ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಟ -ವಿದ್ಯಾನಂದ. .ಬ್ಲ್ಯಾ ! ರಕ್ಕಸನು ಎಷ್ಟು ಚಮತ್ಕಾರವನ್ನು ತೋರಿದನಯ್ಯ ? ಇನ್ನೂ ಮನಸ್ಸಿನಲ್ಲಿ ಅದೇನೆನಪಿನ ಕಳವಳವು ಬಿಟ್ಟೇ ಇಲ್ಲ. - ಸುಲಕ್ಷಣ ಅಣ್ಣಾ ! ಮೆತ್ತಗೆ ಹೇಳು, ಮೊದಲು ನಾನೂ ನಿನ್ನ ಹಾಗೆಯೇರಾ ಕ್ಷಸನ ಮಾಯೆಯಿಂದ ಭ್ರಾಂತನಾಗಿ ರುಪುತ್ರನನ್ನು ಇ ಸ್ಪೇನು ಕೊಂದವನೆ, ಅದು ಹೇಗೆ ದೇವರೇ ಮಹಾದೋಷದಿಂದ ಬಿಡುಗಡೆಮಾಡಿದನು, ಇನ್ನು ಅದರ ಸುದ್ದಿಯನ್ನೇ ಎತ್ತಬೇಡ, ಸು ಮೈನೆ ನಡೆ.

  • ತಪೋವತ_ಸಖೇ ಯೋಗವತ ! ನಾವು ತಪೋವನದಲ್ಲಿ ನ ಮೈ ಗುರುಗಳನ್ನೂ ಈ ರಾಜವುತ್ರರನ್ನೂ ನೋಡಿದ್ದೆವು, ಬೋಧಚಂ ದ್ರನು ಅವತಾರವಾಹನನನ್ನು ಎದುರೆ ೧ಡುಬರುವಂತೆ ಕಳುಹಿದನು. ಅದರಂತೆ ಬಂದಾಗ ಮಾರ್ಗ ದಲ್ಲಿ ಪುನಃ ಇವರನ್ನು ಇಲ್ಲಿ ಕಂಡೆವು, ಇದೇನೊ ಚಮತ್ಕಾರವಾಗಿದೆ, ಎಂದು ರಾಜಪುತ್ರರಸಂಗಡ ಹೇಳಿ ದರೂ ಅವರೂ ಏನೂ ಸರಿಯಾಗಿ ಉತ್ತರ ಹೇಳಲಿಲ್ಲ. ಮುರ್ನಿ ಸಂಗಡ ಹೇಳಿದರೂ ಅವರೂ ಏನೋ ಉದಾಸೀನರಾಗಿ'ಏನೋ ರಾಕ ಸರ ಹಾವಳಿ” ಎಂದೇ ಬಿಟ್ಟರು. ಮುಂದೇನು ವಿಚಿತ್ರ ಚಮತ್ಕಾರ ವಾಗುವದೋ ತಿಳಿಯದಲ್ಲ ?

ಯೋಗವುತ-ಮಿತ್ರ ! ತಪೋವತ ! ಏನಾದರೂ ಆಗಲಿ, ಇನ್ನು ನಮ್ಮ ಮೇಲೆ ಆಕ್ಷೇಪಣೆಯಿಲ್ಲ, ಎಲ್ಲವನ್ನೂ ಗುರುಗಳೇ ನೋಡಿಕೊಳ್ಳುತ್ತಾರೆ, ನಾವು ಇದಕ್ಕೆ ಏಕೆ ಚಿಂತಿಸಬೇಕು ? ಸೊ ಟಕವಿದ್ದ ಹಾಗೆ ಕಬ್ಬನ್ನು ಯಾರು ಸುಟ್ಟು ಕೊಳ್ಳುತ್ತಾರೆ ? ಸಧ್ಯಕ್ಕೆ ನಮ್ಮ ಪ್ರಾಣಗಳು ಉಳಿದವಲ್ಲ, ಅನ್ಯಾಯವಾಗಿ ರಾಕ್ಷಸರ ಬಾಯಿ ಗೋ, ರಾಜಪುತ್ರರ ಬಾಣಗಳಿಗೋ ತುತ್ತಾಗುತ್ತಿದ್ದೆವು, ನಮ್ಮ ಭಾಗ್ಯ ದೇವತೆಯೋ, ಗುರುಗಳ ಅನುಗ್ರಹವೋ, ಭವಿತವ್ಯತೆಯೋ, ನಮ್ಮನ್ನು ಮಹಾ ವಿಪತ್ತಿನಿಂದ ದಾಟಿಸಿತು. ನನಗೆ ಇನ್ನೂ ಕೈಕಾ ಲುಗಳು ನಡುಗತಲೇ ಇವೆ. ತಪೋವನವನ್ನು ಸೇರಿ ಸ್ವಲ್ಪ ಹೊತ್ತು ಸುದಾರಿಸಿಕೊಂಡ ಹೊರತೂ ನಾನು ಯಾವ ಕೆಲಸಕ್ಕೂ ಬರುವದಿಲ್ಲ