ಪುಟ:ಚತುರ್ಥಾಂಶಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vn ೧೫] ಚತುರ್ಧಾಂಶ ಪ್ರದ್ಯುಮ್ನನು ರುಕ್ತಿಯ ಮಗಳಾದ ರುಕ್ಕವತಿಯೆಂಬವಳನ್ನು ಮದುವೆ ಯಾದನು, ಅವಳಲ್ಲಿ ಅನಿರುದ್ಧನು ಜನಿಸಿದನು, ಅವನ: ರುಕ್ಕಿಯು ಚೌತಿ ಯಾದ ಸುಭದ್ರೆಯನ್ನು ವಿವಾಹವಾಡಿಕೊಂಡನು. ಅವನಿಗೆ ಅವಳಲ್ಲಿ ವಜ ನೆಂಬವನೊಗೆದನು, ಆ ನಂಗೆ ಪ್ರತಿಬಾಹುವೆಂಬಾತನು ಮಗನು. ಆ ಪ್ರತಿಬಾಹುವಿಂಗೆ ಸುತಾರವು ಪುತ್ರನಾದನು. ಈ ರೀತಿ ಯದುಕುಲದಲ್ಲಿ ಅನೇಕ ಶತಸಹಸಕುಮಾರರು ಅವತರಿಸಿದರು, ಅವರ ಸಂಖ್ಯೆಯನ್ನು ಅನೇಕ ಶತವರ್ಷಗಳಿಂದಲೂ ಎಣಿಸಿ ಹೇಳಲಸದಳ ವು. (ಏಕೆಂದರೆ?) ಧನು ರ್ವಿದ್ಯಾಭ್ಯಾಸ ಮುಂತಾದುದು ಶಿಕ್ಷಿಸುವ ಗೃಹೋಪಾಧ್ಯಾಯರುಗಳ ವಕೋಟಿಯು ಎಂಟುಸಾವಿರದ ಎಂಟುನೂ) ಮಂದಿಗಳಿರುವಾಗ. ಮಹಾತ್ಮರಾದ ಯದುಕುಲೋತ್ಪನ್ನರಾದ ಕುನೂರರ ಗಣನೆಯನಾವ ಮನು ಏನೆಸಗಬಲ್ಲನು ? ಏತಾದೃಶಾಸ೦ಖ್ಯಾತಕುಮಾರರೆಡನೆ ಯದುಪತಿಯಾದ ಆಹುಕನು ನಿಯತವಾಗಿದ್ದನು - ಎಲೈ ಮೈತ್ರೆಯ : ಈ ಯದುಕುಲವು ಅಸಂಖ್ಯಾತವಾಗಿ ವೃದ್ಧಿ ಮನೆಯುವ ಕಾರಣವೆಂತೆಂದರೆ-ಹಿಂದೆ ದೇವಾಸುರ ಯುದ್ಧ ದಲ್ಲಿ ಹತರಾದ ಮಹಾಬಲಿಷ್ಟರಾದ ರೈತರು ಮನುಷ್ಯರೊಳುತ್ಪನ್ನರಾಗಿ ಜನೋಪದ , ವಕಾರಿಗಳಾಗಿರುವುದು ಕಂಡು ಅವರ ನಿಗ್ರ ಹಾರ್ಥವಾಗಿ ದೇವತೆಗಳು ಯದುಕುಲದಲ್ಲಿ ಭೂಮಿಯಲ್ಲಿ ಸಂಭವಿಸಿದರು. (ಆನ ಪರಮಾತ್ಮನು ಅವ ರುಗಳ ಕಾರನಿರ್ವಾಹದಲ್ಲಿಯ, ಪಾಲನೆಯಲ್ಲಿಯ ವ್ಯವಸ್ತಿ ತನಾಗಿ ಧ್ವನೋ ಅಂಥ ಪರಮಾತ್ಮನ ಆಜ್ಞಾನುವರ್ತಿಗಳಾಗಿರಲಾಗಿ ಸಕಲ ವಾದ ವರು ಪುತ್ರಧನಾಭಿವೃದ್ಧಿಯನ್ನು ಹೊಂದಿದವರಾದರು.) ಇಂತಹ ವೈಷ್ಣವ ಶ್ರೇಷ್ಟರಾದ ವೃಷ್ಟಿಗಳ ವಂಶವನ್ನು ಅವನು ಕೇಳುತ್ತಲಿಹನೋ ಅವನು ಸಕಲಪಪಂಗಳಿ೦ ವಿಮುಕ್ತನಾಗಿ ವಿಷ್ಣುಲೋಕವನೈದುವನು. ಎಂಬ ಕಥಾವೃತ್ತಾಂತವಂ ಶ್ರೀಪರಾಶರರು ಮೈ ತೇಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಹದಿನೈದನೆಯ ಅಧ್ಯಾಯಂ ಸಂಪೂರ್ಣ ೦.