ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಂತಾಮಣಿ. ೧೦ಳಿ • ••••••••••••••• ಲೋಕಹಿತಮುಸಿಯು 'ಸಕಲದುರಿತಶಾಂತಿ' ಎಂಬ ಮಹಾಯಾಗವನ್ನು ಆರಂಭಿಸಿರುವಂತೆಯೂ, ಅದಕ್ಕಾಗಿಯೇ ಸಂಸಾರಸಹಿತನಾಗಿ ಕೂಡ ಲೇ ತನ್ನ ಆಶ್ರಮಕ್ಕೆ ಹೊರಟುಬರುವಂತೆಯೂ ಹೇಳಿಕಳುಹಿಸಿ ಇರು ವನು,ಈಗಲೇ ಹೊರಡಬೇಕುಎಂದು ಹೇಳಿ ಸಕಲ ಸಲಕರಣೆಗಳನ್ನೂ ಸಿದ್ಧ ಪಡಿಸಿಕೊಂಡು ಪ್ರಯಾಣಸನ್ನದ್ಧನಾಗಿ ಹೊರಡುತ್ತಾ ನನ್ನನ್ನು ಅನಾದರದೃಷ್ಟಿಯಿಂದ ನೋಡಿ ಒಳ್ಳೆಯದು, ನಮ್ಮ ಪುರೋಹಿತರ ಸಂ ಗಡ ಮಾತನಾಡಿ ವರಮಾನವನ್ನು ಕಳುಹಿಸುತ್ತೇವೆ, ಎಂಬದಾಗಿ ಅರ್ಧಅರ್ಧವಾಗಿ ಮಾತನಾಡುತ್ತಲೇ ಹೊರಟೇಹೋದನು. ಅಯ್ಯಾ ! ಚಿತ್ರ ಮಾಯಕುಮಾರನೇ ! ಬೋಧಚಂದ್ರನು ಹೀಗೆ ಮಾಡಿದುದು ನಮ್ಮ ಪ್ರಭುವಿಗೂ ನನಗೂ ಆಶಸ್ಸ ವಧೆಯಲ್ಲವೊ ! ಮುಸುಕಿನೊಳ ಗಣ ಗುದ್ದಲ್ಲವೇ ? ಮಾಡತಕ್ಕದ್ದೇನು ? ಆ ಕನ್ಯಾರತ್ನವು ಭುವನೈಕ ಮಂಗಳಗುಣಾಕರನಾದ ಚಮತ್ಕಾರಕುಮಾರನಲ್ಲಿ ಅನುರಕ್ತಳಾಗಿರುವ ಳೆಂಬ ಸುದ್ದಿಯು ಮೂರುಲೋ ದಲ್ಲಿಯೂ, ಮೊದಲೇ ಹರಡಿಕೊಂಡಿದೆ ಈವಿಷಯವನ್ನು ದಿಗ್ಗ ಳನಿಗೆ ನಾನು ಮೊದಲೇ ತಿಳಿಸಿದೆನು, ಆದರೆ ಅವನು ನನ್ನ ಮಾತಕೇಳಲಿಲ್ಲ, ಅದಕ್ಕೆ ಇದೇಫಲ. ಲೋಕದಲ್ಲಿ ಮಹತ್ತರವಾದ ವೈರವೆಂಬ ತರುವಿಗೆ ತಾಯಿಬೇರು ಪರತರುಣಿ ಯಚಿಂತೆಯೇ ಎಂಬವಿಷಯದಲ್ಲಿ ಸಂದೇಹವಿಲ್ಲ. ಇದಲ್ಲದೆ ದುರ್ಗಪಂಕದಲ್ಲಿಯೂ ಕೇಡಿನ ಮೊಳೆಯೊಂದು ಮೊಳ ತೆ ಚಿಗುರುತ್ತಿದೆ, ಅದೂ ಕಡೆಗೆ ಇನ್ನೆಂತಹ ಹಣ್ಣನ್ನು ಬಿಡುವುದೊ ಕಂಡದ್ದಲ್ಲ. ದಿಗ್ಗ ಳನಿಗೆ ಕೇಡುಗಾಲಕ್ಕಾಗಿಯೇ ಇಂತಹಬುದ್ಧಿಗಳೆಲ್ಲ ಉಂಟಾಗುತಲಿವೆ. ದಿಗ್ಗಳನು ತನ್ನ ದಾಯಾದಿಗಳಾದ ಅಗ್ನಿಕಂಧರ, ಅಪಶದ, ರಾಸಭ, ಎಂಬ ಮೂವರು ತಮ್ಮಂದಿರಿಗೂ ನ್ಯಾಯವಾಗಿ ಕೊಡಬೇಕಾದ ದಾಯಭಾಗವನ್ನು ಕೊಡದೆ ಅಧಿಕಾರದ ದರ್ಪದಿಂದ ಅಟ್ಟಿಬಿಟ್ಟನು, ಅವರು ಮೂವರೂ ಊರುಬಿಟ್ಟು ಹೋಗುವಾಗ ಹತ್ತು ಹದಿನಾಲ್ಕು ಸಾವಿರ ಮಂದಿ ಸೈನಿಕರು ದಿಗ್ಗ ಳನ ದೋಷವನ್ನು ಸಹಿಸ ಲಾರದೆ ಅವರನ್ನು ಹಿಂಬಾಲಿಸಿ ಹೊರಟುಹೋದರು. ಇವರೆಲ್ಲರೂ ಇವನಮೇಲಣ ದ್ವೇಷದಿಂದ ಜನಾಲಯವೆಂಬ ದುರ್ಗವನ್ನು ಮಾಡಿ ಕೊಂಡು ರಂಧ್ರವನ್ನು ನಿರೀಕ್ಷಿಸುತಲಿದಾರೆ, ಮತ್ತು ಹೇಗಾದರೂ