ಚಮತ್ಕಾರ ಚಿಂತಾಮಣಿಃ | ೧೧ ದಿಗ್ಗ ಳಸಖೇ ! ಕೇಳಿದೆಯ ? ನೋಡಿದೆಯ ? ಮುನಿಹತಕ ರೆಲ್ಲರೂ ಅಂತರಂಗದೊಳಗೆ ನನ್ನಲ್ಲಿ ದ್ವೇಷವನ್ನೇ ಸಾಧಿಸುತಲಿದಾರೆ. ಇವರನ್ನೆಲ್ಲಾ ಇದುವರೆಗೂ ನಾನು ಜೀವಸಹಿತವಾಗಿ ಉಳಿಸಿದುದೇ ತಪ್ಪಾಯಿತು, ಆಗಲಿ ? ಈ ನನ್ನ ಕೆಲಸವೊಂದು ಕೈಗೂಡಲಿ ಆ ಮೇಲೆ ಇವರೆಲ್ಲರನ್ನೂ ಯಜ್ಞಪಶುಗಳನ್ನಾಗಿಮಾಡುತ್ತೇನೆ, (ಎಂ ದು ಹಲ್ಲನ್ನು ಕಡಿಯುವನು) ಪ್ರಿಯಚರಿತೆ-ಸಖಿ ! ಚಿಂತಾಮಣಿ ! ಒಂದು ದಿನ ಒಬ್ಬ ಮು ದುಕನು ಬಂದು ದಿಗ್ಗ ಳಭೂಪಾಲನನ್ನು ಬಹಳವಾಗಿ ಕೊಂಡಾಡಿ ಅವನ ವೈಭವವನ್ನು ಹೊಗಳಿ, ಸಂಪತ್ತನ್ನು ಸ್ತುತಿಸಿ, ಕಿರಿಯನ್ನು ಬಣ್ಣಿಸಿ, ಕೌರವನ್ನು ವಿಸ್ತರಿಸಿ, ನಿನ್ನನ್ನು ಆತನಿಗೆ ಕೊಡಬೇಕೆಂದು, ನಿಮ್ಮ ತಂದೆಯನ್ನು ಬೇಡಿದನಲ್ಲಾ ? ನೀನು ಅನುರಾಗದಿಂದ ಆತನನ್ನೇ ಏಕೆ ವರಿಸಬಾರದು ? ದಿಗ್ಗಳ-ಆಮಾತುಗಳು ಕಿವಿಗೆ ಬೀಳುತಲೇ, (ಸಂಕಟವೂ ಹ ರುಪವೂ ಉಕ್ಕಳಿಸಿಬರಲು ಕಣ್ಣಿನಿಂದ ಧಾರಾಳವಾಗಿ ನೀರನ್ನು ಸುರಿ ಸುತ್ತಾ) ಅಯ್ಯೋ, ನನ್ನ ತಾಯಿ, ನೀನಾದರೊಬ್ಬಳು ನನ್ನ ಕಡೆಯ ವಳಾಗಿ ಇದ್ದೀಯಾ ! ಈ ಚಿಂತಾಮಣಿಯು ನನ್ನ ಕೈ ಸೇರಿದಕೂಡಲೇ ನಿನ್ನನ್ನೂ ಕರದುಕೊಂಡುಹೋಗಿ ನನ್ನ ವೈಭವಕ್ಕೆ ಎರಡನೆಯ ಒಡ ತಿಯನ್ನಾಗಿ ಮಾಡುವೆನು, ಯಾವಜನ್ಮದ ರುಣಾನುಬಂಧವೋ, ನಿ ನಗೆ ನನ್ನಲ್ಲಿ ಇಷ್ಟು ಕರುಣೆಯುಂಟಾಯಿತು, (ಎಂದು ಅಳುತ್ತಾ ಈ ಮಾತಿಗೆ ಚಿಂತಾಮಣಿಯು ಏನುತ್ತರಕೊಡುವಳೋ ಎಂದು ಕಿವಿಗೊ ಡುವನು.) ಚಿಂತಾಮಣಿಏನೆಂದೆಯೆ ? ನಿನ್ನ ಮಾತು ನಿನ್ನ ಹೆಸರಿಗೆ ಸರಿ ಯಾಗಿಲ್ಲ. ಆ ನೀಚನನ್ನು, ಆ ದ್ರೋಹಿಯನ್ನು, ಆ ಮನೆಹಾಳನನ್ನು ಆ ರಾಕ್ಷಸನನ್ನು, ನನ್ನ ಎಡಗಾಲಿನ ಕಿರುಬೆರಳಿನ ಉಗುರಿನ ಕೊನೆ ಯಿಂದಲಾದರೂ ಮುಟ್ಟ ಬಲ್ಲೆನೆ ? ಇನ್ನು ಆ ಕೀಳನಹೆಸರನ್ನೆತ್ತಬೇಡ. 16
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೮
ಗೋಚರ