ಪುಟ:ಚತುರ್ಥಾಂಶಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಚತುರ್ಥಾ೦ತ ಮಾತಂ ನುಡಿದವನಾದನು:- ಕೇಳು ಸಣ್ಣವಳೆ : ನಿನಗೆ ಸುಖವೆ ? ಸುಖ ವಿಲ್ಲವೆ ಹೇಗೆ ? ಮಹರ್ಷಿಯಾ ದ ಸೌಭರಿಯು ಸ್ನೇಹವುಳ್ಳವನೂ ಏನು? ಸಕಲ ಸನ್ನದ್ಧಿ ಯುಂಟೇ ಏನು ? ನನ್ನ ಮನೆಯ ವಾಸದಹಾಗೆ ಉಂ ಟೆ ಇಲ್ಲವೋ ? 1 ” ಎಂದು ಕೇಳುವಂಥ ತಂದೆಯಂ ಕುಲಿತು ಕುಮಾ ರ್ತಿಯು ನುಡಿದವಳಾದಳು-ಕೇಳು ತಂದೆಯೇ ! ಈ ಆಶ್ರಮದಲ್ಲಿ ಅತ್ಯಂತ ರಮಣೀಯವಾದ ಪಾಸಾದವು, (ಅತಿ ಮನೋಜ್ಞವಾದ) ಉದ್ಯಾನವನವು, ಅದಲ್ಲಿ ಅವ್ಯಕ ಮಧುರರವಗಳಾದ ರಾಜಹಂಸ ಕೋಕಿಲ ಮಯೂರ ಸಾರಸ ಕರಂಡವ ಮೊದಲಾದ ಪಕ್ಷಿಗಳನುಳ್ಳುದಾಗಿ ವಿಕಸಿತ ಪದ್ಮಗಳಿಗೆ ಆಕರಗಳಾದ ಜಲಾಶಯಂಗಳು, ಮನೆಹರಗಳಾಗಿ ಕ್ರೀಡಾಸ್ಪದಗಳಾಗಿ ಇದ್ದೀತು. ಅಷ್ಟು ಮಾತ್ರವೇ ಅಲ್ಲ ; ಭಕ್ಷ್ಯ, ಭೋಜ್ಯ, ಲೇಹ್, ಚೇಷ್ಯ ಲೇಪನ ಮೊದಲಾದ ಭೋಗವಸುಗಳಿಂದಲೂ ಮೃದುಲಗಳಾದ ಕರನಾ ಸನಗಳಿ೦ದಲ ಸಕಲಸಂಪತ್ಸಮೃದ್ಧಿಗಳಿಂದ ಪರಿಪೂರ್ಣವಾದುದು ಈವು ಹರ್ಷಿಯು ಗಾರ್ಹಸ್ಥಧರ್ಮವು. " ? ಈ ಪ್ರಕಾರದೊಳಿದ್ದ ವಿಷಯದಲ್ಲಿ ಜನ್ಮಭೂಮಿಯು ಆವಳಿಂದ ಸ್ಮರಿಸಲ್ಪಟ್ಟಿತು ?ಈ ಮಹರ್ಷಿಯ ಅನುಗ್ರ ಹದಿಂದ ಬಂದಲ್ಲಿ ಆ ಕಡಮೆಯಿಲ್ಲದೆ ಸಮಸ್ತವೂ ಮಂಗಲಾಸ್ಪದವಾಗಿ ರುವುದು, ಇಂತಹ ಭೋಗಸನ್ನದ್ಧಿಯಲ್ಲಿ ನನಗೆ ದುಃಖಕ್ಕೆ ಕಾರಣವೇ ನಿದೆ ? ಈ ಮರ್ಹರು ನನ್ನ ಗೃಹದಿಂದ ಹೊರಡುವುದೇ ಇಲ್ಲ; ಎನ್ನ ಒಡಹುಟ್ಟಿದವರಾದ ಕಡಮೆಯವರ ವಿಷಯದಲ್ಲಿ ಯ ಏಕಪ್ರಕಾರವಾಗಿ ೪) ಪಾ-.1-ನಮ್ಮ ಮನೆಯ ವಾಸವು ನೆನಪಿಗೆ ಬರುವುದಿಲ್ಲವೆ ? 2-ಹೀಗಿದ್ದರೂ ಆವಳಿ೦ದ ಜನ್ಮಭೂಮಿಯು ಸ್ಮರಿಸಲ್ಪಡದೆ ಇದ್ದೀತು ? 3-ಇ೦ತಹ ಭೋಗಸಮೃದ್ಧಿಯಲ್ಲಿಯೂ ನನಗೊಂದು ದುಃಖಕ್ಕೆ ಕಾರಣ ವಿದೆ, ಈ ಮಹರ್ಷಿಯು ನನ್ನ ಗೃಹದಿಂದ ಹೊರಡುವುದೇ ಕಾಣೆ, ನನ್ನಲ್ಲಿ ಅತಿ ಪ್ರೇಮದಿಂದ ನನ್ನಲ್ಲಿಯೇ ಯಾವಾಗಲೂ ಇರುವನು ; ನನ್ನ ಒಡಹುಟ್ಟಿದವರಲ್ಲಿ ಈ ರೀತಿಯಲ್ಲಿ ಇಲ್ಲ. ಆದ್ದರಿಂದ ಅವರು ದುಃಖಿಗಳಾಗಿರುವರು ಈ ಪ್ರಕಾರ 2 ರಿಂದ 4 ರ ವರೆಗೆ ಸಂಸ್ಕೃತ ಮಾತೃಕೆಯ ಪ್ರಕಾರ ಪರಿ ವರ್ತನವಿರಬೇಕು, ಆದ್ದರಿಂದ ಈ ಕನ್ನಡದ ಗದ್ಯಾನುವಾದಕ್ಕೆ ಮೂಲಪ್ರತಿಯಾದ ಸಂಸ್ಕೃತ ಮಾತೃಕೆಯು ಬೇರೊ೦ದಾಗಿರಬೇಕೆಂದು ತೋರುತ್ತದೆ. ಕನ್ನಡದ ಮತೃಕೆಯ ಪ್ರಕಾರ ರಾಜಕುಮರ್ತಿಯರಿಗೆ-ಸೌಭರಿಯು ಬೇರೆಬೇರೆ ಶರೀರ