಸ್ತವನುಳ್ಳವನಾದ ಸಮಸ್ತಲೋಕ ಏತಾಮಹನಾದ ಪದ್ಮಿನಿಯಾದ ಬ್ರಹ್ಮದೇವನು ನುಡಿದಂಥವನಾದನು. ಸರ್ವಾತ್ಮಕನಾಗಿ ಸಕಲ ಜಗತ್ಕಾರಣಭೂತನಾದ ಅವನಾನೊಬ್ಬ ಪರಮಾ 1. ಈಗ ಅಚ್ಚಾಗಿರುವ ಸಂಸ್ಕೃತ ಪ್ರತಿಯಲ್ಲಿ ಬ್ರಹ್ಮನಿಗೆ ವಿಶೇಷಣವಾಗಿದೆ. 2. ಒಬ್ಬನಾಗಿದ್ದಂಥ ನಿನ್ನಿ೦ದ = ನಿನ್ನ ಬಂಧುಗಳೆಲ್ಲರೂ ಗತಿಸಿ ಹೋದರು. ನೀನೊಬ್ಬನು ಮಾತ್ರ ಉಳಿದಿರುವೆ ಎಂದು ಅರ್ಥವಾಗುತ್ತದೆ. ಬ

  • ಟ ನಿ ವ