೧! ವಿದ್ಯಾನಂದ. ww.v•••••••••rwwwmwwwx ಯಲ್ಲಿಯೇ ಕಾಲವನ್ನು ಕಳೆದುಬಿಟ್ಟೆ, ಈಗ ಪ್ರಾಣಗಂಡಕ್ಕೆ ಬಂತು. ಕಣ್ಣು ಕಣ್ಣು ಬಿಡುತ್ತಿಯೇ, ನಿನಿಗೂ ಸರಿಯಾದ ಹೆಣ್ಣು ಸಿಕ್ಕಿದ್ದರೆ ತರೆ ಪಡತಲಿದ್ದೆ, ನನಗೆ ಮಾತ್ರ ಅನುಕೂಲವಾಯಿತು, ನಿನಿಗೆ ಇಲ್ಲದೆ ಹೋಯಿತು, ಎಂಬದುಃಖದಿಂದ ಹೊಟ್ಟೆಕಿಚ್ಚು ಪಟ್ಟು ಕಡೆಗೂ ನನ್ನ ಕೋರಿಕೆಯೆಂಬ ಕಲ್ಪವೃಕ್ಷವನ್ನು ಬುಡದಿಂದ ಕೊನೆಯವರಿಗೂ ಸುಟ್ಟು ಬಿಟ್ಟೆ, ಇನ್ನೇನು, ನಿನ್ನ ಹೊಟ್ಟೆಯುತಣ್ಣಗಾಯಿತಲ್ಲ. ತಲೆ ತಪ್ಪಿಸಿಕೊಳ್ಳುವುದಕ್ಕೆ ದಾರಿಯನ್ನು ಹುಡುಕುತ್ತಲಿದ್ದೀಯೆ. ಸರಿ (ಓ ಡಿಹೋಗೋಣ, ನಡೆ, ಕೂಟವಾಯ ! ಸರವಾಯನ ಮಾಟವನ್ನು ನೋಡಿದೆಯೋ, ಮೊದಲೇ “ ನಿಮ್ಮ ಕೆಲಸವೆಲ್ಲಾ ಅನುಕೂಲಿಸಿತು, ನನಗೇ ಸೊನ್ನೆ ಬಿದ್ದಿತು ” ಎಂದು ತನ್ನ ಹೊಟ್ಟೆಯೊಳಗಣ ಅಸೂಯೆ ಯನ್ನು ತೋರಿದ್ದನು, ಜ್ಞಾಪಕವಿದೆಯೋ ? ಅದಕ್ಕೆ ಸರಿಯಾಗಿಯೇ ಮಾಡಿದನಪ್ಪ, ಇವನೇನು ತಪ್ಪು ಮಾತನಾಡತಕ್ಕವನಲ್ಲ. ನನ್ನನ್ನು ಯಾವ ಜೈವವೂ ದುಃಖಸಮುದ್ರದಲ್ಲಿ ಮುಳುಗಿಸಿದನು, ಎಲ್ಲರಿಗಿಂತಲೂ ಮೊ ದಲು ಈ ನೀಚನನ್ನು ತುಂಡುತುಂಡಾಗಿ ಕತ್ತರಿಸಿಬಿಡಬೇಕು ಎನ್ನಿಸು ತದೆ, ಏನವಾಡಲಿ, ಸಮಯವಲ್ಲ. ಸರಿಯಾದ ದೇಶವೂಅಲ್ಲ. ಕೂಟಮಾಯ-ಪ್ರಭುವೇ ! ಇದು ಕೋಪಕ್ಕೆ ಸಮಯವಲ್ಲ ಮೊದಲು ಚಿಂತಾಮಣಿಯು ನಿನ್ನ ಕೈ ಸೇರುವದಕ್ಕೆ ಉಪಾಯವೇ ನೋ, ಅದನ್ನು ಹುಡುಕು. ದಿಗ್ಗ ಳ-ಕೂಟವಯಾ ! ನನ್ನ ಹೊಟ್ಟೆಯಲ್ಲಿ ನೀನು ಮತ್ತಷ್ಟು ಉರಿಸಬೇಡ, ಇನ್ನೇನು ಉಪಾಯ ? ಉಪಾಯವೆಲ್ಲಾ ಅಪಾಯವೇ ಆಯಿತು, ಮುನಿಹತಕನಾದ ಲೋಕಹಿತನು ಆಕೀಳರಾದ ಅರಸು ಮ ಕೃಳೊಡನೆ ಬಂದು ಬಾಗಿಲಲ್ಲಿ ನಿಂತಿರುವಾಗ ಈಗ ಏನಪ್ಪ ಉಪಾಯ ? ಶೂಲಕ್ಕೇರುವುದೇ ಉಪಾಯ,ಆಯ್ಕೆ ಚಿಂತಾಮಣೀ ? ರುಣವಿಲ್ಲದೆ ಹೋಯಿತೇ, ನಿನ್ನನ್ನು ನೋಡಿದರೆ ನನ್ನ ಕಣ್ಣಿನಲ್ಲಿ ನೀರಲ್ಲ, ರಕ್ತವೇ ಸುರಿಯುತಿದೆ, ಅಯ್ಯೋ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೇ, ಎಂದು ವ್ಯಸನಪಡುವನು.
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೭೩
ಗೋಚರ