೧೬೦ ವಿದ್ಯಾನಂದ. wwwmvvv.o ..
- vvv.
ಬೋಧ :-(ಪುರೋಹಿತನ ಕಿವಿಯಲ್ಲಿ) ಇವರು ವೇಷಧಾರಿಗಳಾಗಿ ದ್ದ ರೂ ಸ್ವಲ್ಪವೂ ಭೇದವಿಲ್ಲದೆಯೂ, ಅವರಿಗಿಂತಲೂ ಬಂದು ಪಾಲು ಹೆಚ್ಚಾದ ಕಾಂತಿಯುಳ್ಳವರೂ ಆಗಿಯಿರುವರಲ್ಲ. ರಾಕ್ಷಸಮಾಯ ! ಇದನ್ನು ಭೇದಿಸುವುದು ಹೇಗೆ ? (ಎಂಬನು.) ಚಿಂತಾಮಣಿ :- (ಸಲ್ಪ ದೂರದಲ್ಲಿನಿಂತು ನೋಡಿ) ಇದೇನು ಚಮತ್ಕಾರ ! ! ! ಇವರನ್ನು ವೇಷಧಾರಿಗಳೆಂದು ಮಾತನಾಡಿಕೊಳ್ಳು ತಿದ್ದರು. ಆ ನಿಜವಾದವರನ್ನು ನೋಡಿದಾಗ ನನ್ನ ಮನಸ್ಟ್ರಕಸ್ಸುಗ ಳು ಹರ್ಷಗೊಳಲಿಲ್ಲ, ಈಗ ಅನಂದಗೊಳ್ಳುತಲಿವೆಯಲ್ಲ.(ಎಂದು ಕೊಂಬಳು ) ದಿಗ್ಗ ಳ :-(ತನ್ನ ಮನದೊಳಗೆ) ಆಹ ! ಈ ಚಮತ್ಕಾರನ ಆಕಾರವನ್ನು ನೋಡಿದರೆ ನನಗಿವನು ಶತ್ರುವಾದರೂ ಆನಂದವನ್ನು ಟುಮಾಡುತಲಿದಾನೆ :ಮೊದಲುಚಿಂತಾಮಣಿಯ ಬಳಿಯೊಳಿದ್ದ ಚಿ ತ್ರಪಟದಲ್ಲಿ ರೇಖಾ ವಿನ್ಯಾಸವು ಹೇಗೆ ಹೇಗೆ ಇದ್ದಿತೋ, ಅದಕ್ಕಿಂತ ಲೂ ಇಮ್ಮಡಿಯಾದ ಸಂದರ್ಯಮುದ್ರೆಯಿಂದ ಸಂಶೋಭಿಸುತಲಿ ರುವನು. ಇಂತಪಾರ ಸುಂದರನಾದುದರಿಂದಲೇ ಚಿಂತಾಮಣಿಯು ಇವನಲ್ಲಿ ಮನೋಭಿನಿವೇಶವನ್ನು ಮಾಡಿದಳು. ಅದು ನ್ಯಾಯವಾಗಿದೆ. ಕುವಲಯಕುಸುಮದಂತೆ ಶ್ಯಾಮಲಾಂಗನು, ಕಿವಿಗಳವರೆಗೆ ಹರಡಿ ರುವ ಕಣ್ಣುಗಳುಳ್ಳವನು, ತೊರವಾಗಿ ನೀಳವಾಗಿಯೂ, ಹೊರನಾ ಗಿಯೂ ಇರುವ ತೋಳುಗಳುಳ್ಳವನು, ಗೂಳಿಯ ಆಳಲಿನಂತೆ ಬಲಿ ತು ಬೆಳದು ಎತ್ತರವಾಗಿ ಗುಂಡಾಗಿಯೂ ಇರುವ ಹೆಗಲುಳ್ಳವನೂ ಆಗಿ, ಕಯ್ಯಲ್ಲಿ ಬಿಲ್ಲು, ಎರಡು ಹೆಗಲುಗಳ ಹಿಂದೆ ಬಾಣಗಳ ಚೀ ಲಗಳು, ಹಣೆ ಯಲ್ಲಿ, ಅಗಲವಾದ ಎದೆಯಲ್ಲಿಯೂ ಭಸ್ಮರೇಖೆಯು, ಟೊಂಕದಲ್ಲಿ ಮಂಜೆಯು, ಹೊಸದಾಗಿ ಅಂಕುರಿಸುತ್ತಿರುವ ಈ ಶು ರೇಖೆಯು, ಪ್ರಸನ್ನ ಗಂಭೀರವಾದ ಆಕಾರವು, ಉದಾರವಾದ ಪ ಕೃತಿಯು, ಪ್ರಕಾಂತ ವಧುರಸ್ಸರವು, ಕರಚರಣನಯನಗಳಲ್ಲಿ ಕಂ। ದಾವರೆಯ ಹೋಲಿಕೆಯು, ಸಾಮ್ರಾಜ್ಯೋಚಿತವಾದ ರಾಜಲಕ್ಷಣವು