ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನತರ ಚಿಂತನು. ೧೦ಳಿ wwwnMrMrMrew • • ನಾಗದೆ ಅನುಭವಿಸುತ್ತಲೂ ರಾಜ್ಯಭಾರ ಕ್ರಮದಿಂದ ಸಂರ್ಗಫಲ ವನ್ನು ಆ ಸುಖಕ್ಕೆ ಅಂಗಪುಷ್ಟಿಯನ್ನಾಗಿ ಮಾಡಿಕೊಳ್ಳುತಲೂ, ಸಹಜ ವಾದ ತಪಸ್ಸಿನಿಂದ ಅದಕ್ಕೆ ನಿತ್ಯತೆಯನ್ನು ಕಲ್ಪಿಸಿಕೊಳ್ಳುತ್ತಲೂ ಇರ ಬೇಕು, ಈ ವಿಧವಾದ ಗಾರ್ಹಸ್ಥ್ಯವನ್ನು ಅವಲಂಬಿಸಿದಬಳಿಕ ರಾ ಜ್ಯಭಾರಕ್ಕೆ ಹೆಗಲನ್ನು ಕೊಡಬೇಕು. ಪ್ರಚಂಡಮಾರುತವಿದ್ದ ರೂ ಪ್ರಣವಿಲ್ಲದೆಹೋದರೆ ದೇಹವು ನಿಲ್ಲದಹಾಗೆ ಗುಣಾಢನಾದ ರಾಜ ನಿಲ್ಲದೆ ಹೋದರೆ ರಾಜ್ಯವು ನಿಲ್ಲುವದಿಲ್ಲ, ಪ್ರಜೆಗಳಿಗೆ ತಮ್ಮ ತಾಯಿ ಯಿಂದಲೂತಂದೆಯಿಂದಲೂ, ಗುರುಹಿರಿಯರಿಂದಲೂ, ಒದಗುವ ಸುಖ ಕ್ಕಿಂತಲೂ ಶಾಸ್ತ್ರ ಗಳಲ್ಲಿ ಶಿಕ್ಷಿತನಾದ ರಾಜನಿಂದ ಸಮಸ್ತ ಫಲಗಳೂ ಉಂಟಾಗುತ್ತವೆ. ರಾಜನು ಧರ ದಿಂದ ಚಲಿಸುವವನಾದರೆ ಭೂತ ಲನದಿಂದ ಪರ್ವತಗಳು ಚಲಿಸುವಹಾಗೆ ಪ್ರಜೆಗಳ ಸಮಸ್ತ ಮಾದೆ ಗಳೂ ಚಲಿಸುತ್ತವೆ, ಪತ್ನಿಯ ಮಾಂಗಲ್ಯಯೋಗದಿಂದ ಪತಿಯ ಆ ಯುಷ್ಯವು ಅಭಿವೃದ್ಧಿಯನ್ನು ಪಡೆಯುವುದು, ಪ್ರಜೆಗಳ ಭಾಗ್ಯ ಯೋಗದಿಂದ ಪಾರ್ಥಿವನು ಸುಖವನ್ನು ಪಡೆಯುತ್ತಾನೆ. ಎಲೈ ಪ್ರಿಯಕುಮಾರನೇ ! ನೀನು ಸರ್ವಜ್ಞನಾಗಿದ್ದರೂ ಸಂಪ್ರದಾಯವ ನ್ನು ಅನುಸರಿಸಿ ನಾನೂ ಸ್ವಲ್ಪವನ್ನು ತಿಳಿಸಿದೆನು ಇನ್ನು ಕಾಲವಿಳಂ ಬವನ್ನು ಮಾಡಕೂಡದು ನಿರೀಕ್ಷಕರಿಗೆ ತೊಂದರೆಯನ್ನು ಉಂಟುಮಾ ಡಬಾರದು ಎಂದು ಹೇಳಿ ಆಶ್ರಮದಲ್ಲಿ ಉಚಿತ ಧರ ಗಳನ್ನು ಆಚ ರಿಸುತ್ತಿರುವಂತೆ ಶಿಷ್ಯರಿಗೆ ಆಜ್ಞಾಪಿಸಿ ಸಹಜಾತರಿಂದೊಡಗೂಡಿದ ಚಮ ತ್ವಾರ ಕುಮಾರನೊಡನೆ ಚಿತಾ(ಮುನಿಯು ಅಸದಳ ಪುರಕ್ಕಾಗಿ ಪ್ರಯಾಣವನ್ನು ಬೆಳಸಿದನು. ಇಂತು ಚಮತ್ಕಾರಚಿಂತಾಮಣಿಯಲ್ಲಿ ದ್ವಿತೀಯಪ್ರಭೆಯು.