ಪುಟ:ಚತುರ್ಥಾಂಶಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ ಟ` ಚತುರ್ಥಾ೦ತ ವುಳ್ಳದಾಗಿ ಸಾವಿರ ಸಂಖ್ಯಾ ಕವಾದ ಅಸ್ಪೃಂಗಳನ್ನು ಕನ್ಯಾಶುಲ್ಕವಾಗಿ ಕೊಂಡುಬಂದರೆ ಕನ್ನೆಯಂ ಕೊಟ್ಟೆನು, ಎಂದನು, ಆಮಾತಂ ಕೇಳಿ ಖುಚಿಕನು ವರುಣನೆಡೆಗೆಲ್ಲಿ ಅತ್ಮತೀರ್ಥದೊಳಗುತ್ಪನ್ನವಾದ ತಾದೃಶ ವಾದ ಅಸ್ಸಸಹಸ್ತವಂ ತಂದು ಕೊಟ್ಟು ದಿಂದ (ಗಾಧಿಯು ಆತನಿಗೆ) ಕನ್ಯಾ ದಾನವಂ ಮಾಡಿದನಾದಕಾರಣ ಖುಚಿಕನು (ಸತ್ಯವತಿಯ) ಪಾಣಿಗ್ರಹ ವಂ ಮಾಡಿದನು, ವಿವಾಹವಾದ ಬಳಿಕ ಆಯಕ್ಕನಿಗೆ ಸಂತಾನಾರ್ಥವಾಗಿ ಒಂದು ಚರುವಂ ನಿರ್ಮಿಸಿದನು. ಅದಂ ಕಂಡವಳಾಗಿ ತಾನು ಪತಿಯಂ ಕುರಿತು- ಕೇಳು ಸ್ವಾಮೀಾ! ನನ್ನ ತಾಯಿಗೆ ಕ್ಷತ್ರಶ್ರೇಷ್ಠನಾದ ಪುತ್ರ ತೃತ್ಯರ್ಥವಾಗಿ ಬೇwಂದು ಚರುವಂ) ಅನುಗ್ರಹಿಸಬೇಕು ” ಎಂದು ಪಾರ್ಥಿಸಲಾಗಿ; ಬೆಜತಿ ಚರುವೊಂದನುಂಟುಮಾಡಿ, “ ಕೇಳು ಸತಿಯೇ, ಈ ಚರುವು ನಿನಗೆ ; ಬೇರೆ ಚರುವು ನಿನ್ನ ತಾಯಿಗೆ ಕೊಡತಕ್ಕುದು ? ಎಂದು ಹೇಳಿ, ತಾನು ವನವಂ ಕುಲ ತು ತೆರಳಿದನು, ಆ ಚ ರುವಂ ತಾಯಿಗೆ (ಮುಜೆಸಲು) ಕೊಡುವೆ ಸಮಯದಲ್ಲಿ ಅವಳ ತಾಯಿ, 'ಕೇಳು ಮಗಳೆ ! ಲೋಕದಲ್ಲಿ ಪುರುಷನು ತನ್ನ ಪುತ್ರನ ಅತ್ಯಂತ ಗುಣರೂಪಂಗಳನಸೇ ಕ್ಷಿಸುವನು. ( ಯಾವನು ತನ್ನ ಪತ್ನಿಯ ತಮ್ಮನ ಗುಣರೂಪಗಳಲ್ಲಿ ಅಷ್ಟು ಆದರಣವನ್ನು ಮಾಡುತಿದ್ದಾನು ? ) ಆದಕಾರಣ ನಿನಗೆ ಕೊಟ್ಟ ಚರುವನ್ನು ನನಗೆ ಕೊಡು; ನನ್ನ ಚರು ನೀನು ತೆಗೆದುಕೊಂಡು ಭುಜಿಸು. ನನ್ನ ಪುತ್ರನಿಂದ ಸಕಲಭೂಮಂಡಲದ ಪಾಲನವು ಮಾಡತಕ್ಕುದು, ಬ್ರಾಹ್ಮ ಇಂಗೆ ಬಲವೀರ್ಯಸಂಪತ್ತುಗಳೇತಕೊ ?” ಎಂದು ನುಡಿಯಲಾಗಿ ; ಆಯಕ್ಕನು ತನ್ನ ಚರುವಂ ತಾಯಿಗೆ ಕೊಟ್ಟವಳಾದಳು. ಅನಂತರದಲ್ಲಿ ವನದಿಂದ ಬಂದ ಗವಿಯು ಸತ್ಯವತಿಯನ್ನು ಕಂಡು ” ಎಲೆ ಪಾಪಿ ? ಇದೇನು ಅಕ್ಷ ತ್ಯವನೆಸಗಿದೆ ! ನಿನ್ನ ಶರೀರವು ಅತ್ಯಂತ ರೌದ್ರವಾಗಿ ಕಾಣು ತಲಿದ್ದೀತು, ನಿನ್ನ ತಾಯಿಗೋಸ್ಕರ ಉಪಯುಕ್ತವಾದ ಚರುವು ನಿನಗೆ ಉಪ ಯುಕ್ತವಾದಂತಿದೆ. ನಿನಗೆ ಇದು ಯುಕ್ತವಲ್ಲ. ಆಚರುವಿನಲ್ಲಿ ನನ್ನಿಂದ ಸಕಲೈಶ ರ್ಯವಿರ್ಯ ಶೌರ್ಯಬಲಸಂಪತ್ತುಗಳಾರೋಪಿಸಲ್ಪಟ್ಟಿದ್ದು ವು. ನಿನ್ನ ಚರುವಿನಲ್ಲಿ ಅಖಿಲ ಶಾಂತಿಜ್ಞಾನ ತಿತಿಕ್ಷಾದಿ ಬ್ರಹ್ಮಗುಣ ಸಂಪತ್ತುಗೆ ೪ಾರೋಪಿಸಲ್ಪಟ್ಟಿದ್ದುವು. ಇಂತಹ ಚರುವ ನೀನು ವಿಪರೀತವಾಗಿ ಮಾಡಿ m ಟ ೧ ಎ ಎ ಎ