ವಿದ್ಯಾನಂದ. ೬ ೧ L ಸಾರಿ ಮುತ್ತಿಟ್ಟುಕೊಂಡರೆ ಸಂಪೂರ್ಣ ಸಂಪತ್ತಿನ ತೃಪ್ತಿಯುಂ ಟಾಗುತ್ತದೆ. " ಹೆತ್ತವರಿಗೆ ಮಕ್ಕಳು, ಬಿತ್ತಿದವರಿಗೆ ಬೆಳೆ, ಎತ್ತಿ: ದಮ್ಮನ ಕೈ ಬರಿಗೈ ” ಎಂಬ ನಾಣ್ಣು ಡಿಯು ಸಟೆಯಲ್ಲ. ಹರರ ಮಕ್ಕಳನ್ನು ಎಷ್ಟು ಸಾರಿ ಎತ್ತಿಕೊಂಡರೆ ತಾನೆ ಏನು ಪ್ರಯೋಜನ? ಜೋಗುಳವವಾಡುತ್ತಾ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ನಿದ್ರೆ ಬರಲು ಮನೆಗೆಲಸಗಳನ್ನು ಮಾಡುತಲಿರುವಾಗ ಎಚ್ಚೆತ್ತ ಕಂದನು ಹಸಿವೆಯಿಂದ ಅಳತೊಡಗಲು ಓಡಿಬಂದು ಹಾಲುಕೊಟ್ಟು ಸಮುದಾ ಯಿಸಿ ಮಡುಲಲ್ಲಿ ಎತ್ತಿ ಕೊಂಬ ಪುತ್ರವತಿಯ ಪುಣ್ಯವನ್ನು ನಾನು ಎಪ್ಪೆಂದು ಹೇಳಲಿ ? ಮನೆಯೊಳಗೆ ಎಲ್ಲಿಟ್ಟ ಪದಾರ್ಥಗಳು ಎಷ್ಟು ದಿವಸಗಳಾದರೂ ಅಲ್ಲಿಯೇ ಇರುವುವು. ಮಂದಿರದಲ್ಲಿ ಮುಂಬೆ ಗಾಲನಿಟ್ಟು ತೆವಳುತ್ತಾ ರಂಗವಲ್ಲಿಯನ್ನ೪ಸದಿರುವ ಮಕ್ಕಳಿಲ್ಲದ ಮೇಲೆ ಅಂತಹ ಹೆಂಗಸು ಈ ನೆಲದಲ್ಲಿದ್ದು ಫಲವೇನು ? ತಾಯಿತಂ ದೆಗಳೊಳಗೆ ಯಾರಾದರೊಬ್ಬರು ಕಯ್ಯಲ್ಲಿ ಹಣ್ಣನ್ನು ಹಿಡಿದು ಮಗೂ? ನಿನಗೆ ಯಾರು ಒಳ್ಳೆಯವರು ? ಎಂದರೆ, ಆಗಲಾಕಂದನು ಹಣ್ಣು ಯಾರ ಕೈಗೆ ಬರುವುದೋ ಅವರನ್ನು ಒಳ್ಳೆಯವರೆಂದು ಮುದ್ದು ಮುದ್ದಾಗಿ ಹೇಳುವಾಗ ತಾಯಿತಂದೆಗಳಿಗೆ ಉಂಟಾಗುವ ಆನಂದವೂ, ಮುದ್ದೂ, ಎಂಥಾದ್ದೊ ! ನೀವೇ ಯೋಚಿಸಿರಿ. ಮೊಗುವು ಮಮತೆಯಿಂದ ಅಮ್ಮಾ ! ಎಂದು ಅಪ್ಪಿಕೊಂಡಾಗ ಅದ ರ ಬಾಯಿಗೆ ಬಾಯನ್ನಿಟ್ಟು, ಮುತ್ತು ಕೊಡುವ ಭಾಗ್ಯವು ನನಗೆ ಕ್ಲಿಂದ ಬಂದೀತು ? ಸ್ನೇಹಭರಭರಿತರಾದ ದಂಪತಿಗಳ ಮಮತೆ ಯಸಾರದ ಮುದ್ದೆಗೇ ಮೊಗುವೆಂದು ಹೆಸರಲ್ಲವೆ ? ಅದನ್ನು ನಾನೆ ಭೀತರಲಿ? ಮನೆಗೆ ಬಂದವರು ನಿನಗೆಷ್ಟು ಮಂದಿ ಮಕ್ಕಳದ್ದಾ ? ಎಂದು ಕೇಳಿದಾಗ ನನ್ನ ಹಂಚಪಾಣಗಳೂ (4 ಮಕ್ಕಳಿಲ್ಲಮ್ಮಾ? ಎಂಬ ಐದಕ್ಷರಗಳ ರೂಪವನ್ನಾ೦ತು ಹೊರಗೆ ಬರುತ್ತವೆ. ಆತ್ಮ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೧
ಗೋಚರ