ಪುಟ:ಚತುರ್ಥಾಂಶಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪L {ಅಧ್ಯಾಯ ವಿಷ್ಣು ಪುರಾಣ ಏಳನೆಯ ಅಧ್ಯಾಯ ಕೇಳು ಮೈತ್ಯ ! ಪುರೂರವರಾಯಂಗೆ 1 (ಆಯುವು, ಧೀಮಂ ತನಾದ ಅಮಾವಸುವು, ಶತಾಯು, ಶತಾಯು, ಅಯುತಾಯು ಎಂಬ ) | ಆಲುಮಂದಿ ಪುತ್ರರು ಆದರು. ಅಮಾವಸುವಿಂಗೆ ಭೀಮನಾಮಕನು ; ಆತಂಗೆ ಕಾಂಚನನು, ಕಾಂಚನನಿಂದ ಸಹತ್ರನು, ಆತಂಗೆ ಜಹ್ನು. 1 ಆ ಜಜ್ಜುವು ತನ್ನ ) ಯಾಗಶಾಲೆ ಯಂ ಗಂಗಾದೇವಿಯು ಜಲದಿಂ ನನೆ ಯಿಸುತಿರಲಾಗಿ, ಕೋಪದಿಂ ಕೆಂಪಾದ ಕಣ್ಣುಗಳನುಳ್ಳವನಾಗಿ ಭಗವಂ ತನಾದ ಯಜ್ಞಪುರುಷನಾದ ನಾರಾಯಣನಂ ಪರಮಧ್ಯಾನಸಮಾಧಿಯಿಂ ತನ್ನ ಹೃದಯದೊಳ ಗಾರೋಪಿಸಿ ಸಮಸ ಗಂಗಾಜಲವನ್ನೂ ಪಾನ ಮಾಡಿದನು. ಅದಂ ಕಂಡು ದೇವತೆಗಳು ಮುನಿಗಳು ಅವನಂ ಕುತು ಪಾರ್ಥನೆ ಮಾಡಿದರು. ಅವರ ಪ್ರಾರ್ಥನೆಯಿಂದ ಜಮ್ಮು ಮಹಾರಾಯನು ಮಗಳಾಗಿ ಭಾವಿಸಿ ಗಂಗೆಯಂ ಬಿಟ್ಟನು. ಆ ಜಹ್ನು ರಾಯಂಗೆ ಸುಮಂತನು ಪುತ್ರನಾದನು, ಆತಂಗೆ ಆಜಕನು, ಆತನಿಂದ ಬಲಕಾತ್ಮನು. ಅತಂಗೆ ಕುಶ ನು. ಅವನಿಗೆ ಕುಶಾಂಬನು, ಕುಶನಾಭನು, ಧೂರ್ತರಜಸ್ಸು, ವಸು ಎಂಬ ನಾಲ್ವರು ಪುತ್ರರಾದರು. ಆನಾಲರು ಪುತ್ರರ ಮಧ್ಯದಲ್ಲಿ ಕುಶಾಂಬ ರಾಯನು ಶತಕ ತುವಾದ ದೇವೇಂದ್ರಂಗೆ ಸಮಾನವಾದ ಪುತ್ರನು ತನಗುಂ ಟಾಗಬೇಕೆಂದು ತಪಸ್ಸು ಮಾಡಿದನು. ಅಂತು ಉಗತಸವಂ ಗೆಯ ಕುಶಾಂ ಬರಾಯನಂ ಕಂಡು ಶತಮನ್ಯುವು ತನಗೆ ಸರಿಯಾದ (ಪರಾಕ್ರಮವುಳ್ಳ ಪುತ್ರನೀತಂಗಾಗಬಾರದೆಂದು ತಾನೇ ಪುತ್ರನಾಗಿ ಜನಿಸಿದನು. ಆತನು ಗಾಧಿ ಯಂದು ಕೌತಿಕಾನ್ವಯದಲ್ಲಿ ಹುಟ್ಟಿದನು. ಆಗಾಧಿಯು ಸತ್ಯವತಿಯೆಂಬ ಕುಮಾರ್ತಿಯಂ ಪಡೆದನು, ಆಸತ್ಯವತಿಯಂ ಬೃಗುವಿನ ಕುಮಾರಕನಾದ ಖುಚಿಕನು ವರಿಸಿದನು. ಗಾಧಿರಾಯನು ಅತ್ಯಂತ ಕವಿಯಾದ ಅತಿವೃದ್ದ ನಾದ (ಬ್ರಾಹ್ಮಣನಾದ) ಖುಚಿಕಂಗೆ ಕನ್ನೆಯಂ ಕೊಡಲು ಇಷ್ಟವಿಲ್ಲದೆ ಒಂದು ಕಿವಿ ಕ್ಯಾಮವರ್ಣವುಳ್ಳುದಾಗಿ ಚಂದ್ರಸಂಕಾಶವಾಗಿ ವಾಯುವೇಗ ಪಾ-1, ಆಯುವೆಂಬಾತನು, ಆತ೦ಗೆ ಧೀಮಂತನು, ವಸು, ಶುತಾಯು ಇವರೇ ಮೊದಲಾದ-ಎಂದು ಕನ್ನಡ ಮಾತೃಕೆ: ಇದು ತಪ್ಪೆಂದು ತೋರುತ್ತದೆ. 2, ಸಂಸ್ಕೃತದ ಮೂಲದಲ್ಲಿ ದೇವರ್ಸಿಯು; ಎಂದಿದೆ.