ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. ` vvvvvvvvJ••••••www.: 1,• • • • • , , vvvvvvvvve vomma ತಾನೂ ಅಗ್ನಿ ಪ್ರವೇಶಮಾಡಲು ಸಿದ್ಧನಾಗಿ ಹೋಗಿ ಆ ಬಂಡೆಯಮೇಲೆ ನಿಲ್ಲುವನು. - ಮುನಿಪುತ್ರರು-( ಅಸಮಯದಲ್ಲಿ) ಮಹಾವಿಷತ್ತು ಬಂದಿತಲ್ಲಾ ದೈವವೇ! ಶುಭವನ್ನು ಮಾಡು (ಎಂದು ಕಳವಳ ಪಡುತ್ತಿರುವರು) - ವಿಚಿತ್ರ ಸಂತೆಪವು ಮಿತಿಮೀರಿ, ಮೈಮರೆತು ಗಟ್ಟಿಯಾಗಿ ತಮ್ಹಾ!ಚಿತ್ರವಾಯು ! ಅರಸುಮುಕ್ಕಳಿಬ್ಬರೂ ಅಗ್ನಿಯು ಪಾಲಾದರು! ನಮ್ಮ ತಾಯನ್ನು ಕೊಂದದ್ದಕ್ಕೆ ಹಗೆತನವನ್ನು ತೀರಿಸಿಕೊಂಡೆವು. ಇನ್ನು ನಮ್ಮ ಮಾತಗೆ ಸಂತೋಷದಿಂದ ತರ್ಪಣವನ್ನು ಕೊಡೋಣ ನಡೆ, (ಎಂದು ಕೂಗಿಕೊಳ್ಳುವನು). ಚಿತ್ರ- (ಎರಡು ಕೈಗಳಿಂದಲೂ ಬಾಯಿ ಮುಚ್ಚಿಕೊಂಡು) ಅಯ್ಯೋ ! ಕೆಲಸಕೆಟ್ಟಿತು. ಇನ್ನೂ ಅವರು ಉರಿಯಲ್ಲಿ ಉರುಳಲಿಲ್ಲ. ಅಪ್ಪರಲ್ಲಿಯೇ ' ಚಿತ್ರವಾಯಾ ' ಎಂದು ಸಂಬೋಧಿಸಿ ಕೂಗಿಕೊಂ ಡನಲ್ಲಾ, ನನ್ನ ಮಾಯಾ ಪ್ರಯೋಗವು ತಲೆಕೆಳಗಾಯಿತೇ, ಮುಂದೇ ನುಗತೀ, (ಎಂದು ಚಿಂತಿಸುತ್ತಾ ಸ್ತಂಭದಂತ ನಿಲ್ಲುವನು). ಮುನಿ ಕು (ಗಟ್ಟಿಯಾಗಿ) ಸಖೇ ! ಚಮತ್ಕಾರಾ ! ಕೇಳಿದೆಯಾ ? ಮಾರರು ಇದೂ ಇವನೇ ವಿಚಿತ್ರ ಮಾಯ, ಇವನೇ ಚಿತ್ರಮಾ ಯ, ಇದೆಲ್ಲಾ ಇವರ ಮಾಯದತಂತ್ರ, ಈಗಲಾದರೂ ನಮ್ಮ ಮಾತನ್ನು ನಂಬು, ಅಗ್ನಿ ಪ್ರವೇಶವನ್ನು ಮಾಡಬೇಡ. (ಎಂದು ಕೈಗಳನ್ನೆತ್ತಿ ಕೂಗಿಕೊಳ್ಳುವದು). (ರಾಜಕುಮಾರರು ನಿಂತಿದ್ದ ಬಂಡೆಯಿಂದ ಜಯಶಾಲಿಗಳಾಗಿರಿ, ಆಯುಸ್ಸಂತರಾಗಿರಿ, ಸುಖಿಗಳಾಗಿರಿ, ಎಂದು ಹರಸುತ್ತಾ ದಿವ್ಯ ಮಂಗಳ ಶರೀರವುಳ್ಳ ಒಬ್ಬ ಸುವಾಸಿನಿಯು ಎದ್ದು ನಿಲ್ಲುವಳು). ರಾಜಪುತ್ರರು-(ಆಶ್ಚರೈಸರವಶರಾಗಿ ಇಬ್ಬರೂ ಆ ತಾಪಸ ಸು ಮಂಗಲಿಗೆ ವಂದಿಸುವರು).