ho ವಿದ್ಯಾನಂದ. •v\\\ \ \//
- Y - 4 /
ಮಾಡಿದೆಯಾ? ನನ್ನ ಕಂದನನ್ನು ಸದ್ದಿಲ್ಲದಂತೆ ಹದ್ದಿನಹಾಗೆ ಹಾರಿಸಿ ಕೊಂಡು ಹೋದೆಯಾ? ನಿನಗೊಂದು ಇಂತಹ ಹಸುಳೆಯಿದ್ದು ಹಾರಿ ಹೋಗಿದ್ದರೆ ಆಗ ನಿನಗೆ ತಿಳಿಯುತಲಿದ್ದಿತು, ಇನ್ನಾ ವ ಮುದ್ದು ಮೊಗ ದ ಮಗುವಿನ ಮುಂದಲೆಯನ್ನು ಮುದ್ದಾಡಲಿ, ಅನ್ನವನ್ನುಣಿಸುವಾಗ ಸೇರದೆ ಮೋರೆಯನ್ನು ಓರೆಗೆತಗದು ಚದರಿದ ತಲೆಗೂದಲಿನಿಂದ ಪುದಿದು ಕಳ್ಳಳುವಿನಿಂದಲೂ ಅರೆನಗೆಯಿಂದಲೂ ಕೂಡಿದ ಕಂದನ ಮುದ್ದು ಮತಿಯನ್ನಿ ನಲ್ಲಿ ಮುತ್ತಿಡಲಿ, ಎಲೆ, ಹಾಳು ವಿಧಿಯೇ ಬೇಯಿಸುವ ಕರುಳುಳ್ಳ ನಿನಗೆ ಹೆತ್ತ ಹೆಂಗರುಳೆಲ್ಲಿಂದ ಬಂದೀತು? ಕೈಬೆರಳನ್ನು ಊಡುನಾಡಿನಿಲ್ಲಿಸಿ ನಡಗೆಯನ್ನು ಕಲಿಸುತ್ತಲಿರುವಾಗ ತಪ್ಪು ಹೆಜ್ಜೆಗಳನ್ನಿಡುತ್ತಾ ಅಪ್ಪ,ಅಕ್ಕ, ಅಮ್ಮ, ಎಂಬ ನನ್ನ ಕಂದಮ್ಮ ನನ್ನು ಇನ್ನೆಲ್ಲಿ ಕಾಣಲಿ, ತೊಟ್ಟಿಲಿನಲ್ಲಿ ತುಂಬಹೊದ್ದಿಸಿ ಮಲಗಿಸಿ ತೂಗಿ ನಿದ್ದೆ ಬಂದಿರಬಹುದೆಂದು ಭಾವಿಸಿ ನಾನು ಸ್ವಲ್ಪ ದೂರ ಮೆಲ್ಲಗೆ ಮನೆಯ ಕೆಲಸಕ್ಕಾಗಿ ಸದ್ದಿಲ್ಲದಂತೆಹೆಜ್ಜೆಯನ್ನಿಟ್ಟು ಹೋಗುತ್ತಿರು ವಾಗ ಮುಖದ ಮೇಲಣ ಬಟ್ಟೆಯನ್ನು ಥಟ್ಟನೆತೆಗೆದು ಅವಾ, ಎಲ ದು ಕೂಗಿ ಹೆಬ್ಬರಳನ್ನು ಬಾಯಲ್ಲಿ ಚೀಪುತ್ತಿರುವ ಬಾಲನನ್ನು ಇನ್ನು ಕಾಣುವ ದಾರಿಯಿಲ್ಲವಲ್ಲಾ; ಅಮ್ಮಾ ? ನೀವು ಮಕ್ಕಳನ್ನು ಹೆತ್ತ ಕಪ್ಪವನ್ನು ಬಲ್ಲಿರಿ, ಅಲ್ಲದೆ ಸತ್ತ ಸಂಕಟವನ್ನು ಅರಿಯಿರಿ. ನಿಮಗೆ ಅಂತಹ ವ್ಯಸನವು ಎಂದಿಗೂ ಬರಲೂಬೇಡ. ನನ್ನಂತೆ ಹೆ ತು ಹೋಗಲಾಡಿಸಿಕೊಂಡ ಹೆಂಗಸಿಗೆಮಾತ್ರ ಈಹಾಳುಹೊಟ್ಟೆಯ ಸಂಕಟವು ತಿಳಿಯುವದಲ್ಲದೆ ಉಳಿದವರಿಗೆ ತಿಳಿಯದು, ನೀರನ್ನು ಹೊತ್ತು ನಿಂತಿದ್ದೀರಿ, ತಾಯೇ ಹೋಗಿಬನ್ನಿರೆಂದು ಹತ್ತಿರದಲ್ಲಿ ಹಂತವನ್ನು ಹತ್ತುತ್ತಾ ಹಾಗೆಯೆನಿಂತು ಮನ್ನಿ ಸುತ್ತಿರುವ ಮಹಿ ಳೆಗೆ ಹಸುಳೆಯು ಸತ್ತು ಹೋದುದರಿಂದುಂಟಾದ ದುಃಖವನ್ನು ಹಂಬ ಲಿಸಿ ಹೇಳಿ ಕೊಳ್ಳುತ್ತಿದ್ದ ಅಬಲೆಯನ್ನು ನೋಡಿ, ಕೇಳಿ ತಾಳಲಾ