ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ವಿದ್ಯಾನಂದ. "v +"- - * - ***- YYY+" • .', '• ಜvw ಬೋಧ-(ಗುಟ್ಟಾಗಿ) ಪುರೋಹಿತರೇ ! ಈಮಾತುಗಳನ್ನೆಲ್ಲ ನಂಬುವುದು ಹೇಗೆ ? ಪುರೋಹಿತ-(ಅಂತರಂಗವಾಗಿ) ಏನೂ ಸಂಶಯತೋರದಂತೆ ಮಾತನಾಡುತ್ತಾ ಮೊದಲು ಬಂದಿದ್ದವರನ್ನೇ ಮೋಸಗಾರರಾದ ರಾಕ್ಷ ಸರಂತೆ ಸೂಚಿಸುವ ಕಾರಣಗಳನ್ನು ವಿವರಿಸುತಲಿದಾರೆ, ನನ್ನ ಮನ ಸ್ಟೇನೋ ಮಂಕಾಗಿದೆಯಪ್ಪ ? ಬೋಧ-ಒಳ್ಳೆಯದು, ಆಗಲಿ, ಎಂದುಕೊಂಡು, ಎಲೈಲೋಕ ಹಿತ ಮುನಿಯೇ ! ಮೊದಲು ಒಂದು ಸಾರಿ ಸಾಂಕಾಶ್ಯಪುರದ ಅರಸಾಗಿ - ಸುಧನನು ನನ್ನ ಕನ್ಯಾರತ್ನವನ್ನು ಯಾಚಿಸಲಿಕ್ಕೆ ಬಂದಿದ್ದನು, ಆಗ ಆತನಿಗೆ ಕೊಡಲು ನನಗೆ ಇಪ್ಪವಿಲ್ಲದೆ ನಮ್ಮ ಕನೈಯು ವೀರ್ ಶುಲ್ಕವುಳ್ಳವಳು, ಆದ ಕಾರಣ ಪರಮೇಶ್ವರನ ಅನುಗ್ರಹದಿಂದ ನಮ್ಮ ಪೂರ್ವಪುರುಷರಲ್ಲಿಗೆ ಬಂದ ಯಂತ್ರವೊಂದುಂಟು, ಅದನ್ನು ಮಂತ್ರ ಬಲದಿಂದಾಗಲೀ, ಬಾಹುಬಲದಿಂದಲಾಗಲಿ, ಭಂಗಪಡಿಸಿದರೆ ನಮ್ಮ ಕನ್ಯಾರತ್ನದ ಕರಗತವಾದ ಕುಸುಮಹಾರವು ಅಂಥವರ ಕಂಠಗತವಾ ಗುವುದು, ಎಂದೆನು. ಆ ಉಭಯಬಲಹೀನನಾದ ಸುಧನನು ನನ್ನಿಂದ ಪರಾಜಿತನಾಗಿ ಪರಾಜ್ಜಖನಾದನು, ಆದುದರಿಂದ ಈಗಲೂ ಆ ಪ್ರತಿ ಜ್ಞೆಯನ್ನು ಈ ಕುಮಾರಕಂಠೀರವನು ನೆರವೇರಿಸುವುದಾದರೆ ಬಹಳ ಉತ್ಸಾಹದಿಂದ ಸಕಲಸಂಭ್ರಮಗಳೂ ನೆರವೇರುತ್ತವೆ. ಲೋಕಹಿತ-ಓಹೋ ! ಗೊತ್ತಾಯಿತು ನಾನು ಅಸದಳಪು ರಕ್ಕೆ ಹೊರಡುವಾಗ ಇವನಿಗೆ ಇದ್ದ ಆತುರಕ್ಕೂ, ಈಗ ಇರುವ ತಾಮ ಸಕ್ಕೂ, ಬಹಳ ವ್ಯತ್ಯಾಸವು ಕಾಣಬರುತಲಿದೆ. ನಮ್ಮಲ್ಲಿ ಇವನಿಗೆ ರಾಕ್ಷಸತ್ಯಬುದ್ಧಿಯುಂಟಾಗಿರುವುದು ದಿಟ. ಇದನ್ನು ಪರಿಹರಿಸುವು ದೇ ಮೇಲು (Jಂದುಕೊಂಡು) ಎಲೈಧರಾಮರೇಂದ್ರನೇ ! ಆ ಯಂತ್ರ ವನ್ನು ಬೇಗನೆ ತರಿಸು. ನಮ್ಮ ವೀರಕುಮಾರನು ನೋಡಿ ಏನಹೇ ಳುವನೋ ನೋಡೋಣ.