ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿಃ ೧೧ಳಿ ಯೆಂಬ ಮಹಾ ಹೋಮವನ್ನ ಆರಂಭಿಸಿದಾನೆ, ಇದುವರೆಗೆ ಮೂರು ಸಾರಿ ಸಂಕಲ್ಪಿಸಿ ಯಜ್ಞದೀಕ್ಷಿತನಾಗಿ ಕುಳಿತುಕೊಂಡನು, ಈ ಅರ ಇದಲ್ಲಿ ಸೇರಿಕೊಂಡಿರುವ ಚಿತ್ರವಾಯು ವಿಚಿತ್ರವಾಯರೆಂಬ ಇಬ್ಬ ರು ಪ್ರಬಲರಾದ ಮಾಯಾವಿಗಳು ಆಗಾಗಬಂದು ಅಗ್ನಿಗುಂಡದಲ್ಲಿ ರಕ್ತ ದಮಳೆಯನ್ನು ಸುರಿಸಿ ಶಾಂತಿಕರ ವನ್ನು ಹಾಳುಮಾಡುತ್ತಿರುವರು. ಈ ವ್ಯಸನವನ್ನು ಸಹಿಸಲಾರದೆ ಮುನಿಯು ಅಸದಳ ಪುರಕ್ಕೆ ಹೋಗಿ ವಿಘ್ರ ಪರಿಹಾರವನ್ನು ಮಾಡಿಸಲು ಚಮತ್ಕಾರನಿಂದೊಡಗೂಡಿದಅವತಾ ರವಾಹನನನ್ನು ಕರೆತರಬೇಕೆಂದು ಹೋಗಿದಾನೆ, ಅವರನ್ನು ಕರೆ ತಂದು ನಿರ್ವಿಘ್ನವಾಗಿ ಹೋಮವು ಪೂರ್ತಿಯಾದಕಡಲೇ ಬೋಧ ಚಂದ್ರನು ಇಲ್ಲಿಂದ ಪ್ರಯಾಣಮಾಡುತ್ತಾನೆ. ಅದುವರೆಗೂ ಇಲ್ಲಿಯೇ ಇರಬೇಕಾಗಿದೆ. (ಮರೆಯಲ್ಲಿರುವ ಮಾಯಾವಿಗಳು ಒಬ್ಬರಮುಖ ವನ್ನು ಮತ್ತೊಬ್ಬರುನೋಡಿ, ಅಯ್ಯೋ ಕಪಟವನ್ನರಿಯದವಟುವು, ತನ್ನ ಗುರುವಿನ ಕೃತ್ರಿಮವನ್ನೇ ತಾನು ಅರಿಯ ! ಇಷ್ಟು ಗುಟ್ಟಾಗಿ ಚಮತ್ಕಾರಚಿಂತಾಮಣಿಯರ ಕಲ್ಯಾಣಮಂಗಳವನ್ನು ನೆರವೇರಿಸಬೇ ಕೆಂದೇಲೋಕಹಿತನ ಉಪಾಯಪಯೋಗ ಎಂದುಕೊಳ್ಳುವರು.) - ಸುರವತ.ಎಲೈ ಪ್ರಿಯನೇ ! ಲೋಕಹಿತಮುನಿಯು ಮಹಾತ ಪೊಸಿಧಿ,ಎಂದು ಮೂಲೋಕದಲ್ಲಿಯೂ ಹೆಸರುವಾಸಿಯನ್ನು ಪಡೆದಿದಾ ನೆ, ಇಂಥವನು ಆ ಸೊಪ್ಪಿನ ತೋಟದ ಗುಮ್ಮಗಳಿಗೆ ಹೆದರುವುದು ಎಂ ದರೇನು ? ಇದೇನೋ ಬಹಳ ಅಕ್ಷರವಾಗಿದಯಲ್ಲ. ಮತ್ತು ಜಿತಾಕ್ಷ ಮುನಿಯೊಡನೆ ಈತನಿಗೆ ಮಹತ್ತರವಾದ ವಿವಾದ ಉಂಟಾಯಿತು. ಆಗ ಮಹಾತಪಸ್ಸನ್ನು ಮಾಡಿ ಒಬ್ಬ ಬ್ರಾಹ್ಮಣ'ಕುಮಾರನಿಗೆ ಪ್ರಾಣ ದಾನವನ್ನು ಮಾಡಿದನಂತೆ, ಒಬ್ಬ ಚಂಡಾಲವೇಷಧಾರಿಗೂ ಸ್ವರ್ಗಸು ಖವನ್ನು ಕಲ್ಪಿಸಿದನಂತೆ. ಬೇರೇಲೋಕವನ್ನೇ ಸೃಸ್ಮಿಸಲು ಯತ್ನಿಸಿದ ನಂತೆ, ಮತ್ತೊಬ್ಬ ದೇವತಾಸ್ತಿಯನ್ನು ಶಿಲೆಯಾಗುವಂತೆ ಶಪಿಸಿದ ನಂತೆ, ಇವೇ ಮೊದಲಾದ ಅವನ ಅದ್ಭುತಚರಿತೆಗಳು ಲೋಕದಲ್ಲಿ ಪ್ರತ ಖ್ಯಾತಗಳಾಗಿವೆ. ಹೀಗಿರಲು ನಿನ್ನ ನುಡಿಯು ಸೋಜಿಗದ ಮಾತಾ ಗಿದೆ. 15