ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿಃ ೧೧೫ " - - Y, * * * * * * - ಜ ನೋಡುವೆಯಂತೆ, (ಎನ್ನುವವರೆಗೆ ದಿಗ್ಗ ಳನೂ ಸರಮಾಯನೂ ದೂರದಲ್ಲಿ ವಿಮಾನದಿಂದಿಳಿದು ಅದನ್ನು ಅಲ್ಲಿಯೇ ಇರಹೇಳಿ ಆಶ್ರಮ ದೊಳಕ್ಕೆ ಪ್ರವೇಶಿಸುವರು). ದಿಗ್ಗ ಳ-ಪ್ರಿಯಸಚಿವಾ, ಸರ್ವಮಾಯ! ಲೋಕಹಿತನ ತಪೋ ವನದ ಮಹಿಮೆಯನ್ನು ಏನಹೇಳಲಿ ! ಇತ್ತನೋಡು ಈ ಕೊಬ್ಬಿದ ಸಿಂಹವು ಆಕಳಿಸಿ ಬಾಯಿತೆರೆದಾಗ ಕಾಣಬರುವ ಅದರ ಕೊರೆಹ ಇನ್ನು ಹತ್ತಿರದಲ್ಲಿ ಚೆಲ್ಲಾಟವನ್ನು ಆಡುತ್ತಿರುವ ಆನೆಯ ಮರಿಯು ಬಿಳುಪಾದ ತಾವರೆಯ ದಂಟೆಂದು ತಿನ್ನಲಿಕ್ಕೆಳಸಿ ತನ್ನ ಸೊಂಡಲಿನಿಂದ ಸೆಳೆಯುತ್ತಿದೆ. ಈ ಗುಡ್ಡದ ಬುಡದಲ್ಲಿ ಓಡಿಯಾಡುತ್ತಿರುವ ಹಸು ವಿನ ಕರುವು ತನ್ನ ತಾಯಿಯು ಎಲ್ಲಿಯೋ ಪಕ್ಕದಲ್ಲಿ ಮೇಯಲಿಕ್ಕೆ ಹೋಗಿರುವುದರಿಂದ ಹಸಿವೆಯನ್ನು ತಾಳಲಾರದೆ ಪಕ್ಕದಲ್ಲಿ ಮಕ್ಕಳಿಗೆ ಅಕ್ಕರೆಯಿಂದ ಹಾಲನ್ನು ಕುಡಿಸುತ್ತಿರುವ ಹೆಣ್ಣು ಹುಲಿಯ ಕೆಟ್ಟ ಲಲ್ಲಿ ಆ ಮರಿಗಳನ್ನು ಓರೆಗೆ ತಳ್ಳುತ್ತಾ ತಾನೇ ಹಾಲನ್ನು ಕುಡಿಯುತ ಲಿದೆ. ನಮಗೆ ಹಗೆಯಾದರೂ ಈ ಸಂದರ್ಭದಲ್ಲಿ ಮುನಿಯ ತಫೋ ಮಹಿಮೆಯು ಕೊಂಡಾಡತಕ್ಕುದಾಗಿದೆ. (ಎನ್ನುವವರೆಗೆ ಹತ್ತಿರಕ್ಕೆ ಬಂದ ಜಾಲವಾಯ ಕೂಟವಾಯರನ್ನು ಕಂಡು ಅವರೊಡನೆ ಮಾತ ನಾಡಬೇಕಾದ ವಿಷಯಗಳನ್ನೆಲ್ಲ ಮಾತನಾಡಿ ಮಾಯಾಬಲದಿಂದ ತಮ್ಮ ರೂಪವು ಇತರರಿಗೆ ಕಾಣಬರದಂತೆ ಕಲ್ಪಿಸಿಕೊಂಡು ಮುಂದರಿ ಯುವರು). ಸರ್ವಮಾಯು-ಎಲೈ ರಾಜೇಂದ್ರನೇ ! ಇನ್ನು ನನಗೇನೂ ಭಯವಿಲ್ಲ, ತಿರಸ್ಕರಣಿಯ ಮಹಿಮೆಯಿಂದ ನಮ್ಮ ಆಕಾರವು ಹೊರ ರಿಗೆ ಕಾಣುವುದಿಲ್ಲ. ನನ್ನ ಶಬ್ದವೂ ಕೇಳಬರುವುದಿಲ್ಲ. ಹೆರರ ಆಡ ಇತವೆಲ್ಲವೂ ನಮಗೆ ಗೋಚರಿಸುವುದು. ನಿಜವತ-ಅಯ್ಯಾ ಮಿತ್ರಮಣೇ ! ನಿನ್ನ ಮಾನವೇಂದ್ರನು ಈ ಯಜ್ಞಕ್ಕೆ ಬರುವಾಗ ಸಂಸಾರಸಹಿತನಾಗಿ ಬರಲು ಕಾರಣ ವೇನು ?