ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರಚಿಂತಾಮಣಿ. ೧ vvvvvvv ಯಾಯಿತು, “ ಹುಲ್ಲಿನೆಸಳನ್ನು ಹಸೆಗೆ ಕರೆದು ಅಳಿಯನೆಂದು ಹೆಸರಿಟ್ಟರೆ ಅದಾಗಲೆ ಹುಲಿಯಾಯಿತು ” ಎಂಬ ಗಾದೆಯು ಸಟಿ ಯಲ್ಲ.” ಮೊದಲೇ ಶಿಲೆ ಮುನಿದರೆ ಕೇಳಬೇಕೆ? ಆ ಲಗ್ನ ವೆಂಬುದು ಆಯಿತೋ ಇಲ್ಲವೋ, ಒಡನೆಯೇ ಅವನಿಗೆ ಕಾವು ಬೇಕಿಲ್ಲದೇ ಹೋಯಿತು, ಕೈ ಮಿಾರಿದರೆ ಶೌರಿಯಾದರೂ ವೈರಿಯ, ಕುರಿಯಂತಿದ್ದವನು ಹರಿಯಂತಾದನು. ತಿರುಳಿಲ್ಲದ ಹುರುಡು ಮರೆ ಯುವುದೆ ? ಆದರೂ ತಿರುಕನಿಗೆ ಸಿರಿ ಬಂದಂತೆ ಅವನಿಗಾಗಲೆ ಸೇವ ಕರು ಬೇಕಾಯಿತು, ಆದರೆ ನಾವು ಮುದುಕರು ಕೈಕಟ್ಟಿಕೊಂಡು ಅವನಿಗೆ ಸೇವೆ ಮಾಡಲು ಕೈಲಾಗದು, ಆಪತ್ತಿಗಾದಾನೆಂಬ ಆಸೆ ಯಿಂದ ಅವನಿಗೆ ಆ ಹೆಣ್ಣನ್ನು ಅತ್ತದ್ದು ಈ ಸಾಡಾಯಿತು. ಶುಚಿ ರುಚಿಯಾಗಿ ಅಡಿಗೆ ಮಾಡಿಟ್ಟರೂ ಅವನಿಗೆ ಅದು ಅಶುಚಿ, ಅರುಚಿಅ ವನ ಬಿಲಕವೇ ಒಂದು ವಿಧ, ಅವನ ಬಿನ್ನಾಣವೇ ಬಂದು ಬಗೆ, ಆಬಿ ತರವೇ ಬಂದುತರ.ಆ ಒಯ್ಯಾರನೇ ಒಂದುರೀತಿ, ಒಲುಪನ್ನು ನಾ ಸುವರ್ಣಿಸಲಾರೆ, ಅಹಂಕಾರ ಟೇಂಕಾರ ಬಡಿವಾರಗಳನ್ನು ಬಣ್ಣ ಸಲಾಗದು. ಮನೆಯವರಲ್ಲಿ ಯಾರನ್ನು ಕಂಡರೂ ಸಿಡುಕು, ಹೆಂಡರ ಮುಂದೆ ಅವನಪೊಗರು, ನವನಿಧಿಗಳ ಅಧಿಪತಿಯಂತೆಯೇ ಅವನನ ಟನೆ, ತನ್ನ ಚೇಷ್ಮೆಯನ್ನು ಹೆರರನೋಡಿ ಹೀಯಾಳಿಸುವರೆಂಬ ಶಂಕೆಯೇ ಅವನಿಗಿಲ್ಲ, ಇಷ್ಟು ಮಟ್ಟಿಗೆ ತನಗೆ ಆಸರೆಯುಂಟಾ ದದ್ದು ತನ್ನ ಭಾಗೋದಯವೆಂಬ ಭಾವನೆಯು ಅವನಿಗೆ ಮರೆತು ಹೋಯಿತು. ಅವನತೀವಿಯೋ ಅಮರಾಧಿಪನಿಗೂ ಇಲ್ಲ. ನಾ ಯಿಕುನ್ನಿಗೆ ನಿಂಹದ ತೊಗಲನ್ನು ಹೊದಿಸಿ ಹರಿಯವರಿಯೆಂದರೆ ಕತ್ತೆಯು ಹತ್ತಿರಕ್ಕೆ ಬಂದಾಗ ಅದರ ಬಿತ್ತರವು ಎತ್ತರಿಸದೆ ಹೋಗುವುದೆ ? ಅವನಿಗಿರುವುದು ಮರುಹಣದಉದ್ಯೋಗ, ಅದ ನ್ಯೂ ನಮ್ಮ ಯಜಮಾನರೇ ಕಟ್ಟಿಕೊಂಡತಪ್ಪಿಗೆ ಅವರಿವರ ಕೈಕಾ