ಚಮತ್ಕಾರ ಚಿಂತಾಮಣಿ, (೧೧೧ wwwuvv- 1• • • • •
- * * +v + + # ** * * *
“ಮಹಾರಾಜನಸಂಪತ್ತನ್ನು ನೋಡಿ ಮನಸೋತು ಹೋಗಲು ಆಗ ಬೋಧಚಂದ್ರನಿಗೆ ಅಪರಿಮಿತವಾದ ಆನಂದವು ಉಂಟಾಗದೆ ಇರದು ಗಂಡು ಮಕ್ಕಳಲ್ಲದ ಈ ಬೋಧಚಂದ್ರನಿಗೆ ಅಂತಹಅಳಿಯನೂ ದೊರೆ ತು ಆ ಆಪಾರವಾದ ಐಶರವೂ ಇವನಿಗೇ ಸೇರಿ ಚಿಂತಾಮಣಿಯಲ್ಲಿ ಹುಟ್ಟುವ ಮಗನು ಯಾಗಾಲಯಕ್ಕೂ ದುರ್ಗಪಂಕಕ್ಕೂ ಏಕಾಧಿಪ ತಿಯಾದರೆ ಆಗಬೋಧಚಂದ್ರನ ಸಂತೋಷಕ್ಕೆ ಎಣೆಯಾವುದು ? ಈಗ ಬೋಧಚಂದ್ರನು ಹೆರರಮಾತನ್ನು ಕೇಳಿಕೊಂಡು ಮಾಡುತ್ತಿರುವ ಕಪಟೋಪಾಯಕ್ಕೆ ನಾವು ಮಾಡುವ ಈ ಕುಟಿಲೋಪಾಯವೇಸರಿ ಸುಳ್ಳು ಹೇಳಿ ವಂಚನೆತೋರಿ, ಮಾಯವಾಡಿ, ಬಲಾತ್ಕರಿಸಿ, ಹೆರ ರನಾರಿಯರನ್ನು ತರುವುದು ನಮಗೆ ತಲೆಯಾಂತರದಿಂದಲೂಬಂದಿರುವ ದಾರಿಯೇ ಆಗಿದೆ ಇದಕ್ಕೆ ಚಿಂತೆಯಾಕೆ ? ಆದರೆ ಈ ಸಂಧರ್ಭದಲ್ಲಿ ಸರ್ವವಾಯನು ತನ್ನ ಸರ್ವ ಸನ್ನಾಹವನ್ನೂ ತೊರಿ.ಲೋಕಹಿತನ ರೂಪ ವನ್ನು ತಾಳಿ ನಮ್ಮ ಮಹಾರಾಜನಿಗೆ ಸಹಾಯಮಾಡಬೇಕು. ಇಪ್ಪಾ ದರೆ ನಮ್ಮ ಅರಸಿನ ಹರಕೆ ಕೈಗೂಡಿತು. ಈ ಜಾಲವಾಯ-ಕಂದಾ ! ನಿನ್ನ ಯೋಚನೆಯು ಬಲು ಅಂದ ವಾಗಿದೆ. ಮೋಸಗೊಳಿಸುವುದಕ್ಕೆ ಒಪ್ಪುತಾನೆಯೋ ಇಲ್ಲವೋ ತಿಳಿ ಯದು, ಆದರೂ ಸರ್ವಮಾಯನು ಸರಿಮಾಡದೆ ಇರಲಾರ ಈ ನಿನ್ನ ಯೋಚನೆಯು ನನಗೆ ಮೊದಲು ಹೊಳೆಯದೆ ಹೋದರೂ ಮಾಯಾ ವತಿಯು ಹೋಗುವಸಮಯದಲ್ಲಿ ಮಾತ್ರ ಅಸದಳಪುರದವರನ್ನು ದಾ ರಿಯೊಳಗೆ ಯಾರನ್ನು ಕಂಡರೂ ಅಲ್ಲಿಯೇ ಮುಗಿಸಿಬಿಡು, ಎಂಬದಾಗಿ ಈಗ ಭಾವಿಸುತ್ತೇನೆ ಮಾಯಾವತಿಗೆ ಸಾವಿರಾನೆಗಳ ಬಲವುಂಟು ಮಾಯಾಬಲದಿಂದ ಮರೆಯೊಳಿದ್ದು ಸಿಕ್ಕಿದವರನ್ನೆಲ್ಲ ಒಕ್ಕಲಿಕ್ಕದೆ ಬಿ ಡುವುದೇ ಇಲ್ಲ. ವಂಚಿಸಲು ಯತ್ನಿಸಿದವರನ್ನು ವಂಚನೆಯಿಂದಲೇ ಗೆಲ್ಲಬೇಕು, ಭಲಾ ! ಭಲಾ ! ಇಗೋಮಹಾರಾಜನು ಇಲ್ಲಿಯೇ ಬರುತಲಿದಾನೆ, ಸರ್ವಮಾಯನು ಎಲ್ಲಿ ಬಿಡುತ್ತಾನಪ್ಪಾ ? ನಾನು ನೀ ನು ಚಿತ್ರಮಾಯ, ವಿಚಿತ್ರ ಮಾಯ ಮೊದಲಾಗಿ ಇಲೋಕದಲ್ಲಿ ಎಷ್ಟು ಮಂದಿ ಮಾಯಾವಿಗಳಿರುವರೋ ಇವರೆಲ್ಲರ ಮಾಯೆಯೂ ಸರ್ವಮಾ