ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. ೧೭೫ •••••vvvvvvvwww••••••••••• ಬೋಧ-ಕಣ್ಣ ಸನ್ನೆಯಿಂದ ಸೇವಕರಮೂಲಕವಾಗಿ ಆ ಮಹಾ ಯಂತ್ರವನ್ನು ತರಿಸಿ, ಇಗೊ, ಇದೆ, (ಎಂದು ತೋರುವನು) ದಿಗ್ಗಳ-ಈ ತಟವಟವಟುವಿನ ಕೈಗೆ ಈ ಯಂತ್ರವು ಹಬ್ಬುವು ದು ದಿಟವೆ ? ಎಂದಿದ್ದರೂ ಚಿಂತಾನುಮಣಿಯು ನನ್ನ ಕೈಸೇರತಕ್ಕೆ ವಳೇ, ಈ ಬಾಲನಿಗೆ ಅಷ್ಟು ಬಾಹುಬಲವೆಲ್ಲಿಬಂದಿತು. ಮಂತ್ರಕ ಕಿಯು ಮೊದಲೇ ಇಲ್ಲ. (ಎಂದು ಕೊಂಬನು) ಚಮತ್ಕಾರ-ಲೋಕಹಿತಮುನಿಯ ಸಂಜ್ಞೆಯನ್ನು ಗೌರವದಿಂ ದ ಸ್ವೀಕರಿಸಿ ಮುಗುಳುನಗೆಯಿಂದ ಯಂತ್ರವನ್ನು ಹಿಡಿದು ನಿಮಿಷವಾ ತದಲ್ಲಿ ಲೀಲೆಯಿಂದ ಭಂಗಪಡಿಸಿ ಮುನಿಗೆವಂದಿಸಿದನು. ಅದನ್ನು ನೋಡಿ ಆನಂದವಸುಬೋಧ ಚಂದ್ರರು ಆಶ್ಚರ್ಯ, ಸಂಭ್ರಮ, ವೈಭ ವ, ಅದ್ಭುತಾನಂದಗಳಿಂದೊಡಗೂಡಿ, ಲೋಕಹಿತವನಿಯ ಪಾದಗಳಿಗೆ ಸಾಷ್ಟಾಂಗಪಣಾಮವನ್ನು ಮಾಡಿ, ಅದುವರೆಗೂ ನಡೆದಿದ್ದ ಸಂಗತಿಯ ನ್ನೆಲ್ಲ ವಿವರಿಸಿ, ಅಜ್ಞಾನದಿಂದ ತಮಗುಂಟಾಗಿದ್ದ ಭ್ರಾಂತಿಯಮೂಲಕ ಆಚರಿಸಿದ ಅಪರಾಧಗಳನ್ನೆಲ್ಲ ಕ್ಷಮಿಸಬೇಕೆಂದು ಅಂಜಲಿ ಬದ್ಧರಾಗಿ ಬೇಡಿಕೊಳ್ಳುತ್ತಾ (ತಲೆಯನ್ನು ತಗ್ಗಿಸಿ ನಿಂತುಕೊಳ್ಳುವರು). ದ್ವಾರಪಾಲಕ-ಬೇಗನೆ ಓಡಿಬಂದು ಪ ಣಾಮಮಂಗೈದು ಬ ಡೆಯಾ ! ಬೋಧಚಂದ್ರರಾಜೇಂದ್ರನೇ ! ಅಸದಳಪುರದ ಭೂಮಿಪಾಲ ನಾದ ಅವತಾರ ವಾಹನನು, ಜಿತಾಕ್ಷ ಮುನಿಯಿಂದಲೂ, ಪತ್ನಿ ಪುತ್ರ ಪರಿವಾರದಿಂದಲೂ ಸಹಿತನಾಗಿ ಬರುತಲಿರುವನು, ಚಿತ್ರವೊ ಪ್ಪಿದಂತೆ ನಡೆಯಿಸಬಹುದು (ಎಂದು ಕೈಜೋಡಿಸಿ ನಿಲ್ಲುವನು) ಲೋಕಹಿತ-ಆಹಾ ! ಶ್ರೇಯಸ್ಸಿನಮೇಲೆ ಶ್ರೇಯಸ್ಸು, 'ಮೇ ಲು ಮೇಲನ್ನು ಹಿಂಬಾಲಿಸುವುದು, ಎಂಬುದು ಸಟೆಯಲ್ಲ, ರಾಜಪು ರೋಹಿತರೇ ! ಉಚಿತಮಾಗೆಗಳಿಂದ ಎದುರೊಂಡು ಕರೆತನ್ನಿರಿ. ಬೋಧ-(ಪುರೋಹಿತರೊಂದಿಗೆ ಹೊರಡುವನು)