ಪುಟ:ಚತುರ್ಥಾಂಶಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ವಿಷ್ಣು ಪುರಾಣ [ಅಧ್ಯಾಯ ಪ್ರತಿಯಿಂದ ಹಾಗೆ ಹೇಳಲ್ಪಟ್ಟ 1 ಅತಿಪತಿವ್ರತೆಯಾದ ತಾರಾದೇವಿಯು ಭರ್ತ್ಸವಚನಾನಂತರ ಆಗರ್ಭಗತವಾದ ಶಿಶುವನ್ನು ಲಾಳತೃಣವಿಶೇಷವಾದ ಗುಲ್ಕದಲ್ಲಿ ಬಿಟ್ಟಳು. ಆ ಗರ್ಭಗತವಾದ ಶಿಶುವು ಅವಳಿಂದ ಬಿಡಲ್ಪಟ್ಟಮಾ ತ್ರದಿಂದಲೇ ತನ್ನ ಅತಿತೇಜಸ್ಸಿನಿಂದ ದೇವತೆಗಳ ತೇಜಸ್ಸನ್ನು ಅಪಹರಿಸಿ ದವನಾಗಲು), ಅದನ್ನು ನೋಡಿ ಬೃಹಸ್ಪತಿ ಚಂದ್ರರಿಬ್ಬರಿಗೂ ಕುಮಾರನ ಅತ್ಯಂತ ಮನೋಹರತೆಯಿಂದ ಅವನಲ್ಲಿ ಅಭಿಮಾನವುಂಟಾಯಿತು ಅದ ನ್ನು ದೇವತೆಗಳು ಕಂಡು ಉತ್ಪನ್ನ ಸಂದೇಹವುಳ್ಳವರಾಗಿ-ಈ ಕುಮಾರನು ಚಂದಂಗೋ ಬೃಹಸ್ಪತಿಗೋ, ಸತ್ಯವಾಗಿ ನುಡಿಯೆಂದು ತಾರಾದೇವಿಯನ್ನು ಕೇಳಿದಲ್ಲಿ ಆಕೆಯು ಲಜ್ಞೆಯಿಂದ ಏನನ್ನೂ ನುಡಿಯದಿರಲಾಗಿ-ಅನೇಕವಿ ಧದಿಂದ ದೇವತೆಗಳು ಕೇಳಿದರೂ ಕಿಂಚಿತ್ತೂ ನುಡಿಯದೆ ಹೋಗಲು; ಅನಂ ತರದಲ್ಲಿ ಆ ಕುಮಾರನು ತಾಯಿಗೆ ಶಾಪವ ಕೊಡಲುದ್ಯುಕನಾಗಿ ದೃಢ ವಾಗಿ ನುಡಿದನು, “ ದುಷ್ಟೆಯಾದ ಎಲೆ ತಾಯೇ ಕೇಳು, ಏನುಕಾರಣ ನನ್ನ ತಂದೆ ಇಂಥವನೆಂದು ನುಡಿಯದೆ ಇರ್ಪ ? ಅಬದ್ದವಾದ ಲಜ್ಞೆಯುಳ್ಳ ನಿನ್ನನ್ನು ಹೇಗೆ ನೀನು ತವಕ ಹೃದಯಳಾಗಿ ಆಗುವುದಿಲ್ಲವೋ ಆರೀತಿಯಿಂದ ಈಗಲೇ ಶಿಕೀ ಸೇನು ? ಎಂದು ಕುಮಾರನು ನುಡಿಯುತಿರುವಲ್ಲಿ -ಭಗ ವಂತನಾದ ಪಿತಾಮಹನು ಬಂದು, ಆಕುಮಾರನನ್ನು ನಿವಾರಿಸಿ,-ಕೇಳು ಸಣ್ಣ ವಳ : ಈ ಕುಮಾರನು ಬೃಹಸ್ಪತಿಗೆ ಚಂದ್ರನಿಗೊ ಎಂದು ಕೇಳಲು, ತಾರೆಯು ಲಜ್ಜೆಯಿಂದ ಸೇವಂಗೆ ಎಂದಳು. ಆ ಮಾತಂ ಕೇಳಿದನಂತರ ದಲ್ಲಿ ಪ್ರಕಾಶಿಸುತ್ತಲಿದ್ದ ನಿರ್ಮಲವಾದ ಕಪೋಲಸ್ಥಲ ಕಾಂತಿಯುಳ್ಳ ಉಡು ಪತಿಯಾದ ಚಂದ್ರನು ಕುಮಾರನನ್ನು ನೋಡಿ ಆಲಿಂಗನವಂ ಮಾಡಿ-ಬಳ್ಳಿ ತಾಯಿತು, ಒಳ್ಳಿತಾಯಿತು. (ವಪ್ಪ! ನೀನು ಪ್ರಜ್ಞನು), ಎಂದು ಹೇಳಿ, ಆಸಣ್ಣವನಿಗೆ ಬುಧನೆಂದು ನಾಮಕರಣವನ್ನು ಮಾಡಿದನು. .ಕೇಳು ಮೈತ್ರೇಯ, ಆ ಬುಧನಿಗೆ ಇಳಾದೇವಿಯಲ್ಲಿ ಪುರೂರವನು ಟೀಕು-1. « ಅತಿಪತಿವುತೇತಿಪದೇನ ಗರ್ಭೋಬಲಾದಾಹಿತ ಇತ್ಯವಗಮ್ಯತೇ? ಎಂದು ವ್ಯಾಖ್ಯಾನ ಮಾಡಿದ್ದಾರೆ. ಪಾ-2, ದೇವತೆಗಳ ತೇಜಸ್ಸಿನಿಂದ ಪ್ರಕಾಶಿಸುವುದನ್ನು ನೋಡಿ - ಕನ್ನಡ ಮಾತೃಕೆ 3. ಅತಿದೂಷಿತೆಯಪ್ಪೆಯೋ-ಕನ್ನಡ ಮಾತೃಕೆ. ೪. M ಣ ಜ. m |