ಶ್ರೀ೬, ಪಷ್ಟಪ್ರಭಾ ಪ್ರಾರಂಭಂ.. ಲೋಕಹಿತ-ತಲೆಯನ್ನು ತೂಗುತ್ತಾ,. ಆಹಾ ! ರಕ್ಕಸರ ಮಾ ಯಾಶಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದಾಗಿದೆ. ಇನ್ನೊಂ ದುಕ್ಷಣ ಕಾಲಮಾತ್ರ ನಾನು ಇಲ್ಲಿಗೆ ಬರುವುದಕ್ಕೆ ತಡವಾಗಿದ್ದರೂ ಆಥವಾ ಗುರುಶರ್ಮನ ಶಾಪದಿಂದ ಶಿಲೆಯಾಗಿದ್ದ ವಿಮಲೆಯಂತಿ ಚವು ತ್ಕಾರನ ಪಾದಧೂಳಿಯ ಸಂಪರ್ಕದಿಂದ ತನ್ನ ನಿಜರೂಪವನ್ನು ಪಡೆಯ ದಿದ್ದರೂ, ಮಹತ್ತರವಾದ ಅನರ್ಥವೇ ನಡೆದು ಹೋಗುತಲಿದ್ದಿತು ಅ ರಸುವುಕ್ಕಳಿಬ್ಬರೂ ಅಗ್ನಿ ಯ ಪಾಲಾಗಿ, ನಾನೂ ಅಪಖ್ಯಾತಿಗೆ ಬಳ ಗಾಗಿ, ಬೋಧಜಂದ್ರನ ಮನೋರಥವೂ ವ್ಯರ್ಥವಾಗಿ, ನನ್ನ ಶಾಂತಿಕ ರ್ಮವೂ ಹಾಳಾಗಿ, ಅವತಾರವಾಹನನ ಶ್ರೇಯಸ್ಸಲ್ಲಾಬಯಲಾಗಿ, ಮೂ ಲೋಕವೂ ಮರುಗಿ, ಪ್ರಮಾದವಾಗಿ ಪರಿಣಮಿಸುತ್ತಿತ್ತು, ಧರ್ಮದೇ ವತೆ ಯ ಸಹಾಯದಿಂದ ಯಾವ ಕೇಡಿಗೂ ಈಡಾಗದೆ ಸದ್ಯಕ್ಕೆ ಪಾರಾ ದಂತ ಕಾಣುವುದು,ಏನು ಚಮತ್ಕಾರ : ಎಷ್ಟು ಚಮತ್ಕಾರ | ಪ್ರಪಂ ಚದ ತತ್ವವನ್ನೆಲ್ಲ ಕರತಲಾಮಲಕದಂತೆ ಬಲ್ಲ ನನ್ನ ಮನಸ್ಸೇ ಭ್ರಾಂತ ವಾಗುತಿದೆಯಲ್ಲಾ ! ರಾಜಕುಮಾರರಾದರೆ ಮಾಯಾತಂತ್ರವನ್ನು ಬಲ್ಲವ ರಲ್ಲ. ಈ ಮುನಿ ಪುತ್ರರಾದರೋ ಹಸಳೆಗಳು, ಮಾಯಾವತಿಯ ಮ ಕ೪ಾದ ಚಿತ್ರ ಮಾಯ ವಿಚಿತ್ರವಾಯರು ಬೇರೊಂದು ಪ್ರಪಂಚವನ್ನೇ ಉಂಟುಮಾಡತಕ್ಕೆ ಮಾಯಾಬಲವುಳ್ಳವರು ಅಪ್ಪಿಲ್ಲದೆ ನನ್ನಂಥವನ ಶಾಂ ತಿಕರ್ಮಕ ಪದೆಪದೆ ತೊಂದರೆಯನ್ನು ೦ಟು ಮಾಡುವರೆ ? ಇದಿ೦ತಿ ರಲಿ, ಮೊದಲು ಮುನಿಕುವಾರು ತಿಳಿಸಿರುವ ಸಂಗತಿಯಿಂದ ಆಶ್ರಮ ದಲ್ಲಿಯೂ ಮತ್ತೆ ಯಾರೋ, ಇನ್ನೂ ಏನೋ ಚಮತ್ಕಾರವನು ತೋರುತ್ತಿರುವಂತಿದೆ.ಅವರ ಇಂದ್ರಜಾಲಕ್ಕೆ ಒಳಗಾಗಿ ಬೋಧಚಂದ್ರನ್ನ ಏನುಮೋಸಹೋಗುವನೋ, ಆದರೆ ಗುರುಶರ್ಮನ ಪುತ್ರನಾದ ಆನಂದ ವಸುವು ಅಲ್ಲಿಯೇ ಇದ್ದಾನೆ, ಅಥವಾ ಇದ್ದರತಾನೆ ಏನು ? ಮಾಯಾವಿರ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೬೭
ಗೋಚರ