ವಿದ್ಯಾನಂದ. • +++++++ * * ತೇಜಸ್ಸಿನಿಂದ ನಿವೃತ್ತಿಗೊಳಿಸಿ ತೇಜೋಮಯನಾಗಿ ಹೇಗೆ ತನ್ನ ದಿವೃದೇಹವನ್ನು ಮೇಲಕ್ಕೆ ತರುವನೋ ಹಾಗೆಯೇ ವಿವೇಕಿಯಾದ ಪುರುಷನು ತನಗೆ ಆವರಿಸಿರುವ ಅರಿಪ್ರಡರ್ಗವೆಂಬ ಹಿಮವನ್ನು ವಿವೇಕಶಕ್ತಿಯೆಂಬ ಪ್ರಭೆಯಿಂದ ದೂರಗೊಳಿಸಿ, ತನ್ನನ್ನು ತಾನು ಉದ್ಧರಿಸಿಕೊಳ್ಳಬೇಕು. ಲೋಕದಲ್ಲಿ ಎಲ್ಲರಿಗೂ, ಯಾವಾಗಲೂ ತಮ್ಮ ಆತ್ಮನು ತಮಗೆ ಹಿತತಮನಾಗಿರುವನು. ಈ ಪ್ರಪಂಚದ ಲ್ಲಿ ವೈರಾಗ್ಯಭಾಗ್ಯಕ್ಕಿಂತಲೂ ಮಾರಿದ ಭಾಗ್ಯವು ಬೇರೊಂದಿಲ್ಲ. ನಮಗೆ ಒದಗುವ ಸಮಸ್ತ ಭಾಗ್ಯಗಳಿಗೂ ಒಂದೊಂದು ಭಯವುಂ ಟು. ವೈರಾಗ್ಯಭಾಗ್ಯಕ್ಕೆ ಎಂದಿಗೂ ಯಾವ ಭಯವೂ ಇಲ್ಲ. ದುಷ್ಯ ಮಂತ್ರಿಗಳು ಉತ್ತಮನಾದ ರಾಜನನ್ನು ಪಾಪಕೂಪಕ್ಕೆ ಹೇಗೆ ಎಳೆಯುವರೋ, ಹಾಗೆಯೇ ಈ ಶರೀರವೆಂಬ ಪುರಕ್ಕೆ ಸ್ವಾಮಿಯಾದ ಆತ್ಮ ರಾಜನನ್ನು ಇಂದ್ರಿಯಗಳೆಂಬ ದುರಂತ್ರಿಗಳು ವಿಷಯಾಸಕ್ತಿಯೆಂಬ ಹಳ್ಳಕ್ಕೆಳೆದು ಜನ್ಮಜರಾರೋಗವಿಯೋಗಾದಿ ನಾನಾ ದುಃಖಗಳಿಗೆ ಈಡುಮಾಡುವರು. ಆದುದರಿಂದ ಪುರುಷನು ಬಹು ಜಾಗರೂಕನಾಗಿರಬೇಕು, ಮಕ್ಕಳಿಲ್ಲದಿರುವುದು ಪರ ಮಸುಖ, ಅರಿಯದವರು ಇದನ್ನು ದುಃಖವೆಂದು ಭಾವಿಸುತ್ತಾರೆ. ಒಂದುವೇಳೆ ಮಕ್ಕಳಾಗಿ ಹೋದರೆ ಸಲ್ಪ ದುಃಖ, ಅದನ್ನು ಅವಿವೇ ಕದಿಂದ ಹರಮದುಃಖವೆಂದು ತಿಳಿದುಕೊಳ್ಳುವರು. ಲೋಕದಲ್ಲಿ ಮಕ್ಕಳು ಲಭಿಸಿದರೂ ಅವರನ್ನ ಗಲುವದರಿಂದ ನಮಗಾಗಲೀ ನಮ್ಮ ನಗಲುವದರಿಂದ ಅವರಿಗಾಗಲೀ ದುಃಖವು ಸಂಭವಿಸುವುದೇ ನಿಗ್ಧ ಯ, ಎಲ್ಲಾ ವಸ್ತುಗಳ ವಿಷಯದಲ್ಲಿಯೂ ಇದೇ ನ್ಯಾಯವು ನೆಲೆ ಯಾದದ್ದೆಂದು ತಿಳಿದುಕೋ. ಆದಕಾರಣ ಕೆಸರನ್ನು ತುಳಿದು ಕಾ ಲನ್ನು ತೊಳೆದುಕೊಳ್ಳುವುದಕ್ಕಿಂತಲೂ ಅದನ್ನು ತುಳಿಯದಿರುವುದೇ ಮೇಲಲ್ಲವೆ ? ಪ್ರಿಯವಲ್ಲಭೆಯೇ ಇದರ ಮೇಲೆ ಮತ್ತೊಂದು
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೫
ಗೋಚರ