ಚಮತ್ಕಾರ ಚಿಂತಾಮಣಿ. ೧೩ f• • • • - * - - v , -, + ++ * * * • - - ಳv + ೬ wwws ಸರು ಅಡ್ಡಿ ಮಾಡುತಲಿದಾರೆ. ಅಡ್ಡಿಯಿಲ್ಲದಂತೆ ನನ್ನ ಕಾರನು ನೆರವೇರು ವುದಕ್ಕಾಗಿ ನಿನ್ನ ಹಿರಿಯಮಗನಾದ ಚಮತ್ಕಾರನನ್ನು ಸುಲಕ್ಷಣ ನೊಂದಿಗೆ ಕಳುಹಬೇಕು, ಈ ವಿಷಯದಲ್ಲಿ ನೀನು ಭಯಪಡಬೇಡ ಮತ್ತು ಸಂದೇಹಪಡಬೇಡ, ನನಗೆ ಬರುವ ವಿದ್ಯೆಗಳನ್ನೆಲ್ಲಾ ಅವರಿಗೆ ಹೇಳಿ ನನ್ನ ಕೆಲಸವನ್ನೂ ಮಾಡಿಕೊಂಡು ನನ್ನ ಕೈಲಾದಮಟ್ಟಿಗೂ ಅವರಿಗೆ ಉಪಕರಿಸುತ್ತೇನೆ. ದೌವ್ವನಿಗೆ ಆರುಣಿ, ಬೈದ, ಉಪಮು ಈು ಮುಂತಾದವರು ಮಾಡಿದಂತೆ, ಇವರು ನನಗೆ ಸೇವೆ ಮಾಡಬೇಕಾ ದದ್ದು ಏನೂ ಇಲ್ಲ. ಪರಶುರಾಮ ಕರ್ಣರಹಾಗೂ, ದ್ರೋಣ ಮತ್ತು ಏಕಲವ್ಯರಹಾಗೂ, ನನಗೆ ಗುರುಶಿಷ್ಯ ಭಾವವಲ್ಲ. ಸೌಭರಿಯ ಹಾಗೆ ನಾನು ಅಷ್ಟು ಸಂಸಾರವನ್ನು ಕಟ್ಟಿಕೊಂಡೂ, ಇಲ್ಲ ಸೇವೆಗಾಗಿ ಇವರನ್ನು ಕರೆದುಕೊಂಡು ಹೋಗುವುದಿಲ್ಲ. ಭಗೀರಥನಂತೆ ನಿನ್ನ ಮಕ್ಕ ಳು ಪ್ರಯಾಸಪಡಬೇಕಾದದ್ದಿಲ್ಲ. ಹರಿಶ್ಚಂದ್ರನಂತೆ ನೀನು ಹೆರರಿಗೆ ಆಳಾ ಗಿ ಸಲ್ಲಿಸಬೇಕಾದದ್ದೇನೂ ಇಲ್ಲ. ಇವರು ಶಿಬಿಯಂತೆ ಮಾಂಸವನ್ನು ಕತ್ತರಿಸಿ ಕೊಡಬೇಕಾದದ್ದಿಲ್ಲ. ಅಲರ್ಕನಂತೆ ನೀನು ಕಣ್ಣು ಕಿತ್ತು ಕೊಡಬೇಕಾಗಿಲ್ಲ. ಇವರುಧರಾದಿಗಳಂತೆ ದೈತಕಾಮೃಕವನಗಳಲ್ಲಿ ಯಾಗಲೀ, ವಿರಾಟನ ನಗರದಲ್ಲಿದ್ದಂತೆಯಾಗಲೀ, ಇರಬೇಕಾಗಿಲ್ಲ. ನಳ ನಂತೆ ಶ್ರಮಪಡಬೇಕಾಗಿಲ್ಲ. ಅರ್ಜನನಂತೆ ಅಗ್ನಿಗೆಖಾಂಡವವನ ವನ್ನು ದಾನಮಾಡಿ ಶರಪಂಜರವನ್ನು ಕಟ್ಟಬೇಕಾದದ್ದಿಲ್ಲ. ಯಕ್ಷ ಪ್ರಶ್ನೆಗೆ ಧಮ್ಮರಾಯನು ಉತ್ತರಗಳನ್ನು ಹೇಳಿದಂತೆ ಹೇಳಬೇಕಾದ ದ್ದು ಏನೂ ಇಲ್ಲ, ಕಿರಾತಾರ್ಜುನರಂತೆ ಯುದ್ಧ ಮಾಡಬೇಕಾದ ಸಂ ಭವವಿಲ್ಲ. ಪರಶುರಾಮ ಹೈಹಯರಂತೆ ಅತಿಕ್ರಮದ ಸಂದರ್ಭವಿಲ್ಲ. ಈ ನಿನ್ನ ಇಬ್ಬರು ಮಕ್ಕಳು ನಿಮಿಷ ಮಾತ್ರದಲ್ಲಿ ಇಬ್ಬರು ರಕ್ಕಸರನ್ನು ಕೆಂದರೆ ನನ್ನ ಕೆಲಸವು ಆಗಿಯೇಹೋಯಿತು. ಇಷ್ಟೆ ! ಎಂಬ ದಾಗಿ ಹೇಳಿದ್ದ ರಮೇಲೆ ಶಾಪಭೀತನಾಗಿ ಬಹಳ ವ್ಯಥೆಪಡುತ ಲಿದ್ದ ಅರಸು, ದೂರದರ್ಶಿಯಾದ ಜಿತಾಕ್ಷನ ಬಹುತರವಾದ ಸಮಾ ಧಾನ ವಚನಗಳಿ೦ದ ಮನದಲ್ಲಿ ಸಂಶಯ ಪಡುತ್ತಲೇ ಒಡಂಬಟ್ಟು ಕುಮಾರರಿಬ್ಬರನ್ನೂ ಆತನಸಂಗಡ ಕಳುಹಿಸಿದ್ದಲ್ಲದೆ ಪುತ್ತಸ್ನೇಹಕಾ 18
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೪೪
ಗೋಚರ