ಪುಟ:ಚತುರ್ಥಾಂಶಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷ್ಣು ಪುರಾಣ [ಅಧ್ಯಾಯ ಈ ವಿಷಯದಲ್ಲಿ ಸಪ್ತರ್ಷಿಗಳಿಂದ ಈ ಶ್ಲೋಕವು ಹೇಳಲ್ಪಟ್ಟಿತು. ಶ್ಲೋಕ | ಖಟ್ಟಾ೦ಗೇನ ಸಮೋ ನಾನ್ಯ: ಕಶಿ ದುರ್ವ್ಯಾ೦ ಭವಿಷ್ಯತಿ | ಯೇನ ಸ್ವರ್ಗಾದಿಹಾಗಯ್ಯ ಮುಹೂರ್ತ೦ ಪ್ರಾಪ್ಯ ಜೀವಿತಂ | ತಯೋತಿಸಂಹಿತಾಲೋಕಾ ಬುಧ್ಯಾ ಸತ್ಯೇನ ಚೈವಹಿ! " ಅದು ತಾತ್ಸರವೇನೆಂದೊಡೆ-ಆನ ಖಟ್ವಾಂಗರಾಯನಿಂದ ದೇವಸಸಾ ಯಪೂರ್ವಕವಾಗಿ ಸ್ವರ್ಗದಿಂದಿಲ್ಲಿಗೆ ಬಂದು ಕ್ಷಣಮಾತ್ರ, ಆಯುಸ್ಸು ಪಡೆದು ಸತ್ಯದಿಂದಲೂ ಧರ್ಮದಿಂದಲೂ ಮಹಲೋಕವು ಆಕ್ರಮಿಸಿ ಜಯಿಸಲ್ಪ ಟಿತು, ಆ9ರಟಾ೦ಗರಾಯಂಗೆ ಸಮನಾದವನೊಬ್ಬನೂ ಭೂಮಿಯಲ್ಲಿಲ್ಲ. ಆ ಖಟ್ಯಾಂಗರಾಯಂಗೆ ದೀರ್ಘಬಾಹುವೆಂಬ ಪುತ್ರನು, ಆತನಿಂದ ರಘುವೆಂಬಾತನು, ಆತನಿಂದ ಅಜರು, ಅಜಂಗೆ ದಶರಥನು, ದಶರಥಂಗೆ ಭಗ ವಂತನಾಗಿ ವಿಮಲಾಚ್ಯುತನಾದ ವಿಷ್ಣುವು ಲೋಕಸಂರಕ್ಷಣಾರ್ಥವಾಗಿ ತನ್ನ ಅಂತದಿಂದ ರಾಮ ಲಕ್ಷಣ ಭರತಶತ್ರುನ್ನು ರೂಪಂಗಳಾಗಿ ಪುತ್ರತ್ವವನೆಯ್ದಿ ದನು. ಅವರೊಳು ರಾಮಸ್ವಾಮಿ ಬಾಲ್ಯದಲ್ಲಿಯೇ ವಿಶ್ವಾಮಿತ್ರರಾಗಸಂ ರಕ್ಷFಣಾರ್ಥವಾಗಿ ಹೋದಲ್ಲಿ ತಾಟಕಾಸಿಗ್ರಹಪೂರ್ವಕವಾಗಿ ಜಾಗದಲ್ಲಿ ಮಾರೀಚನಂ ಇಸುವಿನಿಂದಾಹತನಂನಾಡಿ, ಸುಬಾಹು ಮೊದಲಾದರಾಕ್ಷಸರಂ ಯಮನ ಸನ್ನಿಧಿಗೆ ಕಳುಹಿಸಿ, ದರ್ಶನಮಾತ್ರದಿಂದಲೇ ಅಹಲ್ಯಯಂ ನಿರ್ದೋ ಪಳಂ ಮಾಡಿ, ಜನಕಮಹಾರಾಯನ ಮಿಥಿಲಾಪಟ್ಟಣದಲ್ಲಿ ಹರಧನುರ್ಭಂಗ ಪೂರ್ವಕವಾಗಿ ಅಯೋನಿಜೆಯಾದ ಸೀತಾದೇವಿಯಂ ವಿವಾಹವಂ ಮಾಡಿ ಕೊಂಡು, ಸಕಲ ಕ್ಷತ್ರಿಯಕ್ಷಯಕಾರಿಯಾದ ಹೈಹಯಕುಲಧೂಮಕೇತು ವಾದ ಜಮದಗ್ನಿ ಕುಮಾರನಾದ ಪರಶುರಾಮನನಪಾಸ ವೀರ್ಯನೆನಿಸಿ, ಪಿತೃವಾಕ್ಯಪರಿಕಾಲನೆಯಿಂದ ಅಗಣಿತರಾಜ್ಯಾಭಿಮಾನಿಯಾಗಿ, ಭಾತ' ಭಾ ಕ್ಯಾಸಮೇತನಾಗಿ ವನಪ್ರವೇಶವಂ ಮಾಡಿ, ವಿರಾಧಖರದೂಷಣಕಬಂಧವಾಲಿ ಮೊದಲಾದವರಂ ನಿಗ್ರಹಿಸಿ, ಸುಗ್ರೀವಮಿತ್ರನಾಗಿ, ಸಮುದ್ರ ಬಂಧನಪೂರ್ವ ಕವಾಗಿ ಸಮಸ್ತರಾಕ್ಷಸಕುಲಕ್ಷಯವಂ ಮಾಡಿ,ದಶಾನನಸ್ಪರ್ಶಕಳಂಕವನ್ನು ಅನಲಪ್ರವೇಶದಿಂದ ಶುದ್ಧಿಮಾಡಿ ಕೊಂಡ) ಅಶೇಪದೇವೇಶಸಂಸ್ತುತಿಗಳಿಂದ ಮಾನ್ಯಯಾದ ಜನಕತನಯೆಯಾದ ಸೀತಾದೇವಿಯಿಂ ಕೂಡಿ ಅಯೋಧ್ಯಾ ಪುರಪ್ರವೇಶವಂ ಮಾಡಿ- (ಪಟ್ಟಾಭಿಷಿಕ್ತನಾದನು. ಕೇಳು ಮೈತ್ಯ !