ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧nv ವಿದ್ಯಾನಂದ.

      • * • ', ' - /# « - - Vryl+

ದುಬಗೆದು ಬೊಧಚಂದ್ರನನ್ನು ನಾನು ಇದುವರೆಗೂ ನಿಗ್ರಹಿಸದೆಬಿಟ್ಟ ದ್ದು ತಪ್ಪಾಯಿತು, (ಆಕಾಶದಲ್ಲಿ ದೃಷ್ಟಿಯನ್ನು ಇಟ್ಟು ಮಾಸೆಯನ್ನು ಎಡಗೈಯಿಂದ ಹುರಿಮಾಡುತ್ತಾಎಲಾ, ಪೋರಾ, ಬೋಧಾ ! ನಿನಗೆ ಇಷ್ಟು ಪೊಗರುಬಂದಿತೆ ? ಸಂಧಾನವನ್ನು ಮಾಡತೊಡಗಿದೆಯಾ ? ಕೃ ತಹಸ್ತನು ನಿನ್ನ ಯೋಗ್ಯತೆಯನ್ನೆಲ್ಲಾ ನನಗೆ ತಿಳುಹಿದನು. ನಾನು ಮದನ ಬಾಣಗಳಿಂದ ಹತನಾಗಿರುವೆನು, ಆದುದರಿಂದಲೇ ನಿನ್ನನ್ನು ಇ ದುವರೆಗೂ ಮುಗಿಸಿಕೊಳ್ಳದೆ ಬಿಟ್ಟಿರುವೆನು. ಆಗಲಿ, ಈ ಚಿಂತಾಮ ಣಿಯು ನನ್ನ ಕೈ ಸೇರಲಿ, ಆಮೇಲೆ ನಿನ್ನ ಪಾಡು ಏನಾಗುವದೋ ನೋಡುವೆ.” ( ಎಂದು ಹಿಂದಿರುಗಿ) ಸರ್ವಮಾಯ ! ಇನ್ನು ಸಾವಕಾ ಶಮಾಡಬೇಡ, ನಡೆ, ಹೋಗೋಣ. ನಾನು ತ್ರಿಲೋಕ ವೀರನಾದ ರೂ ಈಗ ಕಳ್ಳತನದಿಂದ ವೇ ಪ್ರವನ್ನು ತಾಳಬೇಕಾಯಿತು, (ಎಂದು ನಾ ಲರೂ ಸಲ್ಪ ಮುಂದೆ ಹೋಗಿ ಬಂದು ಸರೋವರದಬಳಿ ಇಬ್ಬರು ಸಖಿ ಯರೊಡನೆ ಬಳಲುತ್ತಾ ಮಾತನಾಡುತಿರುವ ಒಬ್ಬ ಕನ್ವೇಯನ್ನು ಕಾ ಣುವರು). ದಿಗಳ... ಅಯ್ಯಾ ಸರ್ವಮಾಯ ! ಇದೇನು ಕನಕ ಮಲ್ಲಿಕಾ ಲತೆಯೋ, ಮಿಂಚಿನ ಬಳ್ಳಿಯೋ, ಅಥವಾ ಮಾನಿನೀ ರತ್ನವೋ, ಅರಿ ಯೆನು. ಇದೇನು ಚಂದ್ರು ಬಿಂಬವೋ, ಅಂದವಾದ ಕೆಂದಾವರೆಯೋ ರನ್ನಗನ್ನಡಿಯೋ, ಇಲ್ಲವೇ ದಿವ್ಯಸುಂದರಮುಖವೊ ? ಗೊತ್ತಿಲ್ಲ. ನಾನು ಬಣ್ಣಿಸಲಾರೆ ; ಮುಂದಕ್ಕೆ ನನ್ನ ಕೊರಳಿನಿಂದ ಮಾತುಗಳು ಹೊರಡವು, ಸ್ಮತಿಯು ತಪ್ಪುತಲಿದೆ. ಕಣ್ಣು ಗಳಲ್ಲಿ ಆನಂದ ಬಾಷ್ಪ ವುತುಂಬುತಲಿದೆ. ಕಾಮಬಾಣಗಳ ಇರಿತವನ್ನು ನಾನು ತಾಳಲಾರೆ, ನಾನೀನೆಲದಲ್ಲಿ ಜನ್ನಿಸಿದ್ದಕ್ಕೂ, ನನಗೀ ಕಣ್ಣುಗಳು ಉಂಟಾದ್ದ ಕ್ಯ, ಇದಕ್ಕಿಂತ ಹೆಚ್ಚಿದಫಲವನ್ನು ಕಾಣೆನಯ್ಯ ! ನೀನು ಯಾವವೇಷವನ್ನು ತಾಳೆಂದರೂ ತಾಳುತ್ತೇನೆ, ಯಾವ ಅಕಾರವನ್ನು ಮಾಡೆಂದರೂ ಮಾಡುತ್ತೇನೆ, ಈ ಕನ್ಯಾರತ್ನವು ನನ್ನ ಕೈ ಸೇರುವಂತೆ ಮಾಡಯ್ಯ; ಯಾವಷ್ಟೇವವೂ ನಿನಗೆ ದಾಸನಾಗಿರುತ್ತೇನೆ