ಪುಟ:ಚತುರ್ಥಾಂಶಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೪ ೧೪ ವಿಷ್ಣು ಪುರಾಣ' [ಅಧ್ಯಾಯ ಗ್ರಹನಾಗಿ ಸೌಭರಿ ಖುಶರನು ಈವಾತ ನುಡಿದನು:- ರಾಯರೊಳಗೆ ಚಕ್ರವರ್ತಿಯಾದ ಮಾಂಧಾತ್ಮವೇ ! ದೊರೆಯಾದ ನಿನ್ನ ನೋಡಲಿಚ್ಛೆ ಸಿ ದೆನು, ನಿನ್ನ ಕನ್ನಿಕೆಯನು ಕುಡು. ನನ್ನಲ್ಲಿ ಸ್ನೇಹವನು ಬಿಡಬೇಡ. ಕಾರ್ಯವಕದಿಂ ಬಂದ ಅತಿಥಿಗಳು ಕಕುವಂಶದಲ್ಲಿ ವಿಮುಖರಾಗಿ ಹೊಗರು, ಅಷ್ಟುಮಾತ್ರವೆ ಅಲ್ಲ, ಈಭೂಮಿಯಲ್ಲಿ ಮಿಕ್ಕಾದ ರಾಯರುಗಳು ಅನೇಕರುಂಟು. ಅವರುಗಳೆhಳು ಕುಮಾರತಿಯ ರುಂಟು. ಅತಿಥಿಗಳಿಗೆ ಬೇಡಿದುದ ಕೊಟ್ಟು ದೀಕ್ಷೆಯ ಮಾಡಲ್ಪಟ್ಟ ವತವನುಳ್ಳಂ ಥದು ನಿನ್ನ ಕುಲವು ಮಾತ್ರ ವೆ, ಕೇಳು ರಾಯನೆ ! ನಿನಗೆ ಐವತ್ತು ಮಂದಿ ಕನ್ನಿಕೆಯರು ಇರುತ್ತ ಇದ್ದಾರೆ ; ಅವರುಗಳು ಒಬ್ಬ ಕನ್ನಿಕೆಯನು ಕುಡು, ನಾನು ಬೇಡಿಕೊಂಬುವುದು ಭಂಗವಾದೀತು, ಎಂಬ ಭಯವುಂ ಟಾದವನಾಗಿ ಇದ್ದೇನೆ.” ಎಂದು ಈ ಪ್ರಕಾರದಲ್ಲಿ ಹೇಳಿದ ಮುಖ್ಯವಾಕ್ಯವನ್ನು ಮಾಂಧಾತೃ ಚಕ್ರವರ್ತಿಯು ಕೇಳಿ, ಜರೆಯಿಂದ ಜರ್ಜರಿತವಾದ ದೇಹವನುಳ್ಳ ಖುಷಿ ಯನ್ನು ನೋಡಿ ಶಾಸಭಯದಿಂದ ಪ್ರತ್ಯುತ್ತರವನು ಹೇಳ ಲಂಜಿ, ವಿನಯ ಸಹಿತನಾಗಿ ಒಂದು ಮಾತಂ ನುಡಿದನು, “ ಎಲೈ ಭಗವಂತನೆ ! ನನ್ನ ಕುಲಾಚಾರವನ್ನು ಕೆಳು, ನಮ್ಮ ಕುಮಾರ್ತಿಯರಿಂದ ಅಭಿಜವವಿದ್ಯಾವೃತ ಗುಣರೂಪಗಳನುಳ್ಳವರಾದವರು ಅಪೇಕ್ಷಿಸಲು ತಕ್ಕವರು. ಅವರೇ ನಮ್ಮ ಮಕ್ಕಳಾದ ಕನ್ನಿಕೆಯರಿಗೆ ವರನಾಗತಕ್ಕವರು. ಅದುಕ ಾರಣ ನಿಮ್ಮ ಯೋಚನೆಯು ನಮ್ಮ ಸಂಕಲ್ಪಕ್ಕೆ ಅಗೋಚರವಾದುದು. ಈಪ್ರಕಾರ ವಿರುತ್ತಿರಲಾಗಿ ನಿಮ್ಮ ಯಾಚನೆ ಹೇಗಾದೀತು ? ಏನ ಮಾಡಲಿ ? ಎಂದು ಚಿಂತಿಸುತಲಿದ್ದೇನೆ” ಎಂದು ಹೇಳಿದ ರಾಯನೊಡನೆ ಆಸೌಭರಿ ಖುಷಿಯು ಆಲೋಚಿಸಿ ನುಡಿದನು- ಕೇಳುರಾಯನೇ ! ಹಾಗಾದ ಪಕ್ಷದಲ್ಲಿ ಇದೀಗ ಉಪಾಯವು : ವೃದ್ಧನಾದ ನಾನು ಸ್ತ್ರೀಯರಿಗೆ ಇಷ್ಟವಾದವನಲ್ಲ ; ಕನ್ನಿಕೆಯರಾದವರಿಗೆ ಕೇಳುವುದೇನು ? ಹಾಗೆಯೇ ಆಗಲಿ ; ಅವರು ಒಪ್ಪುವಹಾಗೆ ಸ್ವಯಂವರವನು ಮಾಡಿಸು ' ಎಂದು ಮಾಂಧಾತರಾಯನಂ ಕುತು (ಹೇಳ) ಮತ್ತೂ ಒಂದಾನೊಂದು ಮಾತನಾಡಿದನು:- ಕೇಳು ರಾಯನೇ ? ನೀನು ಹೇಳಿದ ಸಕಾರದ ಕನ್ನಿಕೆಯರ ಅಂತಃಪುರ - - ೨ "...