ಪುಟ:ಚತುರ್ಥಾಂಶಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1184 m ಬತಿ' ವಿಷ್ಣುವುರಾಣ [ ಅಧ್ಯಾಯ ಬಾಹುಸಹಸ್ಸಮಂ ಪಡೆದನು, ಮತ್ತು ಅಧಮ್ಮಸೇವಾನಿವಾರಕನಾಗಿ ಧರ ದಿಂ ಪೃಥಿವಿಯನ್ನು ಆ೪ ಶತ್ರು ಪರಾಜಯವಂ ಮಾಡಿ1 ಅಖಿಲ ಜಗತ್ ಖ್ಯಾತ ಪುರುಷನಿಂದ ಮರಣವಂ (ಪಡೆಯಬೇಕೆಂದು ಪ್ರಾರ್ಥಿಸಿ ಪಡೆದನು (ಮತ್ತು ಅವನು ಆಶೇಷದ್ವೀಪಗಳೊಡಗೂಡಿದ ಪೃಥಿವಿಯನ್ನು ಚೆನ್ನಾಗಿ ಪಾಲಿಸಿದನು. ) ಅಷ್ಟು ಮಾತ್ರವೇ ಅಲ್ಲ, ಹತ್ತು ಸಹಸ್ರ ಕ್ರತುಗಳಂ ಮಾಡಿದನು. ಇಂತಹ ಕಾರ್ತ'ವೀರಾರ್ಜುನನ ನಗರಿಯನ್ನು ಲೆ.ಕದ ಪಾರ್ಥಿವರು ತಪೋದಾನ ಯಜ್ಞಗಳಿಂದ ಪಡೆಯದೆ ಇದ್ದರು. ಆತನ ರಾಜ್ಯ ದಲ್ಲಿ ನಷ್ಟದ್ರವ್ಯದ ಚಿಂತೆಯಿಲ್ಲ, ಈರೀತಿ ಎಂಬತ್ತೈದುಸಹಸ್ರ ವರ್ಷ ಅವ್ಯಾಹತವಾಗಿ ಆರೋಗ್ಯ ಶ್ರೀಬ೨ ಪೌರುಷವುಳ್ಳವನಾಗಿ ರಾಜ್ಯಭಾರವಂ ಮಾಡಿದನು. ಒಂದಾನೊಂದು ಸಮಯದಲ್ಲಿ ದಿಗ್ವಿಜಯಾರ್ಥವಾಗಿ ಬಂದ ಅಶೇಷ ದೈತ್ಯಗಂಧ ರಜಯದಿಂದುಂಟಾದ ಮಹದ್ದರ್ವವುಳ್ಳ ರಾವಣನು ನರ್ಮದಾಜಲದಲ್ಲಿ ಕ್ರೀಡಾವಗಾಹನಮದಾಕುಳನಾದ ಕಾರ್ತವೀರಾರ್ಜು ನನಿಂದ ಯತ್ನವಿಲ್ಲದೆ ಪಶುವಿನ ಪ್ರಕಾರದಲ್ಲಿ ಗ್ರಹಿಸಲ್ಪಟ್ಟವನಾಗಿ ನಗರದ ಏಕಾಂತಸ್ಸ ಲದಲ್ಲಿ ಕಟ್ಟಲ್ಪಟ್ಟನು. ಆ ತರ್ವಾಯದಲ್ಲಿ ಎಂಬತ್ತೈದುಸಾ ಸಿರ ವರ್ಷಗಳಮೇಲೆ ಭಗವಂತನಾದ ನಾರಾಯಣಾಂಶನಾದ ಪರಶುರಾವು ನಿಂದ ಅಂತಹ ಮಹಿಮೆಯನುಳ್ಳ ಕಾರ್ತವೀರ್ಯಾರ್ಜುನನು ಸಂಹರಿಸಲ್ಪ ಟ್ಟನು. ಆತಂಗೆ ನಲುಮಂದಿ ಪುತ್ರರು, ಅವರೊಳಗೆ ಪ್ರಧಾನರು ಐದು ಮುಂದಿ, ಶೂರಸೇನ, ವೃಷ್ಟಿ, ಮಧು, ಜಯಧ್ವಜ, ಕಾಲಕಂಫುರೆಂಬವರು. ಕಾಲಜಂಫುಂಗೆ ಕಾಲಜಂಪುರೆಂದು ನಲುವುಂದಿ ಪುತ್ರರಾದರು. ಅವರಲ್ಲಿ ಜೈಷ್ಣ ಪುತ್ರನು ವೀತಿಹೋತ್ರನು, ಅನ್ಯಕುಮಾರರಲ್ಲಿ ವೃಷ, ಭರತರೆಂಬು ವರಿಬ್ಬರು, ಅವರಲ್ಲಿ ವೃಷಂಗೆ ಮಧುವೆಂಬ ಮಗನು. ಆತಂಗೆ ವೃಪ್ತಿ ಮೊದಲಾದ ನೂಕುಮಂದಿ ಮಕ್ಕಳು. ಈ ವೃಷ್ಟಿಯಿಂದಲಿವನ ಕುಲವು ವೃಪ್ತಿ ಕುಲವೆನಿಸಿತು. ಮಧುಯೆಂಬವನಿಂದ ಮಧುರಾ ಎಂಬ ಪಟ್ಟಣವಾ ಯಿತು. ಯದುವಿನ ವಂಶೋತ್ಸನ್ನರಾದವರು ಯಾದವರೆನ್ನಿಸಿಕೊಂಡರು. ಎಂಬಲ್ಲಿಗೆ ಶ್ರೀ ಪರಾಶರರು ಮೈ ತಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಏಕಾದಶಾಧ್ಯಾಯ೦. ಪಾ-1, ಅರಾತಿಳ್ಕೊ೭ಪರಾಜಯಂ~ಎಂದು ಸಂಸ್ಕೃತ ಮಾತ್ರ ಕೆ. 6 m 2 ಎ ಟ | m ಲ ಣ © ಣ © ಣ