ಚಮತ್ಕಾರ ಚಿಂತಾಮಣಿ. ܞܧܘ /* ** .. .. .. .. * * * . • ••, » ವಪ್ಪ, ಮುಂದಕ್ಕೆ ಹೆಜ್ಜೆಯನ್ನೇ ಇಡಲಾರೆ, ಮೆಲ್ಲಗೆ ಹೋಗೋಣ ಎಂದು ಪ್ರಯಾಣಮಾಡುತ್ತಾ ಎಲ್ಲರೂ ಆಶ್ರಮವನ್ನು ಬಂದು ಸೇರಿ ದರು. ಲೋಕಹಿತ-ಯಜನಶಾಲೆಯ ಬಳಿಗೆ ಬಂದು ಓಹೋ ! ಇದೇ ನು ? ವಿವಾಹ ಭವನವನ್ನೂ ರಚಿಸಿರುವಂತೆ ಕಾಣಬರುತ್ತಿದೆ, ಬೋ ಧಚಂದ್ರನು ಮೊದಲು ವಿವಾಹ ಮಂಗಳವನ್ನು ನೆರವೇರಿಸಿ ಬಳಿಕ ನನ್ನ ಮನೋರಥವಾದ ಶಾಂತಿಕರ್ಮವನ್ನು ನೆರವೇರಿಸಬೇಕೆಂದು ಈ ವಿಧವಾದ ರಚನೆಯನ್ನು ಮಾಡಿರುವನೋ ಏನೋ ? ಒಳ್ಳೆಯದು, ಆ ಗಲಿ, ಶುಭಸ್ಯ ಶೀಘು', ಎಂದುಕೊಂಡು ಬಿಡಾರದ ಬಾಗಿಲಿಗೆ ಬಂ ದು ಸೇವಕನನ್ನು ಕರೆದು “ ಅಸದಳಪುರದಿಂದ ಅರಸುಮಕ್ಕಳೊಡನೆ ನಾನು ಬಂದಿರುವದಾಗಿ ಅರಸಿಗೆ ತಿಳಿಸು” ಎಂದು ಕಳುಹಿಸಿಕೊಟ್ಟನು. ಸೇವಕ-ಥಟ್ಟನೆ ಎದ್ದು ಮುನಿಯನ್ನೂ, ರಾಜಕುಮಾರರನ್ನೂ ನೋಡಿ ಮನದಲ್ಲಿ ಅಚ್ಚರಿಗೊಂಡು ಇದೇನು ಚಮತ್ಕಾರ !!! ಒಳ ಗೆ ಲೋಕಹಿತ ಮುನಿಯೂ, ಈ ರಾಜಪುತ್ರರೂ ವಿವಾಹ ಮಂಗಳ ಕ್ಯಾಗಿ ಸಿದ್ದರಾಗಿ ಕುಳಿತಿರುವರು, ಇವರುಬೇರೆ ಸಮಾನಾಕಾರ ವೇಷ ಗಳಿಂದ ಇಲ್ಲಿ ನಿಂತಿದಾರೆ, ಉ, ನಮಗೇಕೆ ? ಮುಂದೆ ತಾನಾಗಿಯೇ ಹೊರಗೆ ಬರುವದು, ಎಂದು ಒಳ ಹೊಕ್ಕು ಬೋಧಚಂದ್ರನಿಗೆ ಅಭಿ ವಂದಿಸಿ ಪುಳುವೇ ! ಅಸದಳಪುರದ ಅರಸುಮಕ್ಕಳೊಡನೆ ಲೋಕಹಿ ತಮುನಿಯು ಹೊರಬಾಗಿಲಲ್ಲಿ ಬಂದು ನಿಂತು ತಮಗೆ ತಿಳಿಸುವಂತೆ ಅ ಪ್ರಣೆ ಮಾಡಿದರು, ಸರ್ವಜ್ಞ ಚಿತ್ತ, ಚಾಕರನು ಅಪ್ಪಣೆಯಂತೆ ನಡೆ ಯತಕ್ಕವನು, ಎಂದು ಸುಮ್ಮನೆ ನಿಲ್ಲುವನು. ಬೋಧಆನಂದವಸುವಿನ ಮುಖವನ್ನೂ, ಸರ್ವಮಾಯಾದಿಗಳ ಮುಖಗಳನ್ನೂ ನೋಡಿ, ನಕಪಕನೆ ನಕ್ಕು ಮುನಿವರ್ಯನೇ ? ಇದೇ ನು ಚಮತ್ಕಾರ ? ಅಸದಳಪುರದಿಂದ ಲೋಕಹಿತಮುನಿಯ ರಾಜ ಪುತರಾ ಬಂದಿರುವರಂತೆ ! ಅವರು ಯಾರು ?
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೭೦
ಗೋಚರ