ಪುಟ:ಚತುರ್ಥಾಂಶಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© ಣ ೫೦ ವಿಷ್ಣು ಪುರಾಣ [ಅಧ್ಯಾಯ ಕೃಷ್ಣ ಕೇತು, ಅವನಿಂ ವೀತಿಹೋತ್ರನು, ಆತಂಗೆ ಭಾರ್ಗನು, ಅವನಿಂದ ಭಾರ್ಗಭೂಮಿಯು, ಅವನಿಂದ ಚಾತುರ್ವಣ್ರದ ಪ್ರವೃತ್ತಿಯು ಆದನು. ಈ ಪೂರ್ವೋಕ್ತರಾದ ರಾಯರುಗಳ ಅನ್ವಯದಲ್ಲಿ ಕಾಶೀರಾಜನ ಸಂತತಿಯು ಹೇಳಲ್ಪಟ್ಟಿತು. ಮುಂದೆ ರಜೆಯೆಂಬ ರಾಯನ ಸಂತತಿಯು ಹೇಳಲ್ಪಡುತಲಿದ್ದೀತು; ಸಾವಧಾನದಿಂದ ಆಲಿಸು. ಎಂಬಲ್ಲಿಗೆ ಪರಾಶರರು ಮೈಯಂಗೆ ನಿರೂಪಿಸಿದರೆ೦ಬ ಬಳಿಗೆ ಶ್ರೀವಿಷ್ಣು ಪುರಾಣದಲ್ಲಿ ಚತುರ್ಧಾ೦ಶದಲ್ಲಿ ಎಂಟನೆಯ ಅಧ್ಯಾಯಂ. ಸ ಒಂಬತ್ತನೆಯ ಅಧ್ಯಾಯ. ಕೇಳು ಮೈ ತೇರು : ರಜೆ ಎಂಬ ರಾಯಂಗೆ ಅತುಳವೀರ್ಯಸರಾ ಕ್ರಮರಾದ ಐನೂರುಮಂದಿ ಕುಮಾರರಾದರು. ದೇವಾಸುರಸಂಗ್ರಾಮಾ ರಂಭದಲ್ಲಿ ಪರಸ್ಪರವರೇಪ್ಪುಗಳಾದ (ದೇವತೆಗಳ ಅಸುರರೂ) ಬಹ್ಮದೆ ವರು ಸೇರಿ, ಬ್ರಹ್ಮದೇವರಂ ಕು ತು . ಕೇಳು, ಪಿತಾಮಹನೇ ! ನನ ಗೊಗೆದಿರುವ ಈ ವಿರೋಧದಲ್ಲಿ ಆರ ಸಕ್ಷ ಜಯವುಳ್ಳದಾದೀತು' ಎನಲು; ಬ್ರಹ್ಮದೇವರು- “ ಕೇಳಿ, ದೇವಾಸುರರಿರಾ ! ನಿನ್ನ ಪ್ರಯೋಜನಾರ್ಥ ವಾಗಿ ರಜೆ ಎಂಬ ರಾಯನು ಉದ್ಯತಾಯುಧವುಳ್ಳವನಾಗಿ, (ಆವ ಪಕ್ಷದಲ್ಲಿ ಯುದ್ಧವನೆಸಗುವನು, ಆ ಪಕ್ಷವು ಜಯಿಸುವುದು. ” ಎಂದ ಮಾತಂ ಕೇಳಿ ದೈತ್ಯರ್ಕಳಿಂದ ರಜೆ ಎಂಬ ರಾಯನು ಆತ್ಮ ಸಹಾಯಾರ್ಥವಾಗಿ ಯಾಚಿಸಲ್ಪ ಟ್ಟವನಾಗಿ ಈ ಮಾತಂ ನುಡಿದನು ಕೇಳಿ ದೈತ್ಯರಿರ ! ನಿಮ್ಮ ಸಹಾಯಾ ರ್ಥವಾಗಿ ದೇವತೆಗಳಂ ಜಯಿಸುವುದಕೋಸ್ಕರ ಯುದ್ಧ ಮಾಡಿದೆನಾದರೆ ಆಮೇಲೆ ನಿನಗೆ ನಾನು ಇಂದ್ರನಾದೇನು ” ಎಂದ ಮಾತಂ ಕೇಳಿ, ದೈತ್ಯರು “ ಹಾಗಾದರೆ ನಾವು ಈ ಮಾತಿಗೊಪ್ಪುವುದಿಲ್ಲ; ನನಗೆ ಇಂದ್ರನು ಪ್ರಸ್ತಾ ದನು. ಆತನಂ ಕುತೇ ನಾವೀಯುದ್ಯೋಗವಂ ಮಾಡಿದೆವು ಎಂದು ಹೇಳಿ, ದೈತ್ಯರು ಹೋಟುಹೋದರು. ತಳುವಾಯ ದೇವತೆಗಳಿ೦ದಲೂ ಅದೇ ಮೇರೆ ಪ್ರಾರ್ಥಿಸಲ್ಪಟ್ಟವನಾಗಿ, ಆ ರಜೆರಾಯನು ದೇವತೆಗಳ ಪಕ್ಷವಾಗಿ ಅನೇಕಾಸ ಸಂಘಾತಗಳಿಂದ ಸಕಲವಾದ ಅಸುರಬಲವಂ ಸಂಹಾರವಾ ಡಿದನು, ಈ ತೆಕದಿಂ ಶತ್ರು ಪಕ್ಷವು ನಿಕ್ಷೇಪವಾಗುತಿರಲಾಗಿ, ದೇವೇಂದ್ರನು