ಪುಟ:ಚತುರ್ಥಾಂಶಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ m. ವಿಷ್ಣು ಪುರಾಣ [ಅಧ್ಯಾಯ ಕೇಳು ಮೈತ್ರೇಯ ! ಆ ಪುರೂರವನ ಮಕ್ಕಳಲ್ಲಿ ರಂಭನೆಂಬ ನನು ಅಪತ್ರವಂತನು. ಕೃ ತವೃದ್ದನೆಂಬವನಿಗೆ ಪ್ರತಿಕ್ಷತ್ರನೆಂಬ ರಾಯನು; ಅವನಿಂದ ಸಂಜಯನು: ಆತನಿಗೆ ಜದನು : (ಆತನಿಗೆ ವಿಜಯನು) ಅವನಿಗೆ 1 ಕೃತನು, ಆತನಿಂದ ಕರ್ಯಧನನು, ಅವನ ಮಗ ಸಹದೇವನು ; ಆತನಿಂದ 3 ಅದಿನನು : ಅವನಲ್ಲಿ ಜಯತೇನನು; ಅವನ ಮಗ ಸಂಕ್ಷ ತಿಯು ; ಆತನ ಮಗ ಕ್ಷೇತ್ರ ಧರ್ಮನು ; ಈ ವಂಶಪರಂಪರೆಯು ಕ್ಷತ ವೃದ್ಧನಿಂದ ಆದುದು, ಅನಂತರದಲ್ಲಿ ನಹುಷಚಕ್ರವರ್ತಿಯ ವಂಶಕಿ೦ರ್ತ ನೆಯಂ ಮಾಡೆನು. ಎಂಬಲ್ಲಿಗೆ 3ಪರಾಶರರು ಮೈತ್ಯ೦ಗೆ ನಿರೂಪಿಸಿದರೆ೦ಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ನವಮೋಧ್ಯಾಯ೦. ಹತ್ತನೆಯ ಅಧ್ಯಾಯ. - ಕೇಳು ಮೈತ್ರೆಯ ನಹುಷಚಕ್ರವರ್ತಿಗೆ ಯತಿಯು, ಯಯಾ ತಿಯ ಎ, ಸಂಯಾತಿಯು, ಅರಾತಿಯು, ವಿಯಾತಿಯು ಕೃತಿಯು ಎಂಬ ಆತು ಮಂದಿ ಕುಮಾರರು ಅತಿಬಲಪರಾಕ್ರಮಶಾಲಿಗಳಾದರು. ಅವರಲ್ಲಿ ಯತಿ ಯು ರಾಜ್ಯವನಿಚ್ಛೆ ನಿದವನಾದನು. ಯಯಾತಿರಾಯನು ಭೂಪತಿಯಾ ದನು. ಯಯಾತಿಯು ದೇವಯಾನಿಯೆಂಬ ಪುಕಾಚಾರ್ಯರ ಕುಮಾರಿ ಯನ್ನೂ ಶರ್ಮಿಸೆಯೆಂಬ ವೃಷಸರ್ವನ ಮಗಳನ್ನೂ ಮದುವೆ ಮಾಡಿಕೊ೦ ಡನು. ಈ ವಿಚಾರದಲ್ಲಿ ಒಂದು ವಂಶಾನುಶ್ಲೋಕವಿದೆ-). ಶ್ಲೋ1 ( ಯದುಂ ಚ ದುರ್ವಸುಂ ಚೈವ ದೇವಯಾನೀ ವ್ಯಚಾಯತ | - ದುಹ್ಯಂ ಚಾನುಂಚ ಪೂರುಂಚ ಶರ್ಮಿ ಷ್ಠಾ ವಾರ್ಷಪರ್ವಣೀ !” ಆ ದೇವಯಾನಿ ಎಂಬುವಳು ಯದುವಂ ದುರ್ವಸುವಂ ಪಡೆದಳು ; ವೃಷಪರ್ವನ ಮಗಳಾದ ಶರ್ಮಿಷ್ಟೆಯು ದುಹ್ಯನಂ ಅನುರಾಯನಂ ಪೂರು ಎಂಬಾತನಂ ಪಡೆದಳು, ಶುಕ್ರಾಚಾರ್ಯರ ಶಾಪದಿಂದ ಯೌವನಕಾಲದಲ್ಲಿ ಯಯಾತಿಯು ಜರೆಯಂ ಪಡೆದನು, ಆಮೇಲೆ ಪ್ರಸನ್ನನಾದ ಶುಕ ನ ಅನುಗ್ರಹದಿಂದ ತನ್ನ ಜರೆಯಂ ಪರಿವರ್ತನೆ ಮಾಡಲು ಸಮರ್ಥನಾಗಿ) ಪಾ-1, ಕೇತುವು: 2, ಹರ್ಯ ರ್ಥನು, 3. ಅನೀಕನು-ಎಂದು ಕನ್ನಡ ಮಾತೃಕೆಯ ಪಾಠಗಳು.