ಪುಟ:ಚತುರ್ಥಾಂಶಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ನಥ ಚತುರ್ಥಾ೦ಶ ಅಸುರರನು ನಿಗ್ರಹಿಸಿದವನಾದನು, ಆವುದಾನೊಂದು ಕಾರಣ ವೃಷಭನ ಕಕುತ್ತಾ ನನನು ಆಶ್ರಯಿಸಿದ ಸುರಂಜಯನೆಂಬ ರಾಜನಿಂದ ಅಸುರಬಲವು ಸಂಹರಿಸಲ್ಪಟ್ಟಿತೋ,ಅದುಕಾರಣ ಕಕುತ್ರನೆಂಬ ಹೆಸರನು ಪಡೆದವನಾದನು. ಕಕುತ್ರ ನೆಂಬ ರಾಯನಿಗೆ 1 ಅನೇನಸೆಂಬ ಪುತ್ರನು; ಅನೇನಸೆಂಬಾ ತನಿಂದ ಪೃಥು; ಪೃಥುವೆಂಬ ರಾಯನಿಗೆ ವಿಶ್ವಗಂಧನು; ವಿಶ್ವಗಂಧ'ರಾಯಂಗೆ ಚಾಂದ್ರ ಯುವನಾನು; ಅಚಾಂದ್ರ ಯುವನಾಸ್ಪಂಗೆ ಶಾಬಸ್ಸನು, ಆವನಾ ನೊಬ್ಬ ಶಾಬಸ್ಸನು ಶಾಬಸ್ತಿಯೆಂಬ ಪಟ್ಟ ಣವನಾಗುವಾಡಿ ಪ್ರವೇಶಿಸಿದವನಾ ದನು, “ಆಶಾಬಸ್ಯನೆಂಬಾತಂಗೆ ಬೃಹದನು, ಆತ೦ಗೆ ಕುವಲಯಾತ್ಮನು ; ಆವನಾನೊಬ್ಬ ಕುವಲಯಾತ್ಮನು ಉದಂಕನೆಂಬ ಮಹರ್ಷಿಗೆ ಅಸಕಾರಿ ಯಾದ ಧುಂಧವೆಂಬ ರಾಕ್ಷಸನನು ವಿಷ್ಣುವಿನ ಆವೇಶಾವತಾರದಿಂದ ತನ್ನ 'ಇಪ್ಪತ್ತೊಂದು ಸಾಸಿರ ಮಂದಿ ಪುತ್ರರುಗಳಿಂದ ಸಹಿತವಾಗಿ ಸಂಹರಿಸಿ ದನು, ಆರಾಯನು ತಾನು ಧುಂಧುಮಾರನೆಂಬ ಪೆಸರಂ ಪಡೆದನು, ಆತನ ಸಮಸ್ತ ಕುಮಾರರು ಆಧುಂಧುವೆಂಬ ರಾಕ್ಷಸನ ಉಚ್ಚಾ ಸಾಗ್ನಿಯಿಂದ ನಾಶವನೆಯ್ದಿದರು. ಅವರಲ್ಲಿ ದೃಢಾಪ್ಪನು, ಚಂದ್ರಾಕ್ಷನ್, ಕಪಿಲಾತ್ಮನು ಈ ಮಕುಮಂದಿ ಕುಮಾರರುsPದರು ದೃಢಾಪ್ಪಂಗೆ ಹರ್ಯಶನು; ಹರ್ಯಕ್ಷ್ಯಂಗೆ ನಿಕುಂಭನು; ನಿಕುಂಭಂಗೆ 4 ಆಹಿತಾತ್ಮನು ;1 ಆತನ ದೆಸೆಯಿಂದ ಕೃಶಾನು, ಆತನಿಂದ ಪ್ರಸೇನಜಿತ್, ಪಸೇನಜಿರಾಯಂಗೆ ಯುವನಾಶ ನಾದನು. ಆತನು ಪುತ್ರರಿಲ್ಲವೆಂಬ ನಿರ್ವೇಗದಿಂದ ಮುನಿಗಳ ಆಶ್ರಮ ಮಂಡಲಗಳ ಆಶ್ರಯಿಸಿರುವುದರಿಂದ ದಯಾಳುಗಳಾದ ಮುನಿಗಳಿಂದ ಇಬ್ಬಯು ಮಾಡಲ್ಪಟ್ಟಿತು. ಆಪುತ್ರಕಾಮೇಷ್ಟಿಯಲ್ಲಿ ಮಧ್ಯರಾತ್ರಿ ಯಾಗುತಿರಲಾಗಿ; ಮಂತ್ರಪೂತವಾದ ಜಲಪೂರ್ಣವಾದ ಕಲಶವನು ವೇದಿ ಮಧ್ಯದಲ್ಲಿರಿಸಿ ಆಮುನಿಗಳು ನಿದ್ರಾ ಸಕ್ಕರಾದರು. ಅವರು ಮಲಗುತಿರಲಾಗಿ ಆಭೂಪಾಲನು ದಾಹದಿಂದ ತಪಿಸಲ್ಪಟ್ಟಂಥವನಾಗಿ ಆಶ್ರಮವನ್ನು ಪ್ರವೇಶಿಸಿ ದನು. ಮಲಗಿರುವ ಮುಖಗಳನು ಎಬ್ಬಿಸದೆ ಇದ್ದವನಾಗಿ ಅನೇಕ ಮಹಿಮೆಯನುಳ್ಳ ಆಮಂತ್ರಪೂತಜಲವಂ ಪಾನಮಾಡಿದವನಾದನು, ಅನಂತರ ದಲ್ಲಿ ನಿದ್ದೆಯಿಂದ ಎದ್ದಂಥ ಋಷಿಗಳು ಕೇಳಿದವರಾದರು, (ಆವ ಪುರುಷ ಪಾ--ಆಸೇನ, -ವಿಷ್ಟರಾಶ್ವ, 3-ಇಪ್ಪತ್ತು, 4-ಅಮಿತಾಶ.