ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. ೩ vvyw+ * • • ••••••. mmmwwwx ಒಂದು ಹೆಜ್ಜೆಯನ್ನೂ ಇಡಲಾರೆನು, ರೆಪ್ಪೆಗೂದಲೆಲ್ಲ ನರೆಗೂದಲಾಗಿದೆ, ಬಾಯಜೊಲ್ಲಿನನೀರು' ಎಳೆಮಕ್ಕಳಿಗಿಂತ ಹೆಚ್ಚಾಗಿದೆ. ಹೀಗೆ ಮು ದುಕನಾಗಿ ಉಡುಗಿ ಅಡಗಿ ಮೂಲೆಯಲ್ಲಿ ಮೂದೇವಿಯಂತೆ ಕೂಡು ವುದಕ್ಕಿಂತ ಮಡಿಯುವುದೇ ಲೇಸು, ನರನಶಿರದ ನಲೆಗೂದಲು ಹರ ರಹೀಯಾಳಿಕೆಯೆಂಬ ಜಯಘೋಪದ ಮುಂದಣ ಧಜಪಟವಾಗಿರು ವುದು, ಮುದಿಯನನ್ನು ಕಂಡರೆ ಸದಯರಾದ ಸುಹೃದರೂ ಎದು ರಿಗೆ ಬಂದಾಗ ಹಿಂದಕ್ಕೆ ಸರಿಯುವರು, ಹೆಂಡರು ಸೇವೆಮಾಡಳು. ಮಕ್ಕಳು ಹೇಳಿದಂತೆ ಕೇಳುವುದಿಲ್ಲ, ಮಕ್ಕಳ ಚೇಷ್ಮೆಯು ಮನು ಜರಿಗೆ ಮದ್ದಾಗಿರುವುದು, ನದಿಯರ ನಡತೆಯು ಹಗೆಯಾಗಿ ತೋ ರುತ್ತದೆ, ಮುದುಕನ ಮಾತಿಗೆ ಬೆಲೆಯಿಲ್ಲ. ಅರಿಯದವನಾರೆಂದರೆ? ಮುದುಕನೆನ್ನುತ್ತಾರೆ. ಅರುಳುಮರುಳುಗಳು ಮುದುಕನಿಗೆ ಸೇರಿದ ವುಗಳು, ಕೆಲಸಕ್ಕೆ ಬಾರದ ಕಥೆಯಕಗ್ಗ ವು ಮುದುಕನ ಸ್ವತ್ತು. ಮುದುಕನ ಅನುಭವದ ಮಾತು ಮಕ್ಕಳಿಗೆ ತಿರುಕನ ಹಾಡಾಗಿರು ತದೆ, ಮುದುಕನು ಸುದತಿಯ ಶತ್ರವು, ಮುದುಕನ ಮೋರೆಯ ಮೇಲಣ ಚರ್ಮದ ತಿರಿಯು ನಾರಿಯ ನುಣುಪಾಗಿರುವ ನೀಳವಾದ ನೋಟಕ್ಕೆ ತಡೆಯಾಗಿರುವ ಪರದೆಯು, ಚಾಪಲ್ಯಕ್ಕೆ ಮುದುಕನೇ ತವರನೆ, ಬಗೆಬಗೆಯ ಹಂಬಲಿಕೆಗಳಿಗೆ ಮುದುಕನೇ ಸಿಂಹಾಸನ ಮೂದಿಗೂ ಬೆ, ಮುದಿ ಪಿಶಾಚಿ, ಎಂಬ ಮಾತುಗಳು ಮಾನಿನಿಯರಿಗೆ ಬಹು ರುಚಿಕರವಾಗಿರುವುವು 'ಮುದುಕನಿಗೆ ಮಾನವಿಲ್ಲ ಹದಿಬದೆಗೆ ಎದುರಿಲ್ಲ, ಎಂಬ ನಾಣ್ಣುಡಿಯು ಸಟೆಯಲ್ಲ. ನನಗೆ ಈ ಅವಸ್ಥೆಯ ಲ್ಲಿಯೂ ರಾಜಸೇವೆಯು ತಪ್ಪಿದ್ದಲ್ಲ. ಪುರುಷನಿಗೆ ಪರಸೇವೆಗಿಂತಲೂ ಮತ್ತೊಂದು ದೊಡ್ಡ ಮೃತ್ಯುವಿಲ್ಲವು, ಸೆರಯಲ್ಲಿರಬಹುದು, ನರಕ ದಲ್ಲಿ ಉರುಳಬಹುದು, ಕೊಗಳನ್ನು ಇರಿದುಕೊಳ್ಳಲೂ ಬಹುದು. ಪರಸೇವೆಯನ್ನು ಮಾಡುವುದು ಮಾತ್ರ ಬಲುಕಮ್ಮ, ಜರೆಯೂ ಪರ ಸೇವೆಯ ಎರಡೂ ಸೇರಿದ್ದರೆ ಮೃತ್ಯ ದೇವತೆಯ ಕಾಳರಾ ತಿಯ ಜೊತೆಗೂಡಿದಂತಾಗುವುದು, ಸೇವಕನು ತನ್ನ ಸ್ವಾಮಿಯ ದೋಷಗಳನ್ನೆಲ್ಲ ಮುಚ್ಚಿಡಬೇಕು, ಅವನ ಶತ್ರುವು ಗುಣಿಯಾದರೂ ಅವನಲ್ಲಿ ದೋಷವನ್ನೇ ಹೇಳಬೇಕು, ಅವನ ಸಾರವಿಲ್ಲದ ಮಾತುಗ 138