ಚಮತ್ಕಾರೆ ಚಿಂತಾಮಣಿ, W vV” fh/++++++++++++ * * +++ /+ • /+ + (Mಆrrwx ೪ಾದರಾತಿ೦ಚರರು ಅವನಿಗೂ ಮಂಕುಬೂದಿಯನ್ನು ಚೆಲ್ಲುವರು. ನನ್ನ ಮನವೇನೋ ಕಳವಳಿಸುತಲಿದೆ, ಮೊದಲು ತಪೋವನಕ್ಕೆ ಹೋ ದಹೊರತು ಸಮಾಧಾನವಾಗುವಂತಿಲ್ಲ. ರಾಕ್ಷಸರ ಒಂದುಹಕ್ಕೆಯ ನ್ನು ಗೆದ್ದಂತಾಯಿತು. ಈ ಸಂಗತಿಯನ್ನೆಲ್ಲಾ ಇವರಿಗೆ ವಿವರವಾಗಿ ಹೇಳಿದರೆ ದೊರೆಮಕ್ಕಳೂ, ತಾಪಸಕುಮಾರರೂ ನಾಚಿಕೆಪಟ್ಟುಕೊ ಳ್ಳುವರು ಎಂದು ತನ್ನ ಮನದಲ್ಲಿ ಭಾವಿಸಿ ಕುಮಾರನಂಕುರಿತು ವತ್ವಾ! ಚಮತ್ಕಾರ ! ಇಗೋ ಆಶ್ರಮವು ಕಾಣಬರುತ್ತಿದೆ. ನಾನು ಆಚರಿ ಸುವ ಶಾಂತಿಕರ್ಮಕ್ಕೆ ಬರುವಂತೆ ಯಾಗಾಲಯದ ಅರಸಾಗಿರುವ ಮಹಾತ್ಮನಾದ ಬೋಧಚಂದ್ರನಿಗೆ ಹೇಳಿಕಳುಹಿಸಿದ್ದೆನು, ಆತನು ಕು ಟುಂಬ ಪರಿವಾರಸಮೇತನಾಗಿ ಬಂದಿರುವಂತಿದೆ. ಅಗೋ ನೋಡು, ಬೋಧಚರದನು ಸgಂತಮನುಷ್ಯನಿಗಿಂತ ಹೆಚ್ಚಾಗಿ ಯಾಜಮಾನ್ಯವ ನ್ನು ವಹಿಸಿ ಶಾಂತಿಕರ್ಮಕ್ಕಾಗಿ ಯೋಜನಶಾಲೆಯನ್ನು ಸಿದ್ಧ ಪಡಿಸಿರು ವಹಾಗೆ ಕಾಣಬರುವದು. ಇದೇನಾಗಲೇ ಬಹುತರವಾಗಿ' ಬ್ರಾಹ್ಮ ಸಂಘವು ನೆರದಿದೆ, ವಾದ್ಯಘೋಷವು ಮೊಳಗುತಲಿದೆ, ಹೋಮ ಧೂಮವು ಮೇಲಕ್ಕೆ ಹೋಗುತಲಿದೆ, ಹವ್ಯಗಂಧವು ಹರಡುತಲಿದೆ, ಯಾಜಕರ ವೇದಮಂತ್ರಗಳದ್ಧಸಿಯು ಕೇಳಿಬರುವುದು, ಇದನ್ನೆಲ್ಲಾ ನೋಡಲಾಗಿ ಬೋಧಚಂದ್ರನು ಇದು ಸಿದ್ಧಾಶ್ರಮವೆಂದುತಿಳಿದು ತಾ ನೂ ಏನಾದರೂ ಸತ್ಕರವನ್ನು ಆಚರಿಸಲಿಕ್ಕೆ ಆರಂಭಿಸಿರುವನೋ ಏನೋ, ಬೇಗನೆ ಹೋಗಿ ನಾವೂ ಆ ಸಂಭವ.ದಲ್ಲಿ ಭಾಗಿಗಳಾಗೋ ಣ, ಎಂದು ಮುಂದೆ ಜಾಗ್ರತೆಯಾಗಿ ನಡೆಯುತ್ತಿರುವನು. ಚಮತ್ಕಾರ.(ಮೆಲ್ಲಗೆ) ವತ್ಸ!ಸುಲಕ್ಷಣ!ಮುನಿಗೆ ಮುಖವನ್ನು ತೋರಿಸುವುದಕ್ಕೆ ನಾಚಿಕೆಯಾಗುತ್ತದೆ, ನೋಡಿದೆಯ, ಎಷ್ಟುಸಲ್ಪಕಾ ಲದಲ್ಲಿ ಏನೇನೋ ವಿಕಾರಗಳಿಗೆ ಒಳಗಾದೆವು, ನಾನುಎಲ್ಲವನ್ನೂ ದಿಟ ವೆಂದೇ ನಂಬಿದ್ದೆ ನು, ಇದಲ್ಲದೆ ಅನ್ಯಾಯವಾಗಿ ಮುನಿಕುಮಾರರನ್ನು ಕೊಂದು ಬ್ರಹ್ಮ ಹತ್ಯೆಗೆ ಒಳಗಾಗುತ್ತಿದ್ದೆನಲ್ಲಾ, ಆಹಾ ! ದೈವವೇ ನ ನ್ನನ್ನು ಅಂತಹ ಮಹಾ ಪಾತಿತ್ಯಕ್ಕೆ ಈಡುಮಾಡದೆ ಉಳಿಸಿತು. ಅಬ್ಬ 21
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೬೮
ಗೋಚರ