ಪುಟ:ಚತುರ್ಥಾಂಶಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W ಬ ವಿಷ್ಣು ಪುರಾಣ [ಅಧ್ಯಾಯ ಬಲರಾಮುಂಗೋಸ್ಕರ ಸವಾನವಿಲ್ಲದ ಬುದ್ದಿಯನುಳ್ಳ ರೈವತರಾಯನು ಕನ್ಯಯಂ ಕುಡುತಲಿರಲಾಗಿ, ತನಗಿಂತಲೂ ಉನ್ನತವಾದ ಆಕಾರವ ನುಳ್ಳ ರೇವತಿಯನ್ನು ಬಲರಾಮನು ನೋಡಿ ತನ್ನ ನೇಗಿಲ ಕೊನೆಯಿಂದ ಆಯಕ್ಕನಂ ಬಗ್ಗಿ ಸುತಲಿರಲಾಗಿ, ಆಕ್ಷಣದಲ್ಲಿ ರೇವತಿಯು ಬೇರೊಬ್ಬಳೆ ಎಂಬ ಹಾಗೆ ಮಟ್ಟಾದ ಆಕಾರವನುಳ್ಳವಳಾದಳು. ಅರೆವತಭವನ ಕುಮಾರ್ತಿಯಾದ ರೇವತಿಯನ್ನು ನಿರಾಯುಧನಾದ ಬಲರಾಮನು ಅನಂ ತರದಲ್ಲಿ ವಿಧ್ಯುಕ್ತವಾಗಿ ವಿವಾಹವಂ ಮಾಡಿಕೊಂಡವನಾದಂ ಆರಾಯನು ರೇವತಿಯಂ ಬಲರಾಮಂಗೆ ಕೊಟ್ಟು ತಾನು ಇಂದ್ರಿಯನಿಗ್ರಹವನುಳ್ಳವನಾದ ಕಾರಣ ತಪಸ್ಸಿಗೊಸ್ಕರ ಹಿಮವತ್ಪರ್ವತನೆಯ್ದಿದವನಾದನು. ಎಂಬಲ್ಲಿಗೆ ಶ್ರೀ ಪರಾಶರರು ಮೈ ತಯಂಗೆ ನಿರೂಪಿಸಿದ ಶ್ರೀ ವಿಷ್ಣು ಪುರಾಣದಲ್ಲಿ ತತುರ್ಥಾ೦ಶದೊಳು ಪ ಥಮಾಧ್ಯಾಯಂ ಸಂಪೂರ್ಣ ೦. ಎರಡನೆಯ ಅಧ್ಯಾಯ. 5, ಕೇಳು ಮೈತ್ರೇಯ, 1ಕೆ ಕುಮ್ಮಿ ಕುಮಾರನಾದ ರೈವತರಾಯನು ಎಷ್ಟು ಪರಿಯಂತ ಬ್ರಹ್ಮಲೋಕದಿಂ ಬಾರದೆ ಇದ್ದನು, ಆಸಮಯದಲ್ಲಿ ಪುಣ್ಯ ಜನರೆಂದು ಹೆಸರನುಳ್ಳ ರಾಕ್ಷಸರು ಆತನ ಪಟ್ಟಣವಾದ ಕುಶಸ೪ ಯನು ಆಕ್ರಮಿಸಿದವರಾದರು. ಆ ರೈವತನ ಒಡಹುಟ್ಟಿದವರು ನೂಲು ಮಂದಿಯ ರಾಕ್ಷಸರ ಭಯದಿಂ ದಿಕ್ಕು ದಿಕ್ಕುಗಳನೆಯ್ದಿ ದವರಾದರು. ಅವರ ವಂಶದ ಕತಿಯರು ದಿಕ್ಕುಗಳನಾಶ್ರಯಿಸಿದವರಾದ ರು. ದೃಷ್ಟನೆಂಬಾತಂಗೆ-ಆತನ ಸಂತತಿ ಕ್ಷೇತ್ರ ಧರ್ಮವನುಳ್ಳು ದಾಯಿತು. ನಾಭಾಗನಿಗೆ ನಾಭಾಗನು, ಅವನ ಕುಮಾರನು ಅಂಬರೀಪ, ಅಂಬ ರೀಮರಾಯನ ಕುಮಾರಂ ವಿರೂಪನೆಂಬ ರಾಯನಾದಂ , ವಿರೂಪರಾಯನ ದೆಸೆಯಿಂ ಸ್ಪಷದಪ್ಪನು, ಆತಂಗೆ ರಥೀತರನೆಂಬಾತಂ. ವಿವರಣ-1, ಅಚ್ಚಾಗಿ ಪ್ರಚಾರದಲ್ಲಿರುವ ಸಂಸ್ಕೃತ ಪ್ರತಿಯಲ್ಲಿ ( ಕುಕುದ್ಮ' ಎ೦ದಿದೆ ; ಇದಕ್ಕೆ-ಕುಕುನ್ನಿಯೆಂಬ ಹೆಸರುಳ್ಳ ಎಂದು ಅರ್ಥವಾಗುತ್ತದೆ.