ಪುಟ:ಚತುರ್ಥಾಂಶಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩y [ಅಧ್ಯಾಯ ವಿಷ್ಣು ಪುರಾಣ ಆಅನೆಯ ಅಧ್ಯಾಯಂ, -~.~ • ತುವಾಯು ಮೈತ್ರೆಯನು ಪರಾಶರಮಹರ್ಷಿಯಂ ಕುಯ್ತುಕೇಳು, ಗುರುವೆ : ಸರವಂಶ ವೃತ್ತಾಂತವು ತಮ್ಮಿಂದ ಹೇಳಲ್ಪಟ್ಟಿತು. ಇನ್ನು ಮುಂದೆ ಸೋಮವಂಶ ವಿಸ್ತಾರವಂ ಕೇಳಲಿಚ್ಚಿ ಸುತಲಿದ್ದೆನೆ. (ಸ್ಥಿರಕೀರ್ತಿಗಳಾದ ಯಾವ ಸೋಮವಂಶದ ರಾಜರುಗಳ ಸಂತತಿಯು ಈಗಲೂ ಯಶಸ್ಸನ್ನು ಹೊಂದಿ ನೆಲೆಗೊಂಡಿರುತ್ತದೆಯೋ, ಆ ಮಹಾನು ಭಾವರುಗಳ ಕಥೆಯನ್ನು ಪೂಜ್ಯರಾದ ತಾವು ದಯಮಾಡಿ ಹೇಳ ಬೇಕು ? ಎನ್ನಲು ; ಪರಾಶರ ಮುನಿಯು ಇಂತೆಂದನು:- ಕೇಳು ಮೈತ್ರೆಯು, ಆ ಸಂತತಿಯೆಂತಿಹುದೆಂದೊಡೆ ಸ್ಥಿರಕೀರ್ತಿಯು ಳ್ಳುದು ; ಮತ್ತು ಪ್ರಥಿತ ತೇಜಸ್ಕರಾದ ಅತಿಬಲಪರಾಕ್ರಮದ್ಯುತಿಶೀಲಚೇ ಏಾದಿಗಳಿಂದ ಯುಕ್ಯರಾದ ಅತ್ಯಂತ ಗುಣಾತರಾದ ನಹುಷ ಯಯಾತಿ ಕಾರ್ತವಿರಾದಿ ಭೂಪಾಲರುಗಳಿಂದ ಅಲಂಕರಿಸಲ್ಪಟ್ಟುದು. ಅಂತಹ ಪರಂ ಪರೆಯನ್ನು ನಿನಗೆ ವಿಸ್ತರಿಸಿ ಹೇಳ ವನು. ಕೇಳು ಮೈತ್ರೇಯ, ಅಖಿಳ ಜಗತ್ಕರ್ತೃವಾದ ಭಗವಂತನಾದ ನಾರಾ ಯುನ ನಾಭೀಕಮಲದಲ್ಲಿ ಉತ್ಪನ್ನನಾದ ಬ್ರಹ್ಮದೇವಂಗೆ ಅತ್ರಿಯೆಂಬ .ಕುಮಾರನು ಆದನು. ಅತ್ರಿಗೆ ಸೋಮನು (ಜನಿಸಿದನು ) ಆಚಂದ್ರನನ್ನು ಪೂಜ್ಯನಾದ ಬ್ರಹ್ಮದೇವನು ಸಮಸ್ತ ಓಷಧಿಗಳಿಗೂ ದೀಜನಕ್ಷತಾದಿಗ ೪ಗೂ ಅಧಿಪತ್ಯದಲ್ಲಿ ಅಭಿಷೇಕವಂ ಮಾಡಿದನು. ಆ ಚಂದ್ರನು ರಾಜಸೂಯ ಯಾಗವ ಮಾಡಿದನು. ಆತ೦ಗೆ (ಅಪ್ರಭಾವದಿಂದಲೂ), ಆಧಿಪತ್ಯದ ಪ್ರಭಾ ನದಿಂದಲ, ಮದವು ಆವೇಶವಾಯಿತು, (ಆ ಮದಾವಲೇಪದಿಂದ) ಸಕಲ ದೇವಗುರುವಾದ ಬೃಹಸ್ಪತಿಯ ಪತ್ನಿಯಾದ ತಾರೆಯೆಂಬ ಸಿ ಯನ್ನು ಅಪಹರಿಸಿದನು. ಆಮೆಲೆ ಬೃಹಸ್ಪತಿಯಿಂದ (ಅತಿಯಾಗಿ) ಪ್ರೇರಿಸಲ್ಪಟ್ಟಂಥ ಬ್ರಹ್ಮದೇವನಿಂದ 1 ಆಜ್ಞಾಪಿಸಲ್ಪಟ್ಟ,1 ರೇವರ್ತಿಗಳಿಂದ ಪ್ರಾರ್ಥಿತನಾದೆ ಡಂ (ಆಕೆಯನ್ನು ) ಬಿಡದೆ ಇದ್ದುದಕ್°ಂದ ಬೃಹಸ್ಪತಿಯು ಚಂದ್ರನನ್ನು ಸಾ-1- ಆಜ್ಞಾಪಿಸಲ್ಪಟ್ಟ, ಎಂದು,– ಕನ್ನಡ ವಾತೃಕೆಯ ಪಾಠ - W ಬಿ