ಶ್ರೀ.... ತೃತೀಯಪ್ರಭಾ ಪ್ರಾರಂಭು. ಚಿತ್ರವಾಯನು-ಅಣ್ಣಾ ! ಇಗೋ ನಾನು ಹೇಳಿದಂತೆ ನಮ್ಮ ದೊಡ್ಡತಾತನಾದ ಕೃತಹಸ್ಯನೇ ಹೌದು, ನಮ್ಮ ಅರಸಿನಮಾತು ನಾದ ಮಾಯಾವಿಯೊಡನೆ ಏನೋ ಮಾತನಾಡುವಂತಿಲ್ಲೆ. (ಬಲಗಡೆ ನೋಡಿ) ಓಹೋಹೊ ! ರಾಜನ ರಹಸ್ಯ ಮಂತ್ರಿಯಾದ ಸರ್ವಮಾ ಯನು ತನ್ನ ಸೇವಕರಾದ ಕೂಟವಾಯ ಜಾಲವಾಯರೊಡನೆ ಇಲ್ಲಿ ಯೇ ಬರುತಲಿದಾನೆ. ಏನೋ ಕಾಣೆನಪ್ಪಾ, ಇಲ್ಲಿಯೇ ಯಾವುದೋ ಒಂದು ದೊಡ್ಡ ಕಾರ್ ಭಾರದ ಸಭೆಯು ನಡೆಯುವಹಾಗೆ ಕಾಣಬ ರುವುದು, ಎನ್ನುವವರಿಗೆ ಎಲ್ಲರೂ ಹತ್ತಿರಕ್ಕೆ ಬಂದು ಸೇರಲು ವಂದಿ ಸುವವರು ವಂದಿಸಿಯೂ, ಹರಸುವವರು ಹರಿಸಿಯೂ, ಚಪ್ಪಾಳೆ ತಟ್ಟು ವವರು ತಟ್ಟಿಯ ಕೇಕೆಹಾಕುವವರು ಹಾಕಿಯ, ಎಲ್ಲಸಡಗರ ಗಳೂ ತಡೆಯಿಲ್ಲದೆ ನಡೆದಮೇಲೆ ಕೆಲವರು ಮಂದಹಾಸದಿಂದಲೂ, ಮತ್ತೆ ಕೆಲವರು ಸಂಶಯಗ್ರಸ್ತರಾಗಿಯೂ ಒಬ್ಬನು ಬೇಜಾರಿನಿಂದಲ್ಲೂ, ಒಬ್ಬಿಬ್ಬರು ಕೂತೂಹಲದಿಂದಲೂ ಕುಳಿತುಕೊಂಡರು. ಕೃತಹಸ್ಯ-ಎಲಾ ಮೊಗೂ ! ಚಿತ್ರಮಾಯ ! ಮೊನ್ನೆ ತಾನೆ ಮೊ ಳದುದ್ದದ ಮೊಗುವಾಗಿದ್ದವನಿಗೆ ಆಗಲೆ ಮುಖದಮೇಲೆಲ್ಲ ಕುಡಿಫಾ ಸೆಯು ಮೊಳೆತು ಠೀವಿಯಾದ ಕೋರೆಯ ಹರೆಯದ ಪಡ್ಡೆ ಹುಡುಗನಾ ಗಿದ್ದೀಯೆ ಹತ್ತಿರಕ್ಕೆ ಬಾ ಮುಖವನ್ನು ನೀಡು ಮುತ್ತಿಟ್ಟುಕೊಳ್ಳು ತೇನೆ, ನನ್ನನ್ನು ಅಪ್ಪಿಕೊಳ್ಳುವಂತೆ ನಿಮ್ಮಣ್ಣನಿಗೆ ಹೇಳು, ನಿಮ್ಮ ತಂದೆ ಸತ್ತ ಮೇಲೆ ನಿಮ್ಮ ತಾಯಿಯಾದ ಮಾಯಾವತಿಯು ಬಹುಕಮ್ಮಟ ಪಟ್ಟು ನಿಮ್ಮನ್ನು ಸಲಹಿದಳು ನನಗೆ ಕಣ್ಣು ಕಾಣುವುದಿಲ್ಲ ತಲೆಯು ಅದುರುತಿದೆ ಹಲ್ಲುಗಳೆಲ್ಲ ಉದುರಿಹೋದುವು. ಬೆನ್ನಿಗೆ ಗೂನುಬಂದಿತು ತಲೆಯೆಲ್ಲ ಬೆಂಗಳಂತೆ ಬೆಳಗಾಯಿತು ಕೈಯ್ಯ ಊರುಗೋಲಿಲ್ಲದೆ , ಬ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೦೩
ಗೋಚರ